ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಪ್ರಜ್ವಲ್ ನಿಲ್ಲಲ್ಲ: ಭವಾನಿ ರೇವಣ್ಣ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಿಂದ ಗೌಡರು ಸ್ಪರ್ಧಿಸ ಬಯಸಿದರೆ ನನ್ನ ಮಗ ಪ್ರಜ್ವಲ್‌ನನ್ನು ನಿಲ್ಲಿಸಲ್ಲ ಎಂದು ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ತಿಳಿಸಿದರು.
ಹಾಸನ (ಮೇ.19): ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನಾನು ಹೇಳಿದಂತೆ ಕ್ಷೇತ್ರದ ಅಭ್ಯರ್ಥಿ ಸ್ವರೂಪ್‌ರನ್ನು ಗೆಲ್ಲಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜನ್ಮದಿನಕ್ಕೆ ಉಡುಗೊರೆ ನೀಡಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಿಂದ ಗೌಡರು ಸ್ಪರ್ಧಿಸ ಬಯಸಿದರೆ ನನ್ನ ಮಗ ಪ್ರಜ್ವಲ್‌ನನ್ನು ನಿಲ್ಲಿಸಲ್ಲ ಎಂದು ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ತಿಳಿಸಿದರು.
ನಗರದ ಸಂಸದರ ನಿವಾಸದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೊದಲಿಗೆ ದೇವೇಗೌಡರು ಮುಂಬರುವ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದರು. ನಂತರ ರೇವಣ್ಣನವರು ದೇವೇಗೌಡರನ್ನು ಲೋಕಸಭೆಗೆ ಕಳುಹಿಸುತ್ತೇನೆಂದು ಹೇಳಿರುವ ವಿಷಯವನ್ನು ಗಮನಕ್ಕೆ ತಂದಾಗ, ಆ ಬಗ್ಗೆ ನನಗೆ ಗೊತ್ತಿಲ್ಲ. ನಿಂತರೂ ನಿಲ್ಲಬಹುದು. ಒಂದು ವೇಳೆ ನಿಂತರೆ ಬಹಳ ಸಂತೋಷ. ಹಾಸನದಲ್ಲಿ ನಿಂತರೆ ಇನ್ನೂ ಖುಷಿ. ಇನ್ನು ತಾತ ನಿಲ್ಲುತ್ತಾರೆ ಎಂದರೆ ಪ್ರಜ್ವಲ್‌ನನ್ನು ನಿಲ್ಲಿಸಲು ನಾನು ಹೋಗುವುದೇ ಇಲ್ಲ.
ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಮೊದಲ ಬಾರಿ ಡಿಸಿಎಂ ಹುದ್ದೆ!
ನನ್ನ ಮೊದಲ ಆದ್ಯತೆಯೇನಿದ್ದರೂ ದೇವೇಗೌಡರು ಎಂದರು. ದೇವೇಗೌಡರನ್ನು ಹಾಸನ ಲೋಕಸಭಾ ಕ್ಷೇತ್ರ ಬಿಟ್ಟುಕೊಂಡಿ ಎಂದು ನಾವು ಕೇಳಿಲ್ಲ. ಪ್ರಜ್ವಲ್‌ನನ್ನು ಲೋಕಸಭೆಗೆ ನಿಲ್ಲಿಸಬೇಕೆಂಬುದು ದೇವೇಗೌಡರ ತೀರ್ಮಾನ ಆಗಿತ್ತು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇನ್ನೆರಡು ತಿಂಗಳಾದ ಮೇಲೆ ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಮುಂದಿನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಭವಾನಿ ರೇವಣ್ಣ ನೇಮಕಗೊಳ್ಳುತ್ತಾರೆಂಬ ಸುದ್ದಿ ಕಿವಿಗೆ ಬಿದ್ದಿದೆ. ಆದರೆ ಆ ಕುರಿತು ಚರ್ಚೆಯೇ ಆಗಿಲ್ಲ ಎಂದು ಪ್ರತಿಕ್ರಿಯಿಸಿದರು.
ಭವಾನಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿರ್ವಹಿಸಲು ಸಿದ್ಧ: ಭವಾನಿ ರೇವಣ್ಣನವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಒಂದು ವೇಳೆ, ದೊಡ್ಡವರು ಈ ಜವಾಬ್ದಾರಿ ನೀಡಿದರೆ ಅವರು ನಿಭಾಯಿಸಲು ಸಿದ್ಧರಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಈವರೆಗೂ ಭವಾನಿ ರೇವಣ್ಣ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದ ಹಿರಿಯರು ಮತ್ತು ಮುಖಂಡರ ನಿಲುವಿಗೆ ನಮ್ಮ ಕುಟುಂಬದವರು ಬದ್ದರಾಗಿರುತ್ತೇವೆ. ಪಕ್ಷದಲ್ಲಿನ ದೊಡ್ಡವರು ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸಲು ಅವರು ಸಿದ್ಧರಿದ್ದಾರೆ ಎಂದರು. ಹಾಸನದಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಅವರು ಹೇಳಿದರು.
ದತ್ತರವರ ನೇತೃತ್ವದಲ್ಲಿ ಕಾರ್ಯಕರ್ತರ ಸಜ್ಜುಗೊಳಿಸಲು ಸಂಸದ ಪ್ರಜ್ವಲ್ ಕರೆ
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ನಡೆದಿಲ್ಲ: ಭವಾನಿ ರೇವಣ್ಣನವರಿಗೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿಕೆ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು ಕಡೂರಿನ ಯಗಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಭವಾನಿ ರೇವಣ್ಣ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತಂತೆ ಚರ್ಚೆ ನಡೆದಿಲ್ಲ. ಪಕ್ಷದ ಹಿರಿಯರು ಮತ್ತು ಮುಖಂಡರ ನಿಲುವಿಗೆ ನಮ್ಮ ಕುಟುಂಬ ಪಕ್ಷದ ನಿರ್ಣಯಕ್ಕೆ ಬದ್ದರಾಗುತ್ತೇವೆ ಎಂದರು. ಅಲ್ಲದೆ ಹಾಸನದಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಿದ್ದೇವೆ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಎಂದ ಅವರು, ಪಕ್ಷದ ದೊಡ್ಡವರು ಕೊಟ್ಟಜವಾಬ್ದಾರಿಯನ್ನು ನಿಭಾ ಯಿಸುವಲ್ಲಿ ಹಿಂಜರಿಯುವುದಿಲ್ಲ ಎಂದರು. ಭವಾನಿ ರೇವಣ್ಣ ಅವರಿಗೆ ಯಾವ ಜವಾಬ್ದಾರಿ ಕೊಟ್ಟರೂ ಕೆಲಸ ಮಾಡಲು ಸಿದ್ಧರಿದ್ದು, ರಾಜ್ಯವನ್ನು ಸುತ್ತಿ ಮಹಿಳಾ ಸಂಘಟನೆ ಹಾಗು ಯುವ ಸಂಘಟನೆ ಮಾಡುವ ಶಕ್ತಿ ಪಕ್ಷಕ್ಕಿದೆ ಎಂದು ಹೇಳಿದರು.