ಕಾಂಗ್ರೆಸ್ಸಿಗರು ಮೋದಿಯವರನ್ನು ಏಕವಚನದಲ್ಲಿ ಬೈದಿಲ್ವ: ಕೋಟ ಶ್ರೀನಿವಾಸ್ ಪೂಜಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರನ್ನು ಎಷ್ಟು ಬಾರಿ ಏಕವಚನದಲ್ಲಿ ಬೈದಿಲ್ಲ ? ಅದು ತಪ್ಪಲ್ವಾ ? ಕಾಂಗ್ರೆಸ್ ಮುಖಂಡರೇ, ಚರ್ಚೆ ಏಕಮುಖವಾಗಿ ಸಾಗಬಾರದು. 
 

BJP Leader Kota Srinivas Poojary Slams On Congress Govt At Udupi gvd

ಉಡುಪಿ (ಜ.17): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರನ್ನು ಎಷ್ಟು ಬಾರಿ ಏಕವಚನದಲ್ಲಿ ಬೈದಿಲ್ಲ ? ಅದು ತಪ್ಪಲ್ವಾ ? ಕಾಂಗ್ರೆಸ್ ಮುಖಂಡರೇ, ಚರ್ಚೆ ಏಕಮುಖವಾಗಿ ಸಾಗಬಾರದು. ಏಕವಚನದಲ್ಲಿ ಯಾರನ್ನೂ ಬೈಯ್ಯಬಾರದು ಎಂದರೆ ಮೋದಿಯನ್ನು ಏಕವಚನದಲ್ಲಿ ಬೈದ ಸಿದ್ದರಾಮಯ್ಯ ನಿಲುವನ್ನು ಖಂಡಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನ ಮಾತನಾಡಿದ ಬಗ್ಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಮರುಪ್ರತಿಕ್ರಿಯೆ ನೀಡಿದರು. ಎಲ್ಲ ರಾಜಕಾರಣಿಗಳಿಗೂ ಒಂದೇ ಮಾನದಂಡ ಇರಲಿ, ಆಗ ಮಾತ್ರ ನೀವು ಮಾಡಿದ ಖಂಡನೆಗಳಿಗೆ ಅರ್ಥ ಬರುತ್ತದೆ. ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ‘ಇವ ಗನ್ ತೆಗೆದುಕೊಂಡು ಹೋಗಿದ್ನಾ?’ ಎಂದು ಕಾಂಗ್ರೆಸ್ ನಾಯಕರು ಮೋದಿಯ ಬಗ್ಗೆ ಮಾತನಾಡಿದ್ದರು, ಇದು ಎಷ್ಟು ಸರಿ ಎಂದು ಕೋಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿ.ಎಲ್‌.ಸಂತೋಷ್ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಪ್ರೇರಣೆ: ಆರ್.ಅಶೋಕ್

ಪರ್ಯಾಯಕ್ಕೆ ಹಣ ನೀಡಿಲ್ಲ: ಉಡುಪಿಯಲ್ಲಿ ನಡೆಯುವ ಪರ್ಯಾಯ ಸರ್ವಜನರು ಆಚರಿಸುವ ಹಬ್ಬವಾಗಿದೆ. ಈ ಹಿಂದಿನ ಯಾವುದೇ ಸರ್ಕಾರ, ಯಾರೇ ಮಂತ್ರಿ ಇದ್ದರೂ ಅನುದಾನ ಬಿಡುಗಡೆ ಮಾಡಿದ್ದರು. ಎಷ್ಟು ಅನುದಾನ ಕೊಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟ ವಿಷಯ, ಆದರೇ ಕಾಂಗ್ರೆಸ್ ಸರ್ಕಾರ ಅನುದಾನವನ್ನೇ ನೀಡಿಲ್ಲ ಎಂದು ಅವರು ಆರೋಪಿಸಿದರು.

ಬರ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಬೇಡ: ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರವನ್ನ ದೂರುತ್ತಿದೆ. ಅದರ ಬದಲು ರಾಜ್ಯ ಸರ್ಕಾರವೇ 10 ಸಾವಿರ ಕೋಟಿ ರು. ಘೋಷಿಸಲಿ, ಕೇಂದ್ರ ಸರ್ಕಾರದ ಜತೆ ನಾವು ನೀವು ಒಟ್ಟಾಗಿ ಮಾತನಾಡೋಣ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವಕರು ಕಾಂಗ್ರೆಸ್‌ಗೆ ಬುದ್ಧಿಮಾತು ಹೇಳಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

7ನೇ ವೇತನ ಆಯೋಗ ವರದಿ ಬಳಿಕ ನೌಕರರ ವೇತನ ಪರಿಷ್ಕರಣೆ ತೀರ್ಮಾನ: ಸಿದ್ದರಾಮಯ್ಯ

ಯುವನಿಧಿ ಯೋಜನೆಯಲ್ಲಿ ಪದವಿ ಪಡೆದ ಎಲ್ಲ ನಿರುದ್ಯೋಗಿಗಳಿಗೆ ಹಣ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ 2022-23ರಲ್ಲಿ ಪದವಿ ಪೂರೈಸಿದ ನಿರುದ್ಯೋಗಿಗಳಿಗೆ ಮಾತ್ರ ಎನ್ನುತ್ತಿದ್ದಾರೆ. ಕರ್ನಾಟಕ ಸರ್ಕಾರ ಆಡಳಿತದಲ್ಲಿ ವಿಫಲವಾಗಿ ಅಸಹಾಯಕವಾಗಿದೆ. ಬರ ನಿರ್ವಹಣೆ,‌ ಕಾನೂನು ಸುವ್ಯವಸ್ಥೆ ಎಲ್ಲ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವ ವಿಚಾರದಲ್ಲಿ ಸರ್ಕಾರ ಮುಳುಗಿದೆ ಎಂದರು.

Latest Videos
Follow Us:
Download App:
  • android
  • ios