ಇಸ್ರೋ ಅಭಿನಂದಿಸಲು ಹೋಗಿ ನಗೆಪಾಟಲಿಗೀಡಾದ ಹಲವು ನಾಯಕರು: ನಾಸಾಗೆ ಅಭಿನಂದಿಸಿದ ಮಾಜಿ ಸಚಿವ
ಇಸ್ರೋ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಅಭಿನಂದಿಸಲು ಹೋಗಿ ದೇಶದ ಕೆಲ ರಾಜಕೀಯ ನಾಯಕರು ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದಾರೆ.
ನವದೆಹಲಿ: ಇಸ್ರೋ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಅಭಿನಂದಿಸಲು ಹೋಗಿ ದೇಶದ ಕೆಲ ರಾಜಕೀಯ ನಾಯಕರು ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee), ಬಿಹಾರದ ಮಾಜಿ ಸಚಿವ ಶಕ್ತಿ ಸಿಂಗ್ ಯಾದವ್, ಉತ್ತರಪ್ರದೇಶದ ಎಸ್‌ಬಿಎಸ್‌ಪಿ ಪಕ್ಷದ ಮುಖಂಡ ಓಂಪ್ರಕಾಶ ರಾಜಭರ್ ಅವರೇ ನಗೆಪಾಟಲಿಗೆ ಈಡಾದವರು.
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇಸ್ರೋವನ್ನು ಅಭಿನಂದಿಸುವ ಭರದಲ್ಲಿ, ಚಂದ್ರನ ಅಂಗಳಕ್ಕೆ ಮೊದಲಿಗೆ ಗಗನಯಾನಿ ರಾಕೇಶ್ ಶರ್ಮ (Rakesh Sharma) ಹೋಗಿದ್ದರು ಎನ್ನುವ ಬದಲಿಗ ರಾಕೇಶ್ ರೋಷನ್ ಎಂದಿದ್ದಾರೆ. ರಾಕೇಶ್ ರೋಷನ್ ಅವರು ನಟ ಹೃತಿಕ್ ರೋಷನ್ (Hrithik Roshan) ಅವರ ತಂದೆ. ಜಮತ್ತೊಂದೆಡೆ, ಬಿಹಾರದ ಮಾಜಿ ಸಚಿವ ಶಕ್ತಿ ಸಿಂಗ್ ಯಾದವ್ (Shakti Singh Yadav), ‘ಚಂದ್ರಯಾನದ ಯಶಸ್ವಿಗೆ ನಾನು ನಾಸಾವನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
Chandrayaan-3 Updates: ಚಂದ್ರನ ಕಕ್ಷೆಯಲ್ಲಿ ಚಂದ್ರಯಾನ-2 ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್ ಲ್ಯಾಂಡರ್!
ಇತ್ತ ಉತ್ತರ ಪ್ರದೇಶದ ಎಸ್‌ಬಿಎಸ್‌ಪಿ ಪಕ್ಷದ ಮುಖಂಡ ಓಂಪ್ರಕಾಶ ರಾಜಭರ್ ಅಚರು (Omprakash Rajbhar Acharu) ಪತ್ರಕರ್ತರೊಂದಿಗಿನಿ ಮಾತಿನ ಅವಸರದಲ್ಲಿ ‘ಭೂಮಿಯ ಮೇಲೆ ಚಂದ್ರಯಾನ-3 ನೌಕೆಯ ಯಶಸ್ವಿ ಲ್ಯಾಂಡಿಂಗ್ ಅನ್ನು ಎಲ್ಲರೂ ಸ್ವಾಗತಿಸಬೇಕು’ ಎಂದಿದ್ದಾರೆ. ಇವರ ಈ ನುಡಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ.