ಚಿಂಚನಸೂರ ವಿಧಾನ ಪರಿಷ್‌ತ್ ಸದಸ್ಯ ಸ್ಥಾನ?
ರಾಜ್ಯ ಚುನಾವಣೆ ಆಯೋಗ ಜೂ.30 ರಂದು ವಿಧಾನ ಪರಿಷತ್ 3 ಸ್ಥಾನಕ್ಕಾಗಿ ಚುನಾವಣೆ ಘೋಷಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ, ಬಾಬುರಾವ್ ಚಿಂಚನಸೂರ ಆಯ್ಕೆ ಆಗುತ್ತಾರೆಂಬ ಮಾತುಗಳು ಕೇಳಿಬರುತ್ತಿದೆ.
ಎಂ.ಬಿ. ನಾಯಕಿನ್
ಗುರುಮಠಕಲ್ (ಜೂ.9): ರಾಜ್ಯ ಚುನಾವಣೆ ಆಯೋಗ ಜೂ.30 ರಂದು ವಿಧಾನ ಪರಿಷತ್ 3 ಸ್ಥಾನಕ್ಕಾಗಿ ಚುನಾವಣೆ ಘೋಷಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ, ಬಾಬುರಾವ್ ಚಿಂಚನಸೂರ ಆಯ್ಕೆ ಆಗುತ್ತಾರೆಂಬ ಮಾತುಗಳು ಕೇಳಿಬರುತ್ತಿದೆ.
ಇತ್ತೀಚೆಗೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವುಕುಮಾರ(DK Shivakumar) ಮಾಧ್ಯಮಗಳಲ್ಲಿ ವಲಸೆ ಬಂದು ಸೋತ ನಾಯಕರಿಗೆ ಅನ್ಯಾಯ ಮಾಡುವುದಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ ಒದಗಿಸಲು ಬದ್ಧವಾಗಿದೆ. ಅದರಲ್ಲಿ ಬಾಬುರಾವ್ ಹೆಸರು ಸಹ ಪ್ರಸ್ತಾಪಿಸಿದ್ದು, ಎಂಎಲ್‌ಸಿ ಸ್ಥಾನಮಾನ ಲಭ್ಯವಾಗಬಹುದು ಎಂಬ ಹೇಳಿಕೆಗೆ ಈ ಬೆಳವಣಿಗೆಗಳು ಪುಷ್ಠಿ ನೀಡಿದೆ.
ಗುರುಮಠಕಲ್: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ, ಚಿಂಚನಸೂರು ಮೇಲೆ ಹಲ್ಲೆ ಯತ್ನ
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವಿಧಾನ ಪರಿಷತ್ ಸದಸ್ಯತ್ವಕ್ಕೆ ಬಾಬುರಾವ್ ಚಿಂಚನಸೂರ(Baburao chinchansuru), ಲಕ್ಷ್ಮಣ ಸವದಿ(Laxman savadi) ಮತ್ತು ಆರ್. ಶಂಕರ್(R Shankar) ರಾಜಿನಾಮೆ ನೀಡಿದ್ದರು. ಬಿಜೆಪಿಯಿಂದ ಎಂಎಲ್‌ಸಿ ಆಗಿದ್ದ ಬಾಬುರಾವ್ ಚಿಂಚನಸೂರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಘರ್ ವಾಪಸಿ ಆಗಿ ಗುರುಮಠಕಲ್ ವಿಧಾನಸಭೆಗೆ ಸ್ಪರ್ಧಿಸಿ ಸೋಲುಂಡಿದ್ದಾರೆ. ಕಲ್ಯಾಣ ಕರ್ನಾಟಕ (Kalyana karnataka)ಭಾಗದ ಕೋಲಿ ಸಮಾಜದ ಪ್ರಭಾವಿ ಮತ್ತು ಹಿರಿಯ ನಾಯಕರಾಗಿರುವ ಹಾಗೂ ಮಾಜಿ ಸಚಿವ ಚಿಂಚನಸೂರ್ ಅವರನ್ನು ಮುಂಬರುವ ತಾಪಂ, ಜಿಪಂ ಮತ್ತು ಲೋಕಸಭೆ ಚುನಾವಣೆ ದೂರದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಎಂಎಲ್‌ಸಿ ಆಯ್ಕೆ ಮಾಡಿದರೂ ಆಶ್ಚರ್ಯಪಡಬೇಕಿಲ್ಲ ಎನ್ನಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸಂಪೂರ್ಣ ಬಹುಮತದಿಂದ ಸರಕಾರ ರಚನೆಯಾಗಿದ್ದು. ವಿಧಾನಸಭೆಗೆ 3 ಸ್ಥಾನದಲ್ಲಿ 2 ಸ್ಥಾನ ಕಾಂಗ್ರೆಸ್ ಹಾಗೂ 1 ಸ್ಥಾನವನ್ನು ಬಿಜೆಪಿ ಅವಿರೋಧ ಆಯ್ಕೆ ಮಾಡಬಹುದಾದ ಶಾಸಕರ ಸಂಖ್ಯಾಬಲ ಪಕ್ಷಗಳು ಹೊಂದಿವೆ. ಇದರಿಂದ ಎಂಎಲ್‌ಸಿ ಆಗಿದ್ದ ಬಾಬುರಾವ್ ಚಿಂಚನಸೂರ ಮತ್ತೆ ಅದೇ ಸ್ಥಾನಕ್ಕೆ ಆಯ್ಕೆ ಮಾಡಬಹುದೆಂಬ ಆಸೆ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.
ಬಾಬುರಾವ್ ಚಿಂಚನಸೂರ ಅವರು ಚಿತ್ತಾಪೂರ ಕ್ಷೇತ್ರದಿಂದ 1989, 1994, 1999ರಲ್ಲಿ ಹ್ಯಾಟ್ರಿಕ್ ಗೆಲುವು ಪಡೆದ ನಂತರ ಗುರುಮಠಕಲ್ ನಲ್ಲಿ 2008 ಮತ್ತು 2013ರಲ್ಲಿ ಶಾಸಕನಾಗಿ ಗೆಲುವು ಪಡೆದಿದ್ದಾರೆ. 2023ರಲ್ಲಿ ಕಾರ್ ಅಪಘಾತದಲ್ಲಿ ಕಾಲು ಮುರಿತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಪ್ರಚಾರಕ್ಕೆ ಬಾರಲು ಆಗದಿದ್ದರೂ ಪ್ರಬಲ ಪೈಪೋಟಿ ನೀಡಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವಧಿಯಲ್ಲಿ 1999 ರಿಂದ 2004ರವರೆಗೆ ಮುಜುರಾಯಿ, ಸಣ್ಣ ಉಳಿತಾಯ, ಲಾಟರಿ, ಬಂದೀಖಾನೆ ಸೇರಿ ಸಪ್ತಖಾತೆ ಸಚಿವರಾಗಿದ್ದರು. ಸಿದ್ದರಾಮಯ್ಯ ಸರಕಾರದಲ್ಲಿ 2013ರಿಂದ 2016ರವೆಗೆ ಜವಳಿ ಬಂದರು ಮತ್ತು ಒಳನಾಡು ಸಚಿವರಾಗಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಸಿದ್ದರಾಮಯ್ಯ ಸರಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ 2016ರಲ್ಲಿ ಚಿಂಚನಸೂರ್ ಸಚಿವ ಸ್ಥಾನದಿಂದ ಕೈಬಿಟ್ಟು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ಗೊಂಡಿದ್ದರು.
2018ರಲ್ಲಿ ಕಾಂಗ್ರೆಸ್‌ನಿಂದ ಸೋತ ನಂತರ ನನ್ನ ಸೋಲಿಗೆ ಕಾಂಗ್ರೆಸ್ ಪಕ್ಷದ ನಾಯಕರು ಕಾರಣ ಎಂದೇಳಿ ಲೋಕಸಭೆ ಚುನಾವಣೆಯಲ್ಲಿ ಡಾ. ಖರ್ಗೆರನ್ನು ಸೋಲಿಸುವ ಪಣ ತೊಟ್ಟು 2019ರಂದು ಬಿಜೆಪಿಗೆ ಸೇರ್ಪಡೆಯಾಗಿ ಖರ್ಗೆಯನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಬಿಜೆಪಿ ಸರಕಾರ ಅವರಿಗೆ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಮತ್ತು ಎಂಎಲ್‌ಸಿ ಸ್ಥಾನಮಾನ ನೀಡಿದ್ದರು. ಡಾ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಮಾ.20 ರಂದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವುಕುಮಾರ್ ಅವರ ಮನೆಯಲ್ಲಿ ಘರ ವಾಪಸ್ ಆಗಿದ್ದರು.
ನಮ್ಮ ಪಕ್ಷ ನಂಬಿ ಬಂದಿರುವ ಜಗದೀಶ ಶೆಟ್ಟರ್, ಲಕ್ಷ ್ಮಣ ಸವದಿ ಮತ್ತು ಕೋಲಿ ಸಮಾಜದ ಪ್ರಬಲ ನಾಯಕ ಬಾಬುರಾವ್ ಚಿಂಚನಸೂರ ಇವರೆಲ್ಲರೂ ಈಗ ಕಾಂಗ್ರೆಸ್ ಪಕ್ಷದ ಬಹುದೊಡ್ಡ ಶಕ್ತಿಯಾಗಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಪಕ್ಷ ನಿರ್ಧರಿಸಿದೆ. ಅದು ಏನೆಂಬುದು ಶೀಘ್ರದಲ್ಲಿ ರಾಜ್ಯಕ್ಕೆ ಗೊತ್ತಾಗಲಿದೆ.
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ಕಲಬುರಗಿ: ಕಾರು ಅಪಘಾತದಲ್ಲಿ ಚಿಂಚನಸೂರ್ ಕಾಲು ಮೂಳೆ ಮುರಿತ
ವಿಧಾನ ಪರಿಷÜತ್ ಚುನಾವಣೆ ಘೋಷಣೆಯಾಗಿದ್ದು, ಕಲ್ಯಾಣ ಭಾಗದ ಹಿಂದುಳಿದ ನಾಯಕ ಬಾಬುರಾವ್ ಚಿಂಚನಸೂರ ಆಗಿದ್ದಾರೆ. ಚಿಂಚನಸೂರಗೆ ಡಾ. ಮಲ್ಲಿಕಾರ್ಜುನ ಖರ್ಗೆ ಮೇಲೆ ವಿಶ್ವಾಸ ಹೊಂದಿದ್ದಾರೆ. ಈ ಭಾಗದಲ್ಲಿ ಹಿಂದುಳಿದ ವರ್ಗದ ನಾಯಕನಿಗೆ ಮತ್ತು ಬಿಜೆಪಿಯಲ್ಲಿದ್ದಾಗ ಎರಡೆರಡು ಹುದ್ದೆಯನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಪಕ್ಷವು ಅವರ ತ್ಯಾಗ ವ್ಯರ್ಥಮಾಡದೆ ನ್ಯಾಯ ಒದಗಿಸುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ
- ಎಸ್.ಕೆ. ಮೈನೋದ್ದೀನ್, ಪುರಸಭೆ ಸದಸ್ಯ ಗುರುಮಠಕಲ್