Asianet Suvarna News Asianet Suvarna News

ಪ್ರಶಾಂತ್‌ ಕಿಶೋರ್‌ ಗುಪ್ತವಾಗಿ ಬಿಜೆಪಿಗೆ ಸಹಾಯ ಮಾಡುತ್ತಿರಬಹುದು: ನಿತೀಶ್‌ ಕುಮಾರ್‌

ನಿತೀಶ್‌ ಕುಮಾರ್‌ ಅವರು ವಿರೋಧ ಪಕ್ಷದ ಪಾಳಯಕ್ಕೆ ಬದಲಾಗಿರುವುದು ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿತೀಶ್‌ ಕುಮಾರ್‌, ಪ್ರಶಾಂತ್‌ ರಹಸ್ಯವಾಗಿ ಅವರು ಬಿಜೆಪಿಗೆ ಸಹಾಯ ಮಾಡುತ್ತಿರಬಹುದು ಎಂದಿದ್ದಾರೆ.

May be Prashant Kishor helping BJP covertly Nitish Kumar jibe on publicity expert san
Author
First Published Sep 8, 2022, 5:00 PM IST

ನವದೆಹಲಿ (ಸೆ. 8): ಲೋಕಸಭೆ ಚುನಾವಣೆಗೆ ಇನ್ನೂ ಸಾಕಷ್ಟು ದಿನಗಳು ಇರುವಾಗಲೇ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರತಿಪಕ್ಷದ ನಾಯಕರ ಜೊತೆಗೆ ಸಾಲು ಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಇದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಆದರೆ, ನಿತೀಶ್‌ ಕುಮಾರ್‌ ಅವರ ಈ ವರ್ತನೆಯನ್ನು ಮಾಜಿ ಸಹವರ್ತಿ ಹಾಗೂ ಪಕ್ಷದ ಸಹೋದ್ಯೋಗಿ ಆಗಿದ್ದ ಪ್ರಶಾಂತ್‌ ಕಿಶೋರ್‌ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿದ್ದನ್ನು ಪ್ರಶಾಂತ್‌ ಕಿಶೋರ್‌ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಟೀಕೆ ಮಾಡಿದ್ದರು. ಮಹಾಘಟಬಂದನ್‌ ಜೊತೆ ಬಿಹಾರದಲ್ಲಿ ಮತ್ತೆ ನಿತೀಶ್‌ ಕುಮಾರ್‌ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಸಾಧ್ಯವಾಗಿದ್ದರೂ, ಇದು ಯಾವುದೇ ರಾಷ್ಟ್ರೀಯ ಪ್ರಭಾವವನ್ನು ಹೊಂದಿರುವುದಿಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದರು.  ಕಿಶೋರ್ ಅವರನ್ನು "ಪ್ರಚಾರ ತಜ್ಞರು" ಎಂದು ಕರೆದ ನಿತೀಶ್, ಮಾಜಿ ಜೆಡಿಯು ಉಪಾಧ್ಯಕ್ಷರ ಟೀಕೆಗಳನ್ನು ತಳ್ಳಿಹಾಕಲು ಪ್ರಯತ್ನಿಸಿದರು, ಅದಲ್ಲದೆ, ಪ್ರಶಾಂತ್‌ ಕಿಶೋರ್‌ ಗುಪ್ತವಾಗಿ ಬಿಜೆಪಿಗೆ ಸಹಾಯ ಮಾಡುತ್ತಿರಬಹುದು ಎಂದೂ ಹೇಳಿದ್ದಾರೆ. ಇತರ ರಾಜಕೀಯ ಪಕ್ಷಗಳ ಜೊತೆ ಕೆಲಸ ಮಾಡುವುದು ಪ್ರಶಾಂತ್‌ ಕಿಶೋರ್‌ಗೆ ಬರಿ ಕೆಲಸ ಮಾತ್ರ. ಬಿಹಾರದ ಕುರಿತಾಗಿ ಅವರು ಏನೇ ಮಾಡಿರಬಹುದು. ಅದು ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2005ರಿಂದ ನಾವು ಇಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಎಬಿಸಿಯಾದರೂ ಅವರಿಗೆ ಗೊತ್ತಿದೆಯೇ ಎಂದು ಬುಧವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಿತೀಶ್‌ ಕುಮಾರ್‌ ಹೇಳಿದ್ದರು.

ಅವರು ನೀಡುತ್ತಿರುವ ಹೇಳಿಕೆಗಳನ್ನು ನೋಡಿದಾಗ ಅನಿಸೋದು ಏನೆಂದರೆ, ಅವರಿಗೆ ಬಿಜೆಪಿಯಲ್ಲಿಯೇ ಉಳಿದುಕೊಳ್ಳುವುದು ಇಷ್ಟ ಎನ್ನುವುದನ್ನು ತೋರಿಸುತ್ತಿದೆ. ಬಹುಶಃ ಅವರಿಗೆ ಸಹಾಯ ಮಾಡಲಷ್ಟೇ ಬಯಸುತ್ತಿರಬಹುದು ಎಂದು ಬಿಹಾರದ ಮುಖ್ಯಮಂತ್ರಿ ಹೇಳಿದ್ದಾರ.ೆ

ಬಿಹಾರ ಸಿಎಂ ಇನ್ನೂ ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಭಾಗವಾಗಿದ್ದಾಗ ಕೇಂದ್ರವು ತಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್ ಸತತ ಆಕ್ಷೇಪಣೆಗಳ ಮೇಲೆ ಹೊರಬಿದ್ದರು. JD(U) ನೊಳಗೆ ಶೀಘ್ರವಾಗಿ ಉನ್ನತ ಸ್ಥಾನಕ್ಕೇರಿದ ಕಿಶೋರ್ ಅವರನ್ನು 2020 ರಲ್ಲಿ ಪಕ್ಷದಿಂದ ಹೊರಹಾಕಲಾಯಿತು. ಅವರನ್ನು ಅಕ್ಟೋಬರ್ 2018 ರಲ್ಲಿ JD(U) ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ನಾನು ರಾಹುಲ್‌ ಗಾಂಧಿಗೆ ಸಮಾನ ವ್ಯಕ್ತಿ ಅಲ್ಲ: ಪ್ರಶಾಂತ್‌ ಕಿಶೋರ್‌

ಇತ್ತೀಚೆಗಷ್ಟೇ ಬಿಹಾರದಲ್ಲಿ ಸಕ್ರಿಯರಾಗಿರುವ ಕಿಶೋರ್ ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಮತ್ತು ನಿತೀಶ್ ಕುಮಾರ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಎನ್‌ಡಿಎಯಿಂದ ಕುಮಾರ್ ನಿರ್ಗಮಿಸಿದ ನಂತರ, ಹೊಸ ಮೈತ್ರಿಯ ಭಾಗವಾಗಿ ಬಿಹಾರದ ಜನರ ಆಕಾಂಕ್ಷೆಗಳನ್ನು ಪೂರೈಸಲು ಬಿಹಾರ ಸಿಎಂ ಯಶಸ್ವಿಯಾಗುತ್ತಾರೆ ಎಂದು ನಂಬಿದ್ದಾರೆ ಕಿಶೋರ್ ಹೇಳಿದರು. ಬಿಹಾರದಲ್ಲಿನ ರಾಜಕೀಯ ವಿದ್ಯಮಾನಗಳು ರಾಷ್ಟ್ರೀಯ ಪರಿಣಾಮವನ್ನು ಬೀರಬಹುದೇ ಎಂದು ಕೇಳಿದಾಗ, ಪುನರ್‌ಮೈತ್ರಿ ಒಂದು ರಾಜ್ಯಕ್ಕೆ ನಿರ್ದಿಷ್ಟವಾಗಿದೆ ಮತ್ತು ಅದನ್ನು ರಾಷ್ಟ್ರೀಯ ಪರ್ಯಾಯಕ್ಕೆ ಮಾದರಿಯಾಗಿ ನೋಡುವುದು ಅತ್ಯಂತ ಕೆಟ್ಟ ಯೋಚನೆ ಎಂದು ಕಿಶೋರ್ (Prashant Kishor) ಹೇಳಿದ್ದರು.

ಕಾಂಗ್ರೆಸ್‌ ಮತ್ತು ಪ್ರಶಾಂತ್‌ ಕಿಶೋರ್‌ ನಡುವಿನ ಮಾತುಕತೆ ಮುರಿದು ಬೀಳಲು ನಿಜವಾದ ಕಾರಣ ಏನು?

ಬಿಹಾರ (Bihar) ಎನ್ನುವುದು ದೊಡ್ಡ ರಾಜ್ಯ. ಆದರೆ, ಬಿಹಾರದಲ್ಲಿ ಆಗಿರುವ ಬದಲಾವಣೆ, ಅತ್ಯಂತ ವೇಗವಾಗಿ ರಾಷ್ಟ್ರ ರಾಜಕಾರಣದಲ್ಲಿ (National Politics) ಪರಿಣಾಮ ಬೀರುತ್ತದೆ ಎಂದು ಹೇಳಲಾಗದು ಎಂದು ಪ್ರಶಾಂತ್‌ ಕಿಶೋರ್ ಹೇಳಿದ್ದಾರೆ. ನಿತೀಶ್ ಕುಮಾರ್ ಅವರು ರಾಷ್ಟ್ರ ರಾಜಧಾನಿಗೆ ಭೇಟಿ ನೀಡುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ಪ್ರತಿಪಕ್ಷಕ್ಕೆ ಬೆಂಬಲವನ್ನು ನಿರ್ಮಿಸಲು ಪಕ್ಷಗಳಾದ್ಯಂತ ಹಲವಾರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ನಿತೀಶ್ ಇಲ್ಲಿಯವರೆಗಿನ ಭೇಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಎಡಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದಾರೆ.
ಬುಧವಾರ, ನಿತೀಶ್ ಅವರು ತೃತೀಯ ರಂಗವನ್ನು ನಿರ್ಮಿಸುವ ಪ್ರಯತ್ನವಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳನ್ನು ತಳ್ಳಿಹಾಕಲು ಪ್ರಯತ್ನಿಸಿದರು. ಇದು ಬಿಜೆಪಿ ವಿರುದ್ಧದ ಪ್ರಮುಖ ಅಂಗ ಎಂದು ನಿತೀಶ್ ಸುದ್ದಿಗಾರರಿಗೆ ತಿಳಿಸಿದರು.
 

Follow Us:
Download App:
  • android
  • ios