Asianet Suvarna News Asianet Suvarna News

ಡಿಕೆ ಸುರೇಶ್ ಮಾತು ಕೇಳಿ ಮತ ಹಾಕಿದ ಬೊಮ್ಮಸಂದ್ರ ಪುರಸಭೆ ಬಿಜೆಪಿ ಸದಸ್ಯರುಗಳಿಗೆ ಬಿಗ್ ಶಾಕ್

* ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ  ಮತ್ತು ಉಪಾಧ್ಯಕ್ಷ ಸ್ಥಾನ ತೂಗುಗತ್ತಿಯಲ್ಲಿ
* ಡಿಕೆ ಸುರೇಶ್ ಮಾತು ಕೇಳಿ ಮತ ಹಾಕಿದ ಬೊಮ್ಮಸಂದ್ರ ಪುರಸಭೆ ಬಿಜೆಪಿ ಸದಸ್ಯರುಗಳಿಗೆ ಬಿಗ್ ಶಾಕ್
* ಬೊಮ್ಮಸಂದ್ರ ಪುರಸಭೆಗೆ ಮತ್ತೊಮ್ಮೆ ಚುನಾವಣೆ ನಡೆಯುತ್ತ ಎಂಬ ಕುತೂಹಲ

Bengaluru BJP President Complaint against His bommasandra Party Members Over whip violating rbj
Author
Bengaluru, First Published Apr 4, 2022, 10:20 PM IST

ವರದಿ : ಟಿ.ಮಂಜುನಾಥ ಆನೇಕಲ್

ಆನೇಕಲ್, (ಏ.04) :
ಇತ್ತೀಚೆಗೆ ನಡೆದ  ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ  ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಸದಸ್ಯರುಗಳಾದ  ವೈ.ಗೋಪಾಲ್ ಕಾಂಗ್ರೆಸ್ ಮತ್ತು ಬಿಜೆಪಿಯ ಬಂಡಾಯ ಸದಸ್ಯರ ಬೆಂಬಲದಿಂದ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ವಸಂತ್ ಆಯ್ಕೆಯಾಗಿದ್ದರು. ಇದೀಗ ಇಬ್ಬರ ಸ್ಥಾನಗಳಿಗೆ ಕುತ್ತು ಬಂದಿದೆ. 

ಹಾಗೇಯೆ ಇವರಿಗೆ ಮತ ಚಲಾಯಿಸಿದ ಚಲಪತಿ ಮತ್ತು ಪ್ರಸಾದ್ ರವರಿಗೂ ವಜಾಗೊಳ್ಖುವ ಬೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಸಂದ್ರ ಪುರಸಭೆಗೆ ಮತ್ತೊಮ್ಮೆ ಚುನಾವಣೆ ನಡೆಯುತ್ತ ಎಂಬ ಕುತೂಹಲ ಕೆರಳಿಸಿದೆ.

ಮಣ್ಣಿನ ಮಗ ಎಚ್‌ಡಿಕೆ ಒಮ್ಮೆಯಾದರೂ ಕೃಷಿ ಸಚಿವರಾಗಿದ್ದಾರಾ? ಅಶ್ವಥ್ ನಾರಾಯಣ ಪ್ರಶ್ನೆ

ಹೌದು... ಮಾರ್ಚ್ 14 ರಂದು  ಬೊಮ್ಮಸಂದ್ರ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಂದು ಹಲವು ರೀತಿಯ ನಾಟಕೀಯ ಬೆಳವಣಿಗೆಗಳು ನಡೆದಿದ್ದವು. ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ.ಶಿವಣ್ಣ ಮತ್ತು ಕಾಂಗ್ರೆಸ್ ಪುರಸಭೆ ಸದಸ್ಯರು ಈ ಚುನಾವಣೆಯಲ್ಲಿ ಭಾಗವಹಿಸಿದ್ದು,  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಸದಸ್ಯರುಗಳಾದ ವೈ.ಗೋಪಾಲ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಸಂತ್ ಪರವಾಗಿ ಮತ ಚಲಾಯಿಸಿ ಅವರಿಬ್ಬರನ್ನ  ಜಯಶೀಲರನ್ನಾಗಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಅಲ್ಲದೇ  ಅಭಿವೃದ್ಧಿಗಾಗೀ ನಾವು ಮತ ಚಲಾಯಿಸಿದ್ದೇವೆಂದು ಹೇಳಿಕೆ ನೀಡಿದ ಸಂಸದ ಮತ್ತು ಶಾಸಕರು ಬಿಜೆಪಿಗೆ ಟಾಂಗ್ ನೀಡಿ ಹೋಗಿದ್ದರು.

ಆದ್ರೆ, ಇವರಿಬ್ಬರು ಬಿಜೆಪಿಯ ಬಂಡಾಯ ಅಭ್ಯರ್ಥಿಗಳಾಗಿದ್ದು ಇದೀಗ ಇವರಿಬ್ಬರು ಸೇರಿ ಇವರನ್ನ ಬೆಂಬಲಿಸಿದ ಬಿಜೆಪಿ ಸದಸ್ಯರಾದ ಚಲಪತಿ ಮತ್ತು ಪ್ರಸಾದ್ ರವರ ಸದಸ್ಯತ್ವಕ್ಕೆ ವಿಪ್ ಕಾರಣ  ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ.NR.ರಮೇಶ್  ಸದಸ್ಯತ್ವ ಅನರ್ಹಗೊಳಿಸಿ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಮೂಲಕ ಬೊಮ್ಮಸಂದ್ರ ಪುರಸಭೆಯಲ್ಲಿ ಹೊಸ ಇತಿಹಾಸ ರಚನೆಗೆ ಮುಂದಾಗಿದ್ದಾರೆ    

ಬೊಮ್ಮಸಂದ್ರ ಪುರಸಭೆಗೆ ಬಿಜೆಪಿ ತನ್ನ ಅಧಿಕೃತವಾಗಿ ಅಧ್ಯಕ್ಷರ ಸ್ಥಾನಕ್ಕೆ ಮಂಜುಳಾ ಸಿ.ಎಂ . ಹಾಗು ಉಪಾಧ್ಯಕ್ಷರ ಸ್ಥಾನಕ್ಕೆ ನಾರಾಯಣಸ್ವಾಮಿ ರವರನ್ನ ಕಣಕ್ಕೀಳಿಸಿದ್ದರು. ಹಾಗೇಯೆ  ಬಿಜೆಪಿ ಪಕ್ಷದ  ಅಧಿಕೃತ ಅಭ್ಯರ್ಥಿಗಳ ಪರವಾಗಿ ಮತಚಲಾಯಿಸುವಂತೆ ಪಕ್ಷದ ಎಲ್ಲಾ ಸದಸ್ಯರುಗಳಿಗೆ ವಿಪ್ ಜಾರಿಗೊಳಿಸಿದ್ದರು, ಆದ್ರೆ ಪಕ್ಷದ ತೀರ್ಮಾನವನ್ನ ಉಲ್ಲಂಘಿಸಿ  ಬೊಮ್ಮಸಂದ್ರ ಪುರಸಭೆಯ 5ನೇ ವಾರ್ಡಿನ ಸದಸ್ಯರಾದ ಗೋಪಾಲ್ ವೈ,  ಮತ್ತು  14 ನೇ ವಾರ್ಡಿನ ಸದಸ್ಯರಾದ ವಸಂತ್ ಕುಮಾರ್ ರವರು ಸ್ಪರ್ಧಿಸಿದ್ರು. ಹಾಗು ಅವರ ವಿರುದ್ಧ  4ನೇ ವಾರ್ಡಿನ ಸದಸ್ಯರಾದ  ವೆಂಕಟಾಚಲಪತಿ ಮತ್ತು  2 ನೇ ವಾರ್ಡಿನ ಸದಸ್ಯರಾದ ಎ. ಪ್ರಸಾದ್ ರವರು ಮತ ಚಲಾಯಿಸಿದ್ದರು.

 ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಕಣಕ್ಕಿಳಿಸಿದ್ದ ಅಭ್ಯರ್ಥಿ ಜೆಡಿಎಸ್ ನಿಂದ ಗೆದ್ದ ಅಭ್ಯರ್ಥಿಯಾಗಿದ್ದ. ಇವರನ್ನ ಬಿಜೆಪಿ ಸದಸ್ಯರಾದ ಪ್ರಸಾದ್ ಮತ್ತು ಚಲಪತಿ ವಿರೋದಿಸಿದ್ದರು. ಇದರಿಂದ ಇವರು ಕಾಂಗ್ರೆಸ್ ಜೊತೆ ಸೇರಿ ಬಂಡಾಯವಾಗಿ ವೈ.ಗೋಪಾಲ್ ಮತ್ತು ವಸಂತ್ ರವರನ್ನ ಕಣಕ್ಕಿಳಿಸಿ ಗೆಲ್ಲಿಸಿದ್ದರು.

 ಇದೀಗ ಈ ನಾಲ್ವರಿಗೂ  ಮತ್ತು ಅವರುಗಳನ್ನ ಬೊಮ್ಮಸಂದ್ರ ಪುರಸಭಾ ಸದಸ್ಯತ್ವ ಸ್ಥಾನಗಳಿಂದ ಅನರ್ಹಗೊಳಿಸಿ , ಕ್ರಮ ತೆಗೆದುಕೊಳ್ಳುವಂತೆ , ಸಂಪೂರ್ಣ ದಾಖಲೆಗಳೊಂದಿಗೆ , ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾದ ಎನ್.ಆರ್.ರಮೇಶ್ ರವರು ಜಿಲ್ಲಾಧಿಕಾರಿಗಳಿಗೆ ಹಾಗೂ ಬೊಮ್ಮಸಂದ್ರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರಿಂದ ಬೊಮ್ಮಸಂದ್ರ ಪುರಸಭೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತೂಗುಗತ್ತಿ ನೇತಾಡುವಂತಾಗಿದೆ.

Follow Us:
Download App:
  • android
  • ios