ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್ ಮುಕ್ತ ಮಾಡುವುದೇ ನಮ್ಮ ಗುರಿ: ಕೈ ನಾಯಕರ ವಿರುದ್ಧ ಗುಡುಗಿದ ದೇವೇಗೌಡ
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ತೆಲಂಗಾಣ ಹೊರತುಪಡಿಸಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಮುಂದಿನ ರಾಜಕೀಯ ಬೆಳವಣಿಗೆ ಕರ್ನಾಟಕದಲ್ಲಿ ಬಿಜೆಪಿ, ಮೋದಿ, ಅಮಿತ್ ಶಾ ಅವರೊಟ್ಟಿಗೆ ಹೋಗುತ್ತೇವೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದರು.
ಹಾಸನ (ಡಿ.4): ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ತೆಲಂಗಾಣ ಹೊರತುಪಡಿಸಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಮುಂದಿನ ರಾಜಕೀಯ ಬೆಳವಣಿಗೆ ಕರ್ನಾಟಕದಲ್ಲಿ ಬಿಜೆಪಿ, ಮೋದಿ, ಅಮಿತ್ ಶಾ ಅವರೊಟ್ಟಿಗೆ ಹೋಗುತ್ತೇವೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದರು.
ಇಂದು ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಈಗ ಎನ್‌ಡಿಎಗೆ ಪರ್ಯಾಯವಾಗಿ ಐಎನ್‌ಡಿಐಎ ರಚನೆ ಆಗಿದೆ. ಸುಮಾರು 46 ಪ್ರಾದೇಶಿಕ ಪಕ್ಷಗಳು ಸೇರಿ ಕಾಂಗ್ರೆಸ್ ನೇತೃತ್ವದಲ್ಲಿ ಐಎನ್ ಡಿ ಐಎ ರಚನೆ ಆಗಿದೆ. ದೇಶವನ್ನ ಆಳಿದಂತ ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇದರ ನೇತೃತ್ವ ವಹಿಸಿದೆ. ನಮ್ಮ ಪಕ್ಷ ಜೆಡಿಎಸಸ್ ಪಕ್ಷದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಇದೇ ರಾಷ್ಟ್ರದ ಸೆಕ್ಯೂಲರ್ ಪಾರ್ಟಿಯ ಎಲ್ಲಾ ಮುಖಂಡರುಗಳು, ಬಿಜೆಪಿ ಬಿಟ್ಟು ಬಹುತೇಕ ಎಲ್ಲಾ ಲೀಡರ್‌ಗಳು 2018 ರಲ್ಲಿಕರ್ನಾಟದಲ್ಲಿ ಭಾಗಿಯಾಗಿದ್ರು. ಆಗ ನಮ್ಮನ್ನ ಅಂದರೆ ಜೆಡಿಎಸ್ ಪಕ್ಷವನ್ನು ಹೊರಗಿಡಲೇ ಬೇಕು ಅಂತಾ ತೀರ್ಮಾನ ಮಾಡಿದವರು ಯಾರು? ಕುಮಾರಸ್ವಾಮಿ ಸರ್ಕಾರ ತೆಗಿಲೇ ಬೇಕು ಅಂತಾ ತೀರ್ಮಾನ ಮಾಡಿದವರು ಯಾರು? ಆ ಸಂದರ್ಭದಲ್ಲಿ ನಿತೀಶ್ ಕುಮಾರ್ ನಾಯಕತ್ವದಲ್ಲಿ ಪ್ರಯತ್ನ ನಡೆದಿತ್ತು. ಜೆಡಿಎಸ್ ಸೇರ್ಪಡೆಯಾದರೆ ನಾವು ಖಂಡಾತುಂಡವಾಗಿ ವಿರೋಧಿಸ್ತೇವೆ ಅಂತಾ ಹೇಳಿದ್ರು. ಆ ಸಂದರ್ಭದಲ್ಲಿ ನಮ್ಮನ್ನು ದೂಡಿದ್ದು ಕಾಂಗ್ರೆಸ್. ಆದರೆ ಮೋದಿಯವರು, ಅಮಿತ್ ಶಾ ನಮ್ಮನ್ನ ವೆಲ್ ಕಮ್ ಮಾಡಿದ್ರು ಎಂದು ಕಾಂಗ್ರೆಸ್ ಮಾಡಿದ ಷಡ್ಯಂತ್ರಗಳನ್ನು ಬಯಲಿಗೆಳೆದರು.
ಕಾಂಗ್ರೆಸ್ ಮುಕ್ತ ಮಾಡುವುದು ನಮ್ಮ ಗುರಿ:
ಜೆಡಿಎಸ್ ಪಕ್ಷ ಇರೋದೇ ಇಲ್ಲ, ಅದು ಲೆಕ್ಕಕ್ಕೆ ಇಲ್ಲ, ಆಟಕ್ಕೂ ಇಲ್ಲ ಎಂಬಂತೆ ಲಘುವಾಗಿ ಮಾತನಾಡಿದರು. ಮೊನ್ನೆಮೊನ್ನೆವರೆಗೂ ಹೀಗೆ ಮಾತಾಡ್ತಿದ್ದ ಕಾಂಗ್ರೆಸ್ ಮುಖಂಡರು. ಕಾಂಗ್ರೆಸ್ ನ ನಡೆವಳಿಕೆಯಿಂದ ಸೂಕ್ಷ್ಮವಾಗಿ ಗಮನಿಸಿದ ಮೋದಿ ಅವರು ಶಾ ಅವರು ನಮ್ಮನ್ನ ವೆಲ್ ಕಮ್ ಮಾಡಿದ್ರು. ಅಲ್ಲದೇ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ, ವೈಯಕ್ತಿಕವಾಗಿ ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಹೀಗಾಗಿ ಮುಂದಿನ ರಾಜಕೀಯ ಬೆಳವಣಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ಅದಕ್ಕಾಗಿ ನಾವು ಮೋದಿ ಮತ್ತು ಅಮಿತ್ ಶಾ ಒಟ್ಟಿಗೆ ಹೋಗುತ್ತೇವೆ. ಬಿಜೆಪಿಯೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಮುಕ್ತವನ್ನಾಗಿಸಲು ಹೋರಾಟ ಮಾಡೋದು ನಮ್ಮ ಗುರಿ
ಜನತಾ ಪಕ್ಷ ಜನಪರವಾಗಿದೆ:
ಜನತಾಪಕ್ಷದಿಂದ ರೈತರ, ಬಡವರ, ಗ್ರಾಮೀಣ ಜನರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿ ನಿಂತಿದೆ. ಪಕ್ಷವನ್ನ ಮುಗಿಸೇ ಬಿಡ್ತೀನಿ ಅಂದಾಗ ಮೋದಿಯವರು ನಮಗೆ ಒಂದು ಅವಕಾಶ ಮಾಡಿಕೊಟ್ರು. ಮುಂದಿನ ವಾರ ಅಮಿತ್ ಶಾ ಅವರು ಲೋಕಸಭಾ ಚುನಾವಣೆ ಸಂಬಂಧ ಮಾತುಕತೆಗೆ ಕರೆಯಬಹುದು. ಕುಮಾರಸ್ವಾಮಿಯವರು ಹೋಗಿ ಮಾತನಾಡಿಕೊಂಡು ಬರ್ತಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಪ್ರಜ್ವಲ್ ನಿಲ್ಲಲ್ಲ: ಭವಾನಿ ರೇವಣ್ಣ
ಭವಾನಿ ರೇವಣ್ಣ ಕಾರು ಅಪಘಾತ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡ, ಪಾಪಾ ಭವಾನಿ ರೇವಣ್ಣ ಅವರ ಬಗ್ಗೆ ಯಾಕೆ ಅನಗತ್ಯ ಚರ್ಚೆ ಮಾಡುತ್ತೀರಿ. ಈ ಹಿಂದೆ ಅವರಿಗೆ ಎರಡು ಮಂಡಿ ಆಪರೇಷನ್ ಆಗಿದೆ. ಅವರ ಆರೋಗ್ಯನೇ ಸರಿಯಿಲ್ಲ ಅನವಶ್ಯಕ ಚರ್ಚೆ ಮಾಡಬೇಡಿ ಎಂದರು.