ಬೆಂಗಳೂರು, (ಮಾ.06): ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮ ನಡೆದಿದ್ದು, ಕಮಲ್​​ನಾಥ್ ಸರ್ಕಾರದ ವಿರುದ್ಧ ಅಪರೇಷನ್​​ ಕಮಲ ಆರಂಭವಾಗಿದೆ. ಕೈ ಶಾಸಕರನ್ನು ತನ್ನ ತಕ್ಕೆಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದು ಮುಖ್ಯಮಂತ್ರಿ ಕಮಲ್‌ ನಾಥ್ ಸರ್ಕಾರವನ್ನು ಬೀಳಿಸುವ ತಂತ್ರ ನಡೆದಿದೆಯೇ? ಎಂಬ ಅನುಮಾನ ಮೂಡಿದೆ.

 ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಬೀಳಲು ಆಪರೇಷನ್ ಕಮಲದ ಮಾಸ್ಟರ್ ಪ್ಲಾನ್ ಮಾಡಿದ್ದ ಬಿಜೆಪಿ ಹೈಕಮಾಂಡ್ ನಾಯಕರು, ಈಗ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನ ಉರುಳಿಸಲು ಅದೇ ರೀತಿಯ ತಂತ್ರ ಹೆಣೆದಿದ್ದಾರೆ. ಕರ್ನಾಟಕ ಮಾದರಿಯಲ್ಲೇ ಮಧ್ಯಪ್ರದೇಶದಲ್ಲೂ ಆಪರೇಷನ್​ ಕಮಲ ಮಾಡಲಾಗ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ರಾತ್ರೋ ರಾತ್ರಿ ರೆಸಾರ್ಟ್ ಸೇರಿದ ಕೈ ಶಾಸಕರು: ಆಪರೇಷನ್ ಕಮಲಕ್ಕೆ ಸಿಎಂ ಗಢಗಢ!

ಸದ್ಯ ಮಧ್ಯಪ್ರದೇಶದ ಕೆಲ ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರನ್ನ ಬೆಂಗಳೂರಿಗೆ ಕರೆತರಲಾಗಿದ್ದು, ಬೆಂಗಳೂರಿನ ವೈಟ್ ಫೀಲ್ಡ್ ಹೊಟೇಲೊಂದರಲ್ಲಿ ಬೀಡುಬಿಟ್ಟಿದ್ದಾರೆ. ಕರ್ನಾಟಕ ಕಾಂಗ್ರೆಸ್ ಶಾಸಕರನ್ನ ಮುಂಬೈನಲ್ಲಿ ಹೇಗೆ ರಕ್ಷಣೆ ನೀಡಲಾಗುತ್ತಿತ್ತೋ, ಅದರೇ ತರ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರಿಗೆ ಕರ್ನಾಟಕ ಬಿಜೆಪಿ ನಾಯಕರು ರಕ್ಷಣೆ ನೀಡುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಉಸ್ತುವಾರಿವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಲು ಲಿಂಬಾವಳಿ  ಎಂದು ಹೇಳಲಾಗಿತ್ತು. ಇದೀಗ ಮಧ್ಯಪ್ರದೇಶ ಶಾಸಕರ ಜವಾಬ್ದಾರಿ ಕೂಡ ಲಿಂಬಾವಳಿ ಹೆಗಲಿಗೆ ವಹಿಸಲಾಗಿದೆ. ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಂತೆ, ಮಧ್ಯಪ್ರದೇಶದಲ್ಲೂ ಕೈ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆಗೆ ಸಿದ್ಧವಾಗಿದೆ. ರಾಜ್ಯಸಭಾ ಚುನಾವಣೆ ಮುನ್ನವೇ ಬಿಜೆಪಿ, ಅಲ್ಲಿನ ಸರ್ಕಾರ ಬೀಳಿಸಲು ತಂತ್ರಗಾರಿಕೆ ರೂಪಿಸಿದೆ ಎನ್ನಲಾಗಿದೆ.

ಶಾಸಕರಾದ ಸುರೇಂದ್ರ ಸಿಂಗ್ ಶೇರ್, ರಘುರಾಜ್ ಕನ್ಸಾನಾ, ಹರದೀಪ್ ಸಿಂಗ್ ಡುಂಗಾ ಹಾಗೂ ಬಿಸಾಹುಲ್ ಲಾಲ್ ಸಿಂಗ್ ಎರಡು ದಿನಗಳ ಕಾಲ ನಗರದ ಯುಬಿ ಸಿಟಿಯಲ್ಲಿ ತಂಗಿದ್ದರು. ಇದೀಗ ಕೇಂದ್ರ ಬಿಜೆಪಿ ನಾಯಕರ ಅಣತಿಯಂತೆ ಅವರನ್ನ ಬಿಜೆಪಿ ನಾಯಕರು ಮಹದೇವಪುರದ ಓಕ್ ವುಡ್ ರೆಸಾರ್ಟ್​​ನಲ್ಲಿ ಇರಿಸಿದ್ದಾರೆ ಎಂದು ತಿಳಿದುಬಂದಿದ್ದು, ಸದ್ಯ ಓಕ್ ವುಡ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಕಾಂಗ್ರೆಸ್ ಶಾಸಕ ರಾಜೀನಾಮೆ: ಕಮಲ್ ಸರ್ಕಾರಕ್ಕೆ ಸಂಕಷ್ಟ!

ಕರ್ನಾಟಕದ ರೀತಿಯಲ್ಲಿ ಮಧ್ಯಪ್ರದೇಶದಲ್ಲಿ ಹಂತ-ಹಂತವಾಗಿ ಶಾಸಕರುಗಳನ್ನ ರಾಜೀನಾಮೆ ಕೊಡಿಸುವ ಪ್ಲಾನ್ ಬಿಜೆಪಿಯದ್ದಾಗಿದೆ. ಈಗಾಗಲೇ ಹರ್ದೀಪ್ ಸಿಂಗ್ ದಂಗ್ ರಾಜೀನಾಮೆ ನೀಡಿದ್ದು, ಹಂತ-ಹಂತವಾಗಿ ಇನ್ನಷ್ಟು ಶಾಸಕರುಗಳು ರಿಸೈನ್ ಮಾಡುವ ಎಲ್ಲಾ ಸಾಧ್ಯತೆಗಳುವೆ.

ಕರ್ನಾಟಕದಲ್ಲಿ  ಹೇಗಾಗಿತ್ತು..?
ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಅಂದ್ರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಶಾಸಕರುಗಳನ್ನ ಸೆಳೆದು 17 ಜನರಿಂದ ರಾಜೀನಾಮೆ ಕೊಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮ,ತ್ತು ಜೆಡಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು. ಬಳಿಕ ರಾಜೀನಾಮೆ ನೀಡಿದ್ದ ಶಾಸಕರುಗಳು ಬೈ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೆಲವರು ಗೆಲುವು ಸಾಧಿಸಿದ್ದು, ಇನ್ನು ಕೆಲವರು ಸೋಲುಕಂಡರು. 

ಆದ್ರೂ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ  ಬಿಜೆಪಿ ಬಹುಮತದೊಂದಿಗೆ ಸರ್ಕಾರ ಉಳಿಸಿಕೊಂಡಿತ್ತು. ಇದೇ ರೀತಿ ಮಧ್ಯಪ್ರದೇಶದಲ್ಲಿ ನಡೆಸಲು ಬಿಜೆಪಿ ಪ್ಲಾನ್ ನಡೆಸಿದೆ.