Asianet Suvarna News Asianet Suvarna News

ಸಾಯೋ ಹಾಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯ್ಬೇಕಿತ್ತು, ನನ್ನ ಕಾರೇ ಆಗ್ಬೇಕಿತ್ತಾ?:ಬೈಕ್ ಸವಾರನಿಗೆ ಭವಾನಿ ರೇವಣ್ಣ ನಿಂದನೆ!

ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ಶಾಸಕ ಎಚ್‌ಡಿ ರೇವಣ್ಣರ ಪತ್ನಿ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಸೊಸೆ ಭವಾನಿ ರೇವಣ್ಣ ಬೈಕ್‌ ಸವಾರನಿಗೆ ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮರೆತು ವರ್ತಿಸಿದ ಭವಾನಿ ರೇವಣ್ನರ ನಡೆಗೆ ಆಕ್ರೋಶ ವ್ಯಕ್ತಪಡಸಿದ್ದಾರೆ.

Road accident Inhuman behavior by Bhavani Revanna at mysuru rav
Author
First Published Dec 4, 2023, 9:21 AM IST

ಮೈಸೂರು (ಡಿ.4): ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ಶಾಸಕ ಎಚ್‌ಡಿ ರೇವಣ್ಣರ ಪತ್ನಿ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಸೊಸೆ ಭವಾನಿ ರೇವಣ್ಣ ಬೈಕ್‌ ಸವಾರನಿಗೆ ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮರೆತು ವರ್ತಿಸಿದ ಭವಾನಿ ರೇವಣ್ನರ ನಡೆಗೆ ಆಕ್ರೋಶ ವ್ಯಕ್ತಪಡಸಿದ್ದಾರೆ.

ನಿನ್ನೆ(ಡಿ.3ರಂದು) ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಹೊರಟ್ಟಿದ್ದ ವೇಳೆ ನಡೆದಿರುವ ಘಟನೆ. ರಾಮಪುರ ಗೇಟ್ ಬಳಿ ಚಲಿಸುತ್ತಿದ್ದ ಕಾರು. ಈ ವೇಳೆ ಎದುರುಗಡೆಯಿಂದ ರಾಂಗ್ ರೂಟ್‌ನಲ್ಲಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಕೊಂಚ ಜಖಂಗೊಂಡಿದೆ. ಬೈಕ್ ಡಿಕ್ಕಿಯಾಗುತ್ತಿದ್ದಂತೆ ಸಿಟ್ಟಿನಿಂದಲೇ ಕೆಳಗಿಳಿದ ಭವಾನಿ ರೇವಣ್ಣ, ಕೆಳಗ್ಗೆ ಬಿದ್ದ ಬೈಕ್‌ ಸವಾರನಿಗೆ ಮಾನವೀಯತೆ ಮರೆತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಮುಂಬೈ ಸೈಬರ್‌ ಪೊಲೀಸ್‌ ಸೋಗಲ್ಲಿ ಮಹಿಳಾ ಟೆಕ್ಕಿಗೆ ₹3.46 ಲಕ್ಷ ವಂಚನೆ!

ಬಸ್ಸಿನ ಗಾಲಿಗೆ ಸಿಕ್ಕಾಕೊಂಡು ಸಾಯಬೇಕಿತ್ತು!

ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಗಾಯಗೊಂಡಿದ್ದರೂ ಭವಾನಿ ರೇವಣ್ಣ ಮಾನವೀಯತೆ ಮರೆತು ವರ್ತಿಸಿದ್ದಾರೆ. ಸಾಯೋ ಆಗಿದ್ರೆ ಬಸ್ಸಿನ ಚಕ್ರಕ್ಕೆ ಸಿಕ್ಕಾಕೊಂಡು ಸಾಯಬೇಕಿತ್ತು, ಒಂದೂವರೆ ಕೋಟಿ ಬೆಲೆಬಾಳುವ ನನ್ನ ಕಾರೇ ಆಗಬೇಕಿತ್ತಾ ಎಂದು ಅಹಂಕಾರಕ ಮಾತುಗಳಿಂದ ನಿಂದಿಸಿದ್ದಾರೆ. ಅಷ್ಟು ಸಾಲದೆಂಬಂತೆ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟುಹಾಕುವಂತೆ ಹೇಳಿದ್ದಾರೆ. ಈ ವೇಳೆ ಸ್ಥಳೀಯರು ಮಧ್ಯೆ ಪ್ರವೇಶಿಸಿದ್ದಾರೆಕ. ಏನೋ ತಪ್ಪಾಗಿದೆ ಬಿಟ್ಟುಬಿಡಿ ಎಂದಿ ಸ್ಥಳೀಯರ ಮೇಲೂ ಭವಾನಿ ರೇವಣ್ಣ ಕೂಗಾಡಿದ್ದಾರೆ. ಏನು ಬಿಟ್ಟುಬಿಡೋದು ಈಗ ಕಾರು ರಿಪೇರಿಕ ಮಾಡಿಸೋಕೆ ಐವತ್ತು ಲಕ್ಷ ಖರ್ಚು ಬರುತ್ತೆ ನೀವು ಕೊಡ್ತೀರಾ ಎಂದು ತರಾಟೆಗೆ ತೆಗೆದುಕಕೊಂಡಿದ್ದಾರೆ. ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಎಸ್‌ಐ ಬರುವಂತೆ ಸೂಚಿಸಿದ್ದಾರೆ ಘಟನೆ ಮಾಹಿತಿ ತಿಳಿದ ಸಾಲಿಗ್ರಾಮ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು ಬಳಿಕ ಅಪಘಾತ ಪ್ರಕರಣ ಸಂಬಂಧ ತಂದ್ರೆಕೊಪ್ಪಲು ಗ್ರಾಮದ ಶಿವಣ್ಣ 

ಬೆಂಗಳೂರು: ಮನೆ ಬಿಟ್ಟು ಓಡಿ ಬಂದು ಮದುವೆಯಾಗಿದ್ದ ಯುವತಿ ಆತ್ಮಹತ್ಯೆ, ಕಾರಣ ನಿಗೂಢ?

Follow Us:
Download App:
  • android
  • ios