Kolar: ಕೆಸರನಹಳ್ಳಿ, ಕೇತಗಾನಹಳ್ಳಿ ಗ್ರಾ.ಪಂ.ಗಳು ಬಿಜೆಪಿಯ ವಶ: ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ

ತೀವ್ರ ಪ್ರತಿಷ್ಟೆಯ ಕಣವಾಗಿದ್ದ ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ಕುತೂಹಲ ಕೆರಳಿಸಿದ್ದ ಕೆಸರನಹಳ್ಳಿ ಹಾಗೂ ಕೇತಗಾನಹಳ್ಳಿ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎರಡೂ ಗ್ರಾಪಂಗಳು ಬಿಜೆಪಿ ವಶವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. 

BJP wins Kesaranahalli Ketaganahalli Gram Panchayat Vice President elections gvd

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಆ.10): ತೀವ್ರ ಪ್ರತಿಷ್ಟೆಯ ಕಣವಾಗಿದ್ದ ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ಕುತೂಹಲ ಕೆರಳಿಸಿದ್ದ ಕೆಸರನಹಳ್ಳಿ ಹಾಗೂ ಕೇತಗಾನಹಳ್ಳಿ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎರಡೂ ಗ್ರಾಪಂಗಳು ಬಿಜೆಪಿ ವಶವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಕೆಸರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಲಲಿತಾ ಕಪಾಲಿಶಂಕರ್ ಹಾಗೂ ಉಪಾಧ್ಯಕ್ಷರಾಗಿ ಸತ್ಯ ಗೋವಿಂದರಾಜು ರವರು ಚುನಾಯಿತರಾಗಿದ್ದಾರೆ.ಕಳೆದ ಎರಡೂ ವರೆ ವರ್ಷಗಳ ಅವಧಿಯಲ್ಲಿ ಕೆಸರನಹಳ್ಳಿ ಗ್ರಾಪಂ ಕಾಂಗ್ರೆಸ್ ವಶದಲ್ಲಿತ್ತು.

ಈ ಬಾರಿಯೂ ಕಾಂಗ್ರೆಸ್ ತನ್ನ ವಶಕ್ಕೆ ಪಡೆಯಲು ನಾನಾ ಕಸರತ್ತು ಮಾಡಿತ್ತು. ಆದರೆ ಕೊನೆಗಳಿಗೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಲಲಿತಾ ಕಪಾಲಿಶಂಖರ್ ಹಾಗೂ ಸತ್ಯ ಗೋವಿಂದರಾಜು ತಮ್ಮ ಎದುರಾಳಿಗಳಾದ ಮಮತಾ ಅಂಬರೀಶ್ ಹಾಗೂ ಪ್ರದೀತ್ರನ್ನು ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ. ಕೆಸರನಹಳ್ಳಿ ಗ್ರಾಪಂಗೆ ನೂತನವಾಗಿ ಆಯ್ಕೆಯಾಗಿರುವ ಅದ್ಯಕ್ಷರ ಪತಿ ಕಪಾಲಿಶಂಕರ್ ಪುರಸಭೆ ಸದಸ್ಯರಾದರೆ ಪತ್ನಿ ಲಲಿತಾ ಗ್ರಾಪಂ ಅಧ್ಯಕ್ಷೆಯಾಗಿರುವುದು ವಿಶೇಷವಾಗಿದೆ.  ಇದೇ ರೀತಿ ಕೇತಗಾನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸಹ ಕಾಂಗ್ರೆಸ್ ಪಾರುಪತ್ಯ ಸಾಧಿಸಲು ಮುಂದಾಗಿತ್ತು.

150 ರು. ತಲುಪಿದ್ದ ಟೊಮೆಟೋ ಬೆಲೆ 70 ರು.ಗೆ ಇಳಿಕೆ: ಗ್ರಾಹಕರು ಫುಲ್ ಖುಷ್

ಆದರೆ ಬಿಜೆಪಿ ಬೆಂಬಲಿತ 11 ಸದಸ್ಯರು ಒಂದಾಗಿದ್ದರಿಂದ ಕಾಂಗ್ರೆಸ್ಗೆ ಸೋಲು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಮುಂದಾಗದ ಕಾರಣ ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಕೆ.ವಿ.ಮಂಜುಳಾಶ್ರೀನಿವಾಸ್ ಹಾಗೂ ಉಪಾಧ್ಯಕ್ಷೆಯಾಗಿ ರಾಧಮ್ಮ ರಾಮಪ್ಪ ಅವಿರೋಧವಾಗಿ ಆಯ್ಕೆಯಾದರು.ಕೇತಗಾನಹಳ್ಳಿ ನೂತನ ಅದ್ಯಕ್ಷೆ ಮಂಜುಳ ಶ್ರೀನಿವಾಸ್ ಮಾತನಾಡಿ,ಗ್ರಾಮ ಪಂಚಾಯಿತಿ ಅದ್ಯಕ್ಷ ಉಪಾದ್ಯಕ್ಷರ ಅವಿರೋಧ ಆಯ್ಕೆಗೆ ಕಾರಣದಾದ ಪುರಸಭೆ ಮಾಜಿ ಅದ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ, ಮುಖಂಡರಾದ ಬೋಯನಹಳ್ಳಿ ಕೃಷ್ಣಪ್ಪ ಮತ್ತು ಬತ್ತಲಹಳ್ಳಿ ಮಂಜುನಾಥ್ ರವರಿಗೆ ಅಭಿನಂದನೆ ಸಲ್ಲಿಸಿದರು. 

ಸಚಿವ ಚಲುವರಾಯಸ್ವಾಮಿ ವಿರುದ್ಧ ‘ಪೇ-ಸಿಎಸ್‌’ ಅಭಿಯಾನ: ಬಿಜೆಪಿಗರ ಬಂಧನ

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್ ಕೆಸರನಹಳ್ಳಿ ಗ್ರಾಪಂ ಬಿಜೆಪಿ ಭದ್ರಕೋಟೆ, ಆದರೆ ಕಳೆದ ಎಡರೂವರೆ ವರ್ಷ ಕಾಲ ಕಾಂಗ್ರೆಸ್ ವಶವಾಗಿತ್ತು, ಈಗ ಮತ್ತೆ ಬಿಜೆಪಿ ವಶವಾಗಿದೆ. ಕೇತಗಾನಹಳ್ಳಿಯಲ್ಲೂ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಇದರಿಂದ ಮುಂದೆ ಬರುವಂತಹ ಜಿಪಂ ಹಾಗೂ ತಾಪಂ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳನ್ನು ತಂದು ಕೊಡಲು ಸಹಕಾರಿಯಾಗಲಿದೆ ಎಂದರು.

Latest Videos
Follow Us:
Download App:
  • android
  • ios