ಬೇರೆ ರಾಜ್ಯಗಳ ಸಿಎಂಗಳೂ ಗ್ಯಾರಂಟಿ ಮೆಚ್ಚಿದ್ದಾರೆ: ಡಿ.ಕೆ. ಶಿವಕುಮಾರ್‌

371 (ಜೆ) ಕಲಂ ಅನ್ನು ಜಾರಿಗೆ ತಂದು ಮಲ್ಲಿಕಾರ್ಜುನ ಖರ್ಗೆಯವರು ಈ ಭಾಗದಲ್ಲಿ ಜ್ಯೋತಿ ಬೆಳಗಿಸಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷ ರಾಜ್ಯಾದ್ಯಂತ ‘ಗೃಹಜ್ಯೋತಿ’ ಯೋಜನೆ ಜಾರಿಗೊಳಿಸುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್‌ 

CMs of Other States Also Appreciated the Congress Guarantee Says DCM DK Shivakumar grg

ಕಲಬುರಗಿ(ಆ.06):  ನಮ್ಮ ಸರ್ಕಾರದ ಗ್ಯಾರಂಟಿಗಳು ಬೇರೆ ರಾಜ್ಯದ ಸಿಎಂಗಳ ಮೆಚ್ಚುಗೆಗೆ ಪಾತ್ರವಾಗಿವೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ನಮ್ಮ ತರಹದ ಯೋಜನೆಗಳನ್ನು ಜಾರಿಗೆ ತರ​ಲು ಒತ್ತಡ ಬರುತ್ತಿದೆಯಂತೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದಲ್ಲಿ ಶನಿವಾರ ‘ಗೃಹಜ್ಯೋತಿ’ ಯೋಜನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 371 (ಜೆ) ಕಲಂ ಅನ್ನು ಜಾರಿಗೆ ತಂದು ಮಲ್ಲಿಕಾರ್ಜುನ ಖರ್ಗೆಯವರು ಈ ಭಾಗದಲ್ಲಿ ಜ್ಯೋತಿ ಬೆಳಗಿಸಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷ ರಾಜ್ಯಾದ್ಯಂತ ‘ಗೃಹಜ್ಯೋತಿ’ ಯೋಜನೆ ಜಾರಿಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ 4ನೇ ಗ್ಯಾರಂಟಿಗೆ ಕಲಬುರಗಿಯಲ್ಲಿ ಅಧಿಕೃತ ಚಾಲನೆ: ಗೃಹಜ್ಯೋತಿ ಅರ್ಜಿಗೆ ನೋ ಡೆಡ್‌ಲೈನ್

ಬೆಂಗಳೂರಿನಲ್ಲಿ ನಡೆದ ‘ನಾಯಕಿ’ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿಯವರು ಗೃಹಿಣಿಯರಿಗೆ ಮಾಸಿಕ ತಲಾ . 2,000 ನೀಡುವ ಕುರಿತು ಗ್ಯಾರಂಟಿ ನೀಡಿದ್ದರು. ಆ ಗ್ಯಾರಂಟಿಯನ್ನು ಕೂಡ ಜಾರಿಗೊಳಿಸುತ್ತೇವೆ. ಈಗಾಗಲೇ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳು ಜಾರಿಗೊಂಡಿವೆ. ನಮ್ಮ ಸರ್ಕಾರದ ಗ್ಯಾರಂಟಿಗಳು ಬೇರೆ ರಾಜ್ಯದ ಸಿಎಂಗಳ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.

Latest Videos
Follow Us:
Download App:
  • android
  • ios