2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆದರೆ ಬಿಜೆಪಿ ಡಿಸೆಂಬರ್‌ನಲ್ಲೇ ಲೋಕಸಭೆ ಚುನಾವಣೆ ನಡೆಸಲಿದೆ. ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಎಲ್ಲಾ ಹೆಲಿಕಾಪ್ಟರ್ ಬುಕ್ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕೋಲ್ಕತಾ(ಆ.29) ಲೋಕಸಭಾ ಚುನಾವಣೆಗೆ ತಯಾರಿಗಳು ಈಗಾಗಲೇ ಆರಂಭಗೊಂಡಿದೆ. 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಬಿಜಿಪಿ ಮಣಿಸಲು ಇಂಡಿಯಾ ಒಕ್ಕೂಟ ಮೈತ್ರಿ ಮಾಡಿರುವ ವಿಪಕ್ಷಗಳು ಇದೀಗ ಲೋಕಸಭಾ ಚುನಾವಣೆ ತಯಾರಿಯಲ್ಲಿದೆ. ಆದರೆ ಬಿಜೆಪಿ ಡಿಸೆಂಬರ್ ತಿಂಗಳಲ್ಲೇ ಲೋಕಸಭಾ ಚುನಾವಣೆ ನಡೆಸಲು ನಿರ್ಧರಿಸಿದೆ. ಇದಕ್ಕಾಗಿ ಬಿಜೆಪಿ ಎಲ್ಲಾ ಹೆಲಿಕಾಪ್ಟರ್ ಬುಕ್ ಮಾಡಿದೆ. ಬೇಗನೆ ಚುನಾವಣೆ ನಡೆಸಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ ಮುಂದಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಟಿಎಂಸಿ ಯೂಥ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ಆಕ್ರಮಣಕಾರಿ ಆಡಳಿತದಿಂದ ಜನ ಬೇಸತ್ತಿದ್ದಾರೆ. 2024ರ ಮೇ ತಿಂಗಳಲ್ಲಿ ಚುನಾವಣೆ ನಡೆಸಿದರೆ ಬಿಜೆಪಿ ಮುಗ್ಗರಿಸಲಿದೆ. ಇದಕ್ಕಾಗಿ ಡಿಸೆಂಬರ್ ತಿಂಗಳಲ್ಲೇ ಚುನಾವಣೆ ನಡುಸುವುದು ಬಿಜೆಪಿ ಪ್ಲಾನ್ ಆಗಿದೆ. ಮತ್ತೆ ಬಿಜೆಪಿ ಅದಿಕಾರಕ್ಕೆ ಬಂದರೆ ದೇಶದಲ್ಲಿ ದ್ವೇಷ, ಸಂಘರ್ಷಗಳು ಹೆಚ್ಚಾಗಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಸ್ರೋ ಅಭಿನಂದಿಸಲು ಹೋಗಿ ನಗೆಪಾಟಲಿಗೀಡಾದ ಹಲವು ನಾಯಕರು: ನಾಸಾಗೆ ಅಭಿನಂದಿಸಿದ ಮಾಜಿ ಸಚಿವ
‘ಮೇನಲ್ಲಿ ನಡೆಯಬೇಕಿರಯಡಿಸೆಂಬರಲ್ಲೇ ಲೋಕಸಭೆ ಚುನಾವಣೆಗೆ ಬಿಜೆಪಿ ಯೋಜನೆ ರೂಪಿಸಿದೆ. ‘ಬಿಜೆಪಿಯವರು ದೇಶದಲ್ಲಿರುವ ಎಲ್ಲಾ ಹೆಲಿಕಾಪ್ಟರ್‌ಗಳನ್ನೂ ಚುನಾವಣಾ ಪ್ರಚಾರಕ್ಕಾಗಿ ಈಗಲೇ ಬುಕ್ ಮಾಡಿದ್ದು, 2023ರ ಡಿಸೆಂಬರ್‌ನಲ್ಲೇ ಲೋಕಸಭೆ ಚುನಾವಣೆ ನಡೆಸುವ ಸಾಧ್ಯತೆಯಿದೆ’ ಎಂದು ಮಮತಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಹೆಲಿಕಾಪ್ಟರ್‌ಗಳು ಸಿಗದಂತೆ ನೋಡಿಕೊಳ್ಳಲು ಬಿಜೆಪಿಯವರು ಎಲ್ಲಾ ಹೆಲಿಕಾಪ್ಟರ್‌ಗಳನ್ನೂ ಈಗಲೇ ಬುಕ್ ಮಾಡಿದ್ದಾರೆ. ಹೀಗಾಗಿ ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಬೇಕಾದ ಲೋಕಸಭೆ ಚುನಾವಣೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ವರ್ಷದ ಡಿಸೆಂಬರ್‌ನಲ್ಲೇ ನಡೆಸುವ ಸಾಧ್ಯತೆಯಿದೆ’ ಎಂದು ಹೇಳಿದರು.
‘ಬಿಜೆಪಿಯೇನಾದರೂ ಮೂರನೇ ಬಾರಿಯೂ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಸಂಪೂರ್ಣ ಸರ್ವಾಧಿಕಾರ ಜಾರಿಗೆ ಬರಲಿದೆ. ಕೇಸರಿ ಪಕ್ಷ ಈಗಾಗಲೇ ದೇಶವನ್ನು ಬೇರೆ ಬೇರೆ ಸಮುದಾಯಗಳ ನಡುವಿನ ಯುದ್ಧಭೂಮಿಯಾಗಿ ಪರಿವರ್ತನೆ ಮಾಡಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅವರು ಭಾರತವನ್ನು ದ್ವೇಷಿಗಳ ದೇಶವನ್ನಾಗಿ ಮಾಡುತ್ತಾರೆ’ ಎಂದೂ ಮಮತಾ ಎಚ್ಚರಿಕೆ ನೀಡಿದರು.
ಬೇರೆ ರಾಜ್ಯಗಳ ಸಿಎಂಗಳೂ ಗ್ಯಾರಂಟಿ ಮೆಚ್ಚಿದ್ದಾರೆ: ಡಿ.ಕೆ. ಶಿವಕುಮಾರ್
ಇಂಡಿಯಾ ಒಕ್ಕೂಟದಲ್ಲಿ ಪ್ರಮುಖ ಪಾತ್ರನಿರ್ವಹಿಸುತ್ತಿರುವ ಮಮತಾ ಬ್ಯಾನರ್ಜಿ ವಿರುದ್ದ ಕೆಲ ಪಕ್ಷಗಳು ತಿರುಗಿ ಬಿದ್ದಿದೆ. ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಸಮಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸಿಪಿಎಂ ನಾಯಕಿ ಬೃಂದಾ ಕಾರಟ್ ಕಿಡಿಕಾರಿದ್ದಾರೆ. ಈ ಮೂಲಕ ಇಂಡಿಯಾ ಒಕ್ಕೂಟದೊಳಗೆ ಇದೀಗ ಕಿತ್ತಾಟಗಳು ಆರಂಭಗೊಂಡಿದೆ. ವಿಪಕ್ಷ ಸಭೆಯಲ್ಲಿ ನಾವು ಸಂವಿಧಾನವನ್ನು ರಕ್ಷಣೆ ಮಾಡುವುದಾಗಿ ನಿರ್ಣಯ ಕೈಗೊಂಡೆವು. ಆದರೆ ಪಂಚಾಯತ್ ಚುನಾವಣೆ ಸಮಯದಲ್ಲಿ ಬಂಗಾಳದಲ್ಲಿ ಟಿಎಂಸಿಯ ದಬ್ಬಾಳಿಕೆ ಕಂಡುಬಂದಿತು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜತೆ ಮೈತ್ರಿ ಆಗಬೇಕೆಂದರೆ ನಮ್ಮ ನಾಯಕರ ಜತೆ ಮಾತನಾಡಬೇಕು. ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುವ ಮೂಲಕ ಸಂವಿಧಾನ ರಕ್ಷಿಸಲು ಸಾಧ್ಯವಿಲ್ಲ’ ಎಂದರು.
