ಮಣ್ಣಿನ ಮಗ ಎಚ್‌ಡಿಕೆ ಒಮ್ಮೆಯಾದರೂ ಕೃಷಿ ಸಚಿವರಾಗಿದ್ದಾರಾ? ಅಶ್ವಥ್ ನಾರಾಯಣ ಪ್ರಶ್ನೆ
* ಎಚ್‌ಡಿ ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ಕೊಟ್ಟ ಅಶ್ವತ್ಥ್ ನಾರಾಯಣ
* ರೈತರ ಮೇಲೆ ಪ್ರೀತಿ ಇರೋರು ಒಮ್ಮೆಯಾದ್ರು ಕೃಷಿ ಸಚಿವ ಆಗಿದ್ದಾರಾ?
* ಅಧಿಕಾರಕ್ಕೆ ಬಂದಾಗ ಪ್ರತಿ ಬಾರಿ Pwd ಖಾತೆಯೆ ಬೇಕು
ವರದಿ - ರವಿ ಶಿವರಾಮ್ ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು, (ಏ.04): ಸಚಿವ ಡಾ.ಅಶ್ವತ್ ನಾರಾಯಣ್ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದ ಕುಮಾರಸ್ವಾಮಿಗೆ ಇಂದು(ಸೋಮವಾರ) ಪತ್ರಿಕಾಗೋಷ್ಠಿ ಮಾಡಿ ಅಶ್ವತ್ಥ್ ನಾರಾಯಣ ಅವರು ಎಲ್ಲಾ ಆರೋಪಕ್ಕೂ ಎಳೆ ಎಳೆಯಾಗಿ ಉತ್ತರ ನೀಡಿದರು.
ಮಾತೆತ್ತಿದ್ರೆ ತಾವು ಮಣ್ಣಿನ ಮಕ್ಕಳು ಅಂತ ಕುಮಾರಸ್ವಾಮಿ ಹೇಳಿಕೊಳ್ತಾರೆ. ಆದರೆ ಇವರು ಒಮ್ಮೆಯಾದರೂ ಕೃಷಿ ಸಚಿವರಾಗಿದ್ದಾರಾ ಎಂದು ವ್ಯಂಗ್ಯ ಮಾಡಿದ್ರು. ಇವರು ಅಧಿಕಾರಕ್ಕೆ ಬಂದಾಗ ಪ್ರತಿ ಬಾರಿ Pwd ಖಾತೆಯೆ ಬೇಕು. ರೈತರ ಮೇಲೆ ಪ್ರೀತಿ ಇರೋರು ಒಮ್ಮೆಯಾದರೂ ಕೃಷಿ ಸಚಿವ ಆಗಿದ್ದಾರಾ ಎನ್ನುವ ಮೂಲಕ ಕುಮಾರಸ್ವಾಮಿ ಕುಟುಂಬದವರು ಸರ್ಕಾರ ಬಂದಾಗಲೆಲ್ಲಾ ದೊಡ್ಡ ದೊಡ್ಡ ಖಾತೆಯನ್ನೇ ಬಯಸುತ್ತಾರೆ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್ ಡಿ ರೇವಣ್ಣ Pwd ಖಾತೆ ಪಡೆದಿದ್ದ ವಿಚಾರವನ್ನು ಪರೋಕ್ಷವಾಗಿ ಟೀಕಿಸಿದ್ರು. ಅಂದರೆ ಇವರು ಹೇಳಿಕೆಗೆ ಮಾತ್ರ ರೈತರ ಬಗ್ಗೆ ಮಾತಾಡ್ತಾರೆ ಆದ್ರೆ ಕೃಷಿ ಖಾತೆ ಪಡೆಯೋಕೆ ಇವರಿಗೆ ಆಸಕ್ತಿ ಇಲ್ಲ ಎಂದು ಕುಟುಕುವ ಪ್ರಯತ್ನ ಮಾಡಿದ್ರು...
ನಾನೂ ಕೇಸರಿ ಶಾಲು ಹಾಕಿ ನಿಮ್ಮ ಜೊತೆ ಬರ್ತೀನಿ: ಕುಮಾರಸ್ವಾಮಿ
ಕುಮಾರಸ್ವಾಮಿ ರಿವರ್ಸ್ ಗೇರ್' ನಲ್ಲಿ ಓಡಾಡ್ತಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಸರ್ಕಾರ ಧರ್ಮ ರಾಜಕೀಯ ಮಾಡ್ತಿದೆ ಎಂದು ವಾಗ್ದಾಳಿ ಮಾಡಿದ್ರು. ಇದೇ ವೇಳೆ ರೈತರು ಬೆಳೆದ ಬೆಳೆ , ರೇಷ್ಮೆ ಮಾವು ಖರೀದಿ ಮಾಡೋದು ಮುಸ್ಲಿಂರು ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ್ ಅಂದು ರಾಮನಗರ ಮಾರ್ಕೆಟ್ ನಲ್ಲಿ ಗಲಾಟೆ ಆದಾಗ ಕುಮಾರಸ್ವಾಮಿ ಅವರ ನಡೆ ಬೇರೆ ರೀತಿ ಇತ್ತು. ಆದ್ರೆ ಇಂದು ಏಕಾಏಕಿ ರಿವರ್ಸ್ ಗ್ಯಾರ್ ನಲ್ಲಿ ಮಾತಾಡ್ತಾ ಇದ್ದಾರೆ. ರಾಮನಗರದ ಮಾರ್ಕೆಟ್ ನಲ್ಲಿ ಕುಮಾರಸ್ವಾಮಿ ಅಂದು ಗಲಾಟೆ ಮಾಡಿದ್ರು.ರೈತರಿಗೆ ಅನ್ಯಾಯ ಆಗಿತ್ತು ಅಲ್ಲಿ ನಡೆದ ಘಟನೆಯ ವಿಡಿಯೊ ನೋಡಿ, ಹೊಟ್ಟೆ ಉರಿದು ಹೋಗಿತ್ತು. ಆದರೆ ಈಗ ರಿವರ್ಸ್ ಗೇರ್ ನಲ್ಲಿ ಮಾತಾಡ್ತಾರೆ. ಒಂದು ದಿನ ಅವರ ಪರ,ಇನ್ನೊಂದು ದಿನ ಇನ್ನೊಬ್ಬರ ಪರ. ದಿನಕ್ಕೆ ಒಂದೊಂದು ಮಾತಾಡ್ತಾರಿ ಎಂದು ಕುಮಾರಸ್ವಾಮಿಗೆ ಅಶ್ವಥ್ ನಾರಾಯಣ್ ಪ್ರಶ್ನೆ ಮಾಡಿದ್ರು. ನೀವು ರೈತರ ಪರ ಮಾತಾಡ್ತಿರಿ, ಆದ್ರೆ ರೈತರ ಬೆಳೆಗೆ ಮೌಲ್ಯವರ್ಧನ ಮಾಡಿದ್ರಾ ಎಂದು ಸವಾಲು ಹಾಕಿದ್ರು...
ವ್ಯಾಪಾರ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ
ಕುಮಾರಸ್ವಾಮಿಯವರೆ, ವ್ಯಾಪಾರವನ್ನು ಯಾಕೆ ಒಂದು ಸಮುದಾಯಕ್ಕೆ ಸೀಮಿತ ಮಾಡ್ತಿರಾ ಎಂದು ಪ್ರಶ್ನೆ ಮಾಡಿದ ಸಚಿವರು,
ಸಮುದಾಯ ಆಧಾರಿತ ವ್ಯಾಪರ ಇಲ್ಲ.ಜಾತಿ ಆಧಾರಿತ ವ್ಯಾಪಾರ ಇಲ್ಲ.ಯಾರು ಯಾವ ವ್ಯಾಪಾರ ಬೇಕಾದರೂ ಮಾಡಬಹುದು. ಹಾಗೆ ಜಾತಿಯಿಂದ ವ್ಯಾಪಾರ ಮಾಡಬೇಕು ಅಂತ ಇದ್ರೆ ಕುಮಾರಸ್ವಾಮಿ ಅವರೇ ಹೇಳಲಿ ಎಂದರು.
ಮುಸ್ಲಿಂ ಮತಕ್ಕೆ ಕಾಂಗ್ರೆಸ್ ಜೆಡಿಎಸ್ ಪೈಪೋಟಿ
ಕಾಂಗ್ರೆಸ್ ಜೆಡಿಎಸ್ ಮೇಲೆ ಆರೋಪ ಮಾಡಿದ ಅಶ್ವಥ್ ನಾರಾಯಣ್, ಎರಡು ಪಕ್ಷಗಳು ಮುಸ್ಲಿಂ ಮತಕ್ಕಾಗಿ ಪೈಪೋಟಿಗೆ ಬಿದ್ದಿದೆ. ಹಿಜಾಬ್ ತೀರ್ಪು ಬಂದಾಗಲೂ ಗೊಂದಲ ಮಾಡಿದ್ರು.ಹಾಗೆ ಹಲಾಲ್ ವಿಷಯ ಇರಬಹುದು, ಅವರವರ ಕೆಲಸ ಅವರು ಮಾಡ್ತಾರೆ .ಇದರ ಮಧ್ಯೆ ರಾಜಕೀಯ ಪಕ್ಷಗಳಿಗೆ ಏನು ಕೆಲಸ ಎಂದು ಪ್ರಶ್ನೆ ಮಾಡಿದ ಅಶ್ವಥ್, ಈಗ ನಡೆತಿರೋದು ಸಿದ್ದರಾಮಯ್ಯ, ಕುಮಾರಸ್ವಾಮಿ ಮಧ್ಯೆ ಪೈಪೋಟಿಯೆ ಎಂದು ವ್ಯಂಗ್ಯ ಮಾಡಿದ್ರು.
ನಾವು ಸೆಲ್ಯುಲರ್ ಎಂದ ಅಶ್ವಥ್ ನಾರಾಯಣ್
ಮಸೀದಿಯಲ್ಲಿ ಧ್ವನಿವರ್ಧಕ ಹಾಕಬಾರದು ಎನ್ನುವ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ್, ನಾವು ಇರುವ ಕಾನೂನು ಪಾಲನೆ ಮಾಡ್ತಿದ್ದೇವೆ ಅಷ್ಟೇ. ಹೊಸದಾಗಿ ಯಾವ ಕಾನೂನು ಜಾರಿಗೆ ತಂದಿಲ್ಲ ಎಂದು ತಿಳಿಸಿದ್ರು. ದೇವಸ್ಥಾನಗಳಲ್ಲಿ ಇತರ ಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎನ್ನುವ ಚರ್ಚೆ ಬಂತು, ಆಗ ಕಾಂಗ್ರೆಸ್ ಇದನ್ನು ಪ್ರಶ್ನೆ ಮಾಡಿತು. ಆದರೆ ಇವರೇ ಆ ಕಾನೂನು ತಂದಿದ್ದು ಎಂದು ಬಳಿಕ ಸುಮ್ಮನಾದರು. ಹಿಜಾಬ್ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡಿದ್ರು. ಆದ್ರೆ ನಾವು ಇರುವ ಕಾನೂನು ಪಾಲನೆ ಮಾಡುತ್ತಿದ್ದೇವೆ ಎಂದು ಈಗ ನಡೆಯುತ್ತಿರುವ ಧರ್ಮ ರಾಜಕೀಯ ಕ್ಕೆ ಉತ್ತರ ನೀಡಿದ್ರು. ನಾವು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ,ನಾವು ಓಲೈಕೆ ಮಾಡಲ್ಲ, ಹೊಸದಾಗಿ ಯಾವ ಕಾನೂನು ಮಾಡಿಲ್ಲ,ಇರುವ ಕಾನೂನು ಪಾಲಿಸ್ತೇವೆ ಹೀಗಾಗಿ ನಮ್ಮ ಕಡೆ ಕೈ ತೋರಿಸೋದು ಬಿಡಿ ಎಂದು ಅವರು ವಿಪಕ್ಷಗಳಿಗೆ ಆಗ್ರಹಿಸಿದ್ರು. ನಾವು ಸೆಲ್ಯುಲರ್, ನಾವು ಇಂಡಿಯನ್ ಎಂದ ಸಚಿವರು ನಮ್ಮ ಸರ್ಕಾರ, ಮಾನವತೆ ಆಧಾರ ಜನಪರ ಕೆಲಸ ಮಾಡುತ್ತೆ ಎಂದು ತಿಳಿಸಿದ್ರು.
ಒಳ್ಳೆಯ ಹೇಳಿಕೆ ಕೊಡುವುದನ್ನು ಕಲಿಯಿರಿ
ಮಸೀದಿಯಲ್ಲಿ ಧ್ವನಿವರ್ಧಕ ಬಗ್ಗೆ ನಾವು ಮಾತಾಡ್ತಾ ಇಲ್ಲ.. ಇರುವ ಕಾನೂನು ಪಾಲನೆ ಮಾಡ್ತಾದ್ದೇವಷ್ಟೆ. ಆದರೆ ಆ ವಿಚಾರದ ಬಗ್ಗೆ ದನಿ ಎತ್ತುತ್ತಾ ಇರೋರು ಯಾರು ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದ್ರು. ಇಲ್ಲದ ಗೊಂದಲ ಯಾಕೆ ಮಾಡ್ತಿರಿ ಎಂದು ಪ್ರಶ್ನೆ ಮಾಡಿದ ಅಶ್ವಥ್, ಒಳ್ಳೆಯ ಮಾತಾಡೋಕೆ ಕಲಿಯಿರಿ ಎಂದು ಕುಮಾರಸ್ವಾಮಿಯನ್ನು ಉದ್ದೇಶಿಸಿ ಹೇಳಿದ ಅಶ್ವಥ್ ಇಂತಹ ರಾಜಕಾರಣಿಗೆ ಏನ್ ಎನ್ನಬೇಕೊ ಎಂದು ವ್ಯಂಗ್ಯ ಮಾಡಿದ್ರು.