Asianet Suvarna News Asianet Suvarna News

Amit Shah ಮುಂಬೈ ಭೇಟಿ ವೇಳೆ ಭದ್ರತಾ ಲೋಪ: ಗೃಹ ಸಚಿವರ ಸುತ್ತ ಓಡಾಡ್ತಿದ್ದ ಆರೋಪಿ ಬಂಧನ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಮುಂಬೈಗೆ ಭೇಟಿ ನೀಡಿದ್ದ ವೇಳೆ ಭದ್ರತಾ ಲೋಪ ನಡೆದಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದ್ದು, 5 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. 

security lapse during amit shah mumbai visit accused arrested and sent to 5 days police custody ash
Author
First Published Sep 8, 2022, 2:10 PM IST

ಕೇಂದ್ರ ಗೃಹ ಸಚಿವ (Union Home minister) ಅಮಿತ್‌ ಶಾ ಮುಂಬೈಗೆ ಭೇಟಿ ನೀಡಿದ್ದ ವೇಳೆ ಭದ್ರತಾ ಲೋಪ ಉಂಟಾಗಿರುವ ಘಟನೆ ನಡೆದಿದೆ. ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸುವ ವ್ಯಕ್ತಿಯೊಬ್ಬ ಬಿಜೆಪಿ (BJP) ನಾಯಕನ ಬಳಿಯೇ ಗಂಟೆಗಟ್ಟಲೆ ಸುತ್ತುತ್ತಿದ್ದರು ಎಂದು ತಿಳಿದುಬಂದಿದೆ. ಹಾಗೆ, ನಿರ್ಬಂಧಿತ ಪ್ರದೇಶಗಳಲ್ಲಿ ಆರೋಪಿ ಮುಕ್ತವಾಗಿ ತಿರುಗಾಡಿದ್ದು, ನಂತರ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಸೋಮವಾರ ಹಾಗೂ ಮಂಗಳವಾರ ಅಮಿತ್‌ ಶಾ ತಮ್ಮ 2 ದಿನಗಳ ಕಾಲ ಮುಂಬೈ ಭೇಟಿಯನ್ನು ಕೊನೆಗೊಳಿಸಿದ್ದು, ಆದರೆ ಈ ಘಟನೆಯ ವರದಿಗಳು ಇಂದು ಹೊರಬಿದ್ದಿವೆ ಎಂದು ಹೇಳಲಾಗಿದೆ. 

ಇನ್ನು, ಬಂಧಿತ ವ್ಯಕ್ತಿಯನ್ನು ಹೇಮಂತ್‌ ಪವಾರ್‌ ಎಂದು ಗುರುತಿಸಲಾಗಿದ್ದು, ಆತ ಆಂಧ್ರ ಪ್ರದೇಶದ (Andhra Pradesh) ಸಂಸದರೊಬ್ಬರ (Member of Parliament) ಆಪ್ತ ಕಾರ್ಯದರ್ಶಿ (Personal Assistant) ಎಂದು ತನ್ನನ್ನು ತಾನು ಹೇಳಿಕೊಂಡಿದ್ದಾನೆ. ಆದರೆ ಹೇಮಂತ್‌ ಪವಾರ್‌, ತಾನು ಗೃಹ ಸಚಿವಾಲಯದ ಐಡಿ-ಕಾರ್ಡ್ ಧರಿಸಿ ಅಮಿತ್ ಶಾ ಅವರ ಸುತ್ತಲೂ ಗಂಟೆಗಟ್ಟಲೆ ಸುಳಿದಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ, ಆತ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಅಧಿಕಾರಿಯಂತೆ ಪೋಸ್ ನೀಡಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ. ಇನ್ನು, ಆತ ಮಹಾರಾಷ್ಟ್ರದ ಧುಲೆಯ (Dhule) 32 ವರ್ಷದ ವ್ಯಕ್ತಿ ಎಂದು ಹೇಳಲಾಗಿದ್ದು, ಈ ಹಿನ್ನೆಲೆ ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದಾರೆ. 

ಇದನ್ನು ಓದಿ: ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ ಕೇಸ್‌: ಫಿರೋಜ್‌ಪುರ ಎಸ್‌ಎಸ್‌ಪಿಗೆ ಸುಪ್ರೀಂ ಕೋರ್ಟ್‌ ತರಾಟೆ

ಅಮಿತ್ ಶಾ ಭಾಗವಹಿಸಿದ 2 ಕಾರ್ಯಕ್ರಮಗಳಲ್ಲಿ ಹೇಮಂತ್‌ ಪವಾರ್‌ ಕಾಣಿಸಿಕೊಂಡಿದ್ದ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ (Chief Minister) ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ (Deputy Chief Minister) ದೇವೇಂದ್ರ ಫಡ್ನವೀಸ್ ಅವರ ಮನೆಗಳ ಹೊರಗೆ ಕೂಡ ಆರೋಪಿ ಕಾಣಿಸಿಕೊಂಡಿದ್ದಾನೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅವರ ನಿವಾಸ ‘ಸಾಗರ್‌’ (Sagar) ಬಳಿ ಇದ್ದಾಗ, ಆತನ ಬಗ್ಗೆ ಅನುಮಾನಗೊಂಡ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಅವರು ಪವಾರ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಗೃಹ ಸಚಿವರ ಭದ್ರತಾ ತಂಡದ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂಬುದು ಪೊಲೀಸರಿಗೆ ನಂತರ ತಿಳಿದುಬಂದಿದೆ.

ಈ ಹಿನ್ನೆಲೆ ಪವಾರ್‌ ಅವರನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿದ್ದು, ಆರೋಪಿ ಮೇಲೆ ಸೆಕ್ಷನ್‌ 170 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂತರ, ಆತನನ್ನು ಗಿರ್ಗಾಮ್‌ ಕೋರ್ಟ್‌ಗೆ (Girgaum Court) ಕರೆದೊಯ್ದು, ಬಳಿಕ ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody)  ಒಪ್ಪಿಸಲಾಗಿದೆ. 

ಈ ಮಧ್ಯೆ, ಶಿವಸೇನೆಯಲ್ಲಿನ ವಿಭಜನೆಯ ನಂತರ ಜುಲೈ 30 ರಂದು ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೊದಲ ಬಾರಿಗೆ ಮುಂಬೈಗೆ ಭೇಟಿ ನೀಡಿದ್ದಾರೆ. ಭೇಟಿ ವೇಳೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಪ್ರಮುಖ ಗಣೇಶ ಪೆಂಡಾಲ್‌ ಇಟ್ಟಿದ್ದ ಲಾಲ್‌ಬೌಗ್ಚಾ ರಾಜಾ (Lalbaugcha Raja) ಪ್ರದೇಶಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವರು, ಗಣೇಶನಿಗೆ ಪೂಜೆ ಸಲ್ಲಿಸಿದ್ದರು. 

ಈ ಹಿಂದೆ ಪ್ರಧಾನಿ ಮೋದಿಗೂ ಪಂಜಾಬ್‌ನಲ್ಲಿ ಭದ್ರತಾ ಲೋಪವುಂಟಾಗಿತ್ತು. ಪಂಜಾಬ್‌ನಲ್ಲಿ ಪ್ರಧಾನಿ ಮೋದಿಗುಂಟಾದ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಫಿರೋಜ್‌ಪುರ ಎಸ್‌ಎಸ್‌ಪಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದರು ಎಂದು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಮೋದಿಗೆ ಭದ್ರತಾ ಉಲ್ಲಂಘನೆ ಕುರಿತು ಐವರು ಸದಸ್ಯರ ಸಮಿತಿ ಸಲ್ಲಿಸಿದ್ದ ವರದಿಯನ್ನು ಓದಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು, ಈ ವೇಳೆ ಫಿರೋಜ್‌ಪುರ ಹಿರಿಯ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನವರಿ 2022 ರಲ್ಲಿ ಪಂಜಾಬ್‌ನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಉಲ್ಲಂಘನೆಯಾಗಿತ್ತು. ಈ ವಿಚಾರವಾಗಿ ಬಿಜೆಪಿ ಹಾಗೂ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು.

Follow Us:
Download App:
  • android
  • ios