BJP state incharge 15 ರಾಜ್ಯಗಳಿಗೆ ಉಸ್ತುವಾರಿ ನಾಯಕರ ಘೋಷಿಸಿದ ಬಿಜೆಪಿ, ಮಾಜಿ ಸಿಎಂಗೆ ಮಹತ್ತರ ಜವಾಬ್ದಾರಿ!

ಗುಜರಾತ್, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಮುಂದಿನ ವರ್ಷ ಕರ್ನಾಟಕದಲ್ಲೂ ಚುನಾವಣೆ ನಡೆಯಲಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ 15 ರಾಜ್ಯಗಳಿಗೆ ಹೊಸ ಉಸ್ತುವಾರಿ ನಾಯಕರನ್ನು ಹೈಕಮಾಂಡ್ ಘೋಷಿಸಿದೆ.

BJP high command appoint new team of party in charges and co in charges for states ckm

ನವದೆಹಲಿ(ಸೆ.09): ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಸಮಾವೇಶ, ರ್ಯಾಲಿ ಹಮ್ಮಿಕೊಳ್ಳುತ್ತಿದೆ. ಇದರ ನಡುವೆ ಬಿಜೆಪಿ ರಾಜ್ಯಗಳಲ್ಲಿ ಅಧಿಕಾರ ಗಟ್ಟಿಗೊಳಿಸಲು ಹಾಗೂ ಹೊಸ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಮುಂದಾಗಿದೆ. ಇದಕ್ಕಾಗಿ 15 ರಾಜ್ಯಗಳಿಗೆ ಹೊಸ ಉಸ್ತುವಾರಿಗಳನ್ನು ಘೋಷಿಸಿದೆ.  ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ಪಂಜಾಬ್ ರಾಜ್ಯ ಉಸ್ತುವಾರಿ ನೀಡಿದರೆ,  ತ್ರಿಪುರ ಮಾಜಿ ಸಿಎಂ ಬಿಪ್ಲಬ್ ದೇಬ್‌ಗೆ ಹರ್ಯಾಣದ ಉಸ್ತುವಾರಿ ನೀಡಲಾಗಿದೆ. ಬಿಹಾರದ ಮಾಜಿ ಸಚಿವ ಮಂಗಲ್ ಪಾಂಡೆ ಇನ್ಮುಂದೆ ಪಶ್ಚಿಮ ಬಂಗಾಳದ ಉಸ್ತುವಾರಿ ನಾಯಕನಾಗಿ ಕಾರ್ಯನಿರ್ವಹಿಸಲಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಈಶಾನ್ಯ ರಾಜ್ಯಗಳ ಸಂಯೋಜಕನಾಗಿ ನೇಮಕಗೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 15 ರಾಜ್ಯಗಳ ಉಸ್ತುವಾರಿ ನಾಯಕರ ಪಟ್ಟಿ ಘೋಷಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಅವರಿಗೆ ಕೇರಳದ ಉಸ್ತುವಾರಿ ನೀಡಲಾಗಿದೆ. ಇನ್ನು ಮಧ್ಯಪ್ರದೇಶದ ಉಸ್ತುವಾರಿ ಸಚಿವ ವಿ ಮುರಳೀದರ್ ರಾವ್ ಅವರಿಗೆ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಮುಂಡೆ ಹಾಗೂ ಲೋಕಸಭಾ ಸಂಸದ ರಾಮಶಂಕರ್ ಕಟಾರಿಯ ಅವರನ್ನು ಸಹಾಯಕ ಸಂಯೋಜಕನಾಗಿ ನೇಮಕಗೊಳಿಸಲಾಗಿದೆ. ಇನ್ನು  ಸಂಸದ ಅರುಣ್ ಸಿಂಗ್ ಅವರನ್ನು ರಾಜಸ್ಥಾನದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. 

ಪ್ರಶಾಂತ್‌ ಕಿಶೋರ್‌ ಗುಪ್ತವಾಗಿ ಬಿಜೆಪಿಗೆ ಸಹಾಯ ಮಾಡುತ್ತಿರಬಹುದು: ನಿತೀಶ್‌ ಕುಮಾರ್‌

ತ್ರಿಪುರಾಗೆ ಸಂಸದ ಮಹೇಶ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಲಕ್ಷದ್ವೀಪಕ್ಕೆ ರಾಧಾ ಮೋಹನ್ ಅಗರ್ವಾಲ್, ಜಾರ್ಖಂಡ್‌ಗೆ ಲಕ್ಷ್ಮೀ ಬಾಜಪೈ, ವಿನೋದ್ ತಾವಡೆಯನ್ನು ಬಿಹಾರ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.   

144 ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆಗೆ ನಡ್ಡಾ, ಶಾ ಸಭೆ
2024ರ ಮಹಾ ಚುನಾವಣೆಗೆ ಈಗಲೇ ಬಿಜೆಪಿ ತಯಾರಿ ಆರಂಭಿಸಿದೆ. ಪಕ್ಷವು ದುರ್ಬಲ ಸಂಘಟನೆ ಹೊಂದಿರುವ 144 ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಬಲಪಡಿಸುವ ಉದ್ದೇಶದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್‌ ಶಾ ಅವರು ಮಂಗಳವಾರ ಹಿರಿಯ ನಾಯಕರ ಜತೆ ಸಭೆ ನಡೆಸಿದ್ದಾರೆ.

ಈ 144 ಕ್ಷೇತ್ರಗಳ ಪೈಕಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 2 ಹಾಗೂ 3ನೇ ಸ್ಥಾನ ಪಡೆದಿದ್ದ ಕ್ಷೇತ್ರಗಳೂ ಸೇರಿವೆ. ಈ ಹಿಂದೆಯೇ ಇಲ್ಲಿ ಪಕ್ಷದ ಬಲವರ್ಧನೆಗೆ ಒಬ್ಬ ಕೇಂದ್ರ ಸಚಿವರನ್ನು ಉಸ್ತುವಾರಿ ಎಂದು ಹೈಕಮಾಂಡ್‌ ನೇಮಿಸಿತ್ತು. ಇದಲ್ಲದೆ, ಬಂಗಾಳ, ತೆಲಂಗಾಣ, ಮಹಾರಾಷ್ಟ್ರ, ಪಂಜಾಬ್‌ ಹಾಗೂ ಉತ್ತರ ಪ್ರದೇಶ ಸೇರಿ ಹಲವು ಕಡೆ ಇರುವ ಈ ಕ್ಷೇತ್ರಗಳಿಗೆ ಕೆಲವು ಕೇಂದ್ರ ಸಚಿವರನ್ನು ಕಳಿಸಿ ವಸ್ತುಸ್ಥಿತಿ ಅಧ್ಯಯನ ನಡೆಸಿತ್ತು. ಮುಂಬರುವ ಚುನಾವಣೆಗೆ ಪ್ರಬಲ ಅಭ್ಯರ್ಥಿಯನ್ನು ಗುರುತಿಸಲು ಸೂಚಿಸಿತ್ತು.

Amit Shah ಮುಂಬೈ ಭೇಟಿ ವೇಳೆ ಭದ್ರತಾ ಲೋಪ: ಗೃಹ ಸಚಿವರ ಸುತ್ತ ಓಡಾಡ್ತಿದ್ದ ಆರೋಪಿ ಬಂಧನ

ಮಂಗಳವಾರದ ಸಭೆಯಲ್ಲಿ ಈ 144 ಕ್ಷೇತ್ರಗಳ ಉಸ್ತುವಾರಿ ಹೊತ್ತಿದ್ದ ಸಚಿವರು ಹಾಗೂ ಪಕ್ಷದ ನಾಯಕರು ಉಪಸ್ಥಿತರಿದ್ದು, ಅಧ್ಯಯನ ವರದಿಯನ್ನು ನಡ್ಡಾ ಹಾಗೂ ಶಾ ಮುಂದೆ ಇರಿಸಿದರು. ಅಲ್ಲಿನ ಜಾತಿ ಸಮೀಕರಣ ಹಾಗೂ ಇತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
 

Latest Videos
Follow Us:
Download App:
  • android
  • ios