Asianet Suvarna News Asianet Suvarna News

ಜನಾರ್ದನ ರೆಡ್ಡಿಗೆ ಬೆಂಬಲ: ಬಿಜೆಪಿಯಲ್ಲಿ ಮುಂದುವರೆದ ರಾಜೀನಾಮೆ ಪರ್ವ..!

ಜನಾರ್ದನ ರೆಡ್ಡಿ ಅವರನ್ನ ಬಿಜೆಪಿ ಪಕ್ಷ ನಡೆಸಿಕೊಂಡ ರೀತಿ ಸರಿಯಿಲ್ಲ ಅಂತ ಬಿಜೆಪಿಗೆ ಗುಡ್‌ಬೈ ಹೇಳಿದ ಮೊಹಮ್ಮದ್ ಖದೀರ್. ಇನ್ನಷ್ಟು ಬಿಜೆಪಿ ಮುಖಂಡರು ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ. 

BJP Mandal Yuva Morcha President Mohammed Khadir Resign in Ballari grg
Author
First Published Dec 30, 2022, 11:58 AM IST

ಬಳ್ಳಾರಿ(ಡಿ.30):  ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಸಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಹೌದು, ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ ನೀಡಿದ್ದಾರೆ. ನಗರದ ಕೌಲ್ ಬಜಾರ್ ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಮೊಹಮ್ಮದ್ ಖದೀರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮೊಹಮ್ಮದ್ ಖದೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಜನಾರ್ದನ ರೆಡ್ಡಿ ಅವರನ್ನ ಬಿಜೆಪಿ ಪಕ್ಷ ನಡೆಸಿಕೊಂಡ ರೀತಿ ಸರಿಯಿಲ್ಲ ಅಂತ ಬಿಜೆಪಿಗೆ ಮೊಹಮ್ಮದ್ ಖದೀರ್ ಗುಡ್‌ಬೈ ಹೇಳಿದ್ದಾರೆ. ಇನ್ನಷ್ಟು ಬಿಜೆಪಿ ಮುಖಂಡರು ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ ಅಂತ ತಿಳಿದು ಬಂದಿದೆ. 

BJP Mandal Yuva Morcha President Mohammed Khadir Resign in Ballari grg BJP Mandal Yuva Morcha President Mohammed Khadir Resign in Ballari grg

ಸಿಂಧನೂರಿನಲ್ಲಿ ಜ.6ರಂದು,‌ ಬಳ್ಳಾರಿಯಲ್ಲಿ ಜ.11ರಂದು ಜನಾರ್ದನ ರೆಡ್ಡಿ ಬೃಹತ್ ಸಮಾವೇಶ

ದಿನಕ್ಕೊಂದು ಬೆಳವಣಿಗೆ, ದಿನಕ್ಕೊಬ್ಬ ಸ್ಥಳೀಯ ನಾಯಕರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ. ಈ ಮಧ್ಯೆ ಕಲ್ಯಾಣ ಕರ್ನಾಟಕದ ಮಧ್ಯೆ ಭಾಗವಾದ ಸಿಂಧನೂರಿನಲ್ಲಿ‌ ಜನವರಿ 6 ಮತ್ತು‌ ಗಾಲಿ ಜನಾರ್ದನ ರೆಡ್ಡಿ ಹುಟ್ಟು ಹಬ್ಬ ಜನವರಿ‌ 11ನೇ ತಾರೀಖು ಬಳ್ಳಾರಿಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಇದ್ದು,  ಸದ್ಯ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷದ ಸದ್ಯದ ಬೆಳವಣಿಗೆಯ ಸ್ಥಿತಿಗತಿ.  ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ ಇದೀಗ ತಮ್ಮ ಹೊಸ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಗೊಳಿಸೋದರ ಜೊತೆಗೆ ತಮ್ಮ ಹಳೇಯ ಗೆಳೆಯರನ್ನು  ಮತ್ತು ಬಿಜೆಪಿ ನಾಯಕರನ್ನು  ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳವ ಕೆಲಸಕ್ಕೆ ಕೈ ಹಾಕಿದ್ದಾರೆ.

ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಫುಲ್ ಆಕ್ಟಿವ್, ಬಿಜೆಪಿ ನಾಯಕರು ಜನಾರ್ದನ ರೆಡ್ಡಿ ಪಕ್ಷಕ್ಕೆ ಸೇರ್ಪಡೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಲೋಗೋ, ಧ್ವಜ ಮತ್ತು ಶಾಲು ಲಾಂಚ್

ಇನ್ನೂ ಕಲ್ಯಾಣ ಕರ್ನಾಟಕದ ಮದ್ಯೆ ಭಾಗವಾದ ಸಿಂಧನೂರಿನಲ್ಲಿ ಇದೀಗ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರೋ ಗಾಲಿ ಜನಾರ್ದನ ರೆಡ್ಡಿ , ಜನವರಿ 6ರಂದು ಸಿಂಧನೂರಿನಲ್ಲಿ ಬಹು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದ್ದಾರೆ. ಈ ಮೊದಲು ಜನಾರ್ದನ ರೆಡ್ಡಿ ಹುಟ್ಟು ಹಬ್ಬದ ಹಿನ್ನೆಲೆ ಜನವರಿ 11 ರಂದು  ಬಳ್ಳಾರಿಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶ ಮಾಡಲು ಯೋಜನೆ ರೂಪಿಸಲಾಗಿತ್ತು.

ಆದ್ರೆ ಬಳ್ಳಾರಿ ಸಮಾವೇಶಕ್ಕೂ ಮುನ್ನ ಇದೀಗ ಸಿಂಧನೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪ್ರಮುಖ  ಕಾರಣ ಸಿಂಧನೂರಿನ  ಕಾರ್ಯಕ್ರಮದಲ್ಲಿ ಪಕ್ಷದ ಶಾಲು, ಲೋಗೋ, ಧ್ವಜವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಸುದ್ದಿ ಹಬ್ಬಿದೆ.  ಬಳ್ಳಾರಿಯ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ನಾಯಕರು ಬಿಜೆಪಿ ಬಿಟ್ಟು ಹೊಸ ಪಕ್ಷ ಸೇರಲಿದ್ದಾರಂತೆ ಹೀಗಾಗಿ ಪಕ್ಷ ಸೇರ್ಪಡೆ ವೇಳೆ ಯಾವುದೇ ಲೋಗೋ, ಧ್ವಜ ಅಥವಾ ಶಾಲು ಇಲ್ಲದೇ ಇದ್ರೆ ಸರಿಯಾಗಿ ಕಾಣೋದಿಲ್ಲವೆಂದು ಈ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.

ಬಳ್ಳಾರಿ-ವಿಜಯನಗರ : ಎಲ್ಲ ಕ್ಷೇತ್ರಗಳಲ್ಲಿ ರೆಡ್ಡಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ!

ಜನಾರ್ದನ ರೆಡ್ಡಿ ಆಪ್ತ ನೆಕ್ಕಂಟಿ ಮಲ್ಲಿಕಾರ್ಜುನ ನೇತೃತ್ವದಲ್ಲಿ ಸಮಾವೇಶ

ಲೋಗೋ ಲಾಂಚ್ ಹೆಸರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆಯಾದ್ರೂ ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಯ ಸಾವಿರಾರು ಜನರು ಭಾಗಿಯಾಗಲಿದ್ದಾರೆ. ಅಲ್ಲದೇ ಸ್ವತಃ ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಸ್ಪರ್ಧೆ ಮಾಡೋ ಹಿನ್ನಲೆ ಸಿಂಧನೂರು, ಮಾನ್ವಿ, ಮಸ್ಕಿ, ಕೊಪ್ಪಳದಲ್ಲಿ ಪಕ್ಷದ ವರ್ಚಸ್ಸು ಮತ್ತು ಪ್ರಭಾವ ಕಾಣಲಿ ಎಂದು ಸಿಂಧನೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಇನ್ನೂ ಈ ಹಿಂದೆ ಶ್ರೀರಾಮುಲು ಮತ್ತು‌ ಜನಾರ್ದನ ರೆಡ್ಡಿ ಜೊತೆಗೆ ಗುರುತಿಸಿಕೊಂಡಿರೋ ಉದ್ಯಮಿ ನೆಕ್ಕಂಟಿ‌ ಮಲ್ಲಿಕಾರ್ಜುನ ಇದೀಗ ಪೂರ್ಣಪ್ರಮಾಣದಲ್ಲಿ ಜನಾರ್ದನ ರೆಡ್ಡಿ ಗುಂಪಿಗೆ ಸೇರಿದ ಹಿನ್ನಲೆ ಸಿಂಧನೂರಿಗೆ ಅವರೇ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಹೀಗಾಗಿ ಸಿಂಧನೂರು ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ಮಲ್ಲಿಕಾರ್ಜುನ ಹೊತ್ತುಕೊಂಡಿದ್ದಾರೆ. ಈಗಾಗಲೇ ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಮತ್ತು ಹಾಲಿ ಬಳ್ಳಾರಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಮ್ಮೂರು ಶೇಖರ್, ಮಾಜಿ ಕಾರ್ಪೋರೆಟರ್ ಚಂದ್ರ ಸೇರಿದಂತೆ ಕೆಲವರು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Follow Us:
Download App:
  • android
  • ios