ಜೈಲುವಾಸ ತಪ್ಪಿಸಲು ಕೇಜ್ರಿವಾಲ್ ತಂತ್ರ, ಆಪ್ ಕುತಂತ್ರ ಬಯಲು ಮಾಡಿದ ಕಾಂಗ್ರೆಸ್ ನಾಯಕ!

ದೆಹಲಿ ಸುಗ್ರೀವಾಜ್ಞೆ ವಿರುದ್ಧ ಕಾಂಗ್ರೆಸ್ ಸ್ಪಷ್ಟ ಬೆಂಬಲ ನೀಡಿದ ಹಿನ್ನಲೆಯಲ್ಲಿ ಸತತ ವಾಗ್ದಾಳಿ ನಡೆಸುತ್ತಿದ್ದಾರೆ. ವಿಪಕ್ಷಗಳ ಮೈತ್ರಿಯಿಂದಲೂ ಒಂದು ಕಾಲು ಹೊರಗಿಟ್ಟಿದ್ದಾರೆ. ಒಂದೆಡೆ ಕಾಂಗ್ರೆಸ್ ಬೆಂಬಲ ಕೇಳಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರ ವಿರುದ್ದವೇ ಸತತ ಆರೋಪ ಮಾಡುತ್ತಿರುವ ಕೇಜ್ರಿವಾಲ್ ಕುತಂತ್ರವನ್ನು ಅಜಯ್ ಮಾಕೇನ್ ಬಹಿರಂಗಪಡಿಸಿದ್ದಾರೆ.

Arvind Kejriwal secret alliance with BJP to break Opposition unity Ajay Maken slams AAP ckm

ನವದೆಹಲಿ(ಜೂ.25): ಆಮ್ ಆದ್ಮಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ಇಬ್ಬರು ನಾಯಕರು ಜೈಲು ಸೇರಿದ್ದಾರೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಜೈಲು ಭೀತಿ ಅನುಭವಿಸುತ್ತಿದ್ದಾರೆ. ಇದರಿಂದ ಪಾರಾಗಲು ಅರವಿಂದ್ ಕೇಜ್ರಿವಾಲ್, ವಿಪಕ್ಷಗಳ ಮೈತ್ರಿ ಕೂಟ ಮುರಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿ ಗೆಲುವಿಗೆ ನೆರವು ನೀಡುತ್ತಿದ್ದಾರೆ. ಇಷ್ಟೇ ಅಲ್ಲ ಬಿಜೆಪಿಗೆ ಸಹಾಯ ಮಾಡಿ ಜೈಲುವಾಸ ತಪ್ಪಿಸಲು ಕುತಂತ್ರ ಹೆಣೆದಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಆರೋಪಿಸಿದ್ದಾರೆ.

ದೆಹಲಿ ಸುಗ್ರೀವಾಜ್ಞೆ ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಹಲವು ಪಕ್ಷಗಳ ಬೆಂಬಲ ಕೋರಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಆದರೆ ಕಾಂಗ್ರೆಸ್ ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಮೈತ್ರಿ ಸಭೆಯಲ್ಲೂ ಅರವಿಂದ್ ಕೇಜ್ರಿವಾಲ್ ಪಾರ್ಟಿ ಕಾಂಗ್ರೆಸ್ ಬೆಂಬಲ ಕೋರಿದ್ದರು. ಆದರೆ ನಿರ್ಧಾರ ಹೊರಬೀಳಲಿಲ್ಲ. ಅಷ್ಟರಲ್ಲೇ ಕೇಜ್ರಿವಾಲ್, ಬೆಂಬಲ ನೀಡಿದ್ದರೆ ಮೈತ್ರಿಯಿಂದ ಹೊರಗುಳಿಯುವ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕವೂ ಕಾಂಗ್ರೆಸ್ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಕೇಜ್ರಿವಾಲ್, ಮತ್ತೊಂದೆಡೆ ತಮ್ಮ ಪಕ್ಷದ ವಕ್ತಾರರು ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಅಜಯ್ ಮಾಕೇನ್ ಹೇಳಿದ್ದಾರೆ.

ಬಿಜೆಪಿ ಮಣಿಸಲು ಪಣ ತೊಟ್ಟ 17 ವಿಪಕ್ಷಗಳು: ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್‌ ಷರತ್ತು

ರಾಜಸ್ಥಾನ ಮುಖ್ಯಮಂತ್ರಿ,ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ಸಚಿನ್ ಪೈಲೆಟ್ ಸೇರಿದಂತೆ ಹಲವು ನಾಯಕರ ವಿರುದ್ಧ ಆಮ್ ಆದ್ಮಿ ಪಾರ್ಟಿ ಸುಳ್ಳು ಆರೋಪ ಹಾಗೂ ಟೀಕೆ ಮಾಡುತ್ತಿದೆ. ಇತ್ತ ಕಾಂಗ್ರೆಸ್‌ನಿಂದಲೇ ಬೆಂಬಲ ಕೋರುತ್ತಿದೆ. ಅರವಿಂದ್ ಕೇಜ್ರಿವಾಲ್ ಡಬಲ್ ಸ್ಟಾಂಡರ್ಡ್ ಇಲ್ಲೇ ಅರ್ಥವಾಗುತ್ತದೆ. ಇದರ ಹಿಂದೆ ಒಂದೇ ಉದ್ದೇಶವಿದೆ. ಕೇಜ್ರಿವಾಲ್ ಆಪ್ತರು, ಸಚಿವರ ಪೈಕಿ ಇಬ್ಬರ ಜೈಲು ಸೇರಿದ್ದಾರೆ. ಕೇಜ್ರಿವಾಲ್ ನಡೆಸಿರುವ ಭ್ರಷ್ಟಾಚಾರಗಳು ಒಂದೆರೆಡಲ್ಲ. ಇದರ ಭೀತಿ ಕೇಜ್ರಿವಾಲ್‌ಗೆ ಕಾಡುತ್ತಿದೆ. ಬಿಜೆಪಿಯನ್ನು ಒಲೈಕೆ ಮಾಡಿ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕೇಜ್ರಿವಾಲ್ ಯತ್ನಿಸುತ್ತಿದ್ದಾರೆ ಎಂದು ಮಾಕೇನ್ ಆರೋಪಿಸಿದ್ದಾರೆ.

 

 

ವಿಪಕ್ಷಗಳ ಮೈತ್ರಿ ಹಾಗೂ ಒಗ್ಗಟ್ಟು ಮುರಿಯಲು ಕೇಜ್ರಿವಾಲ್ ಯತ್ನಿಸುತ್ತಿದ್ದಾರೆ. ಇದು 2024ರ  ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಲಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ನಾಯಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೈತ್ರಿ ಕೂಟದಿಂದ ಹೊರನಡೆಯುವ ಎಚ್ಚರಿಕೆ ನೀಡುತ್ತಿದ್ದಾರೆ. ಬಿಜೆಪಿ ಜೊತೆ ಮೈತ್ರಿಯಾಗಿರುವ ಆಮ್ ಆದ್ಮಿ ಪಾರ್ಟಿ ಇದೀಗ ಈ ಕಸರತ್ತು ನಡೆಸುತ್ತಿದೆ ಎಂದು ಮಾಕೇನ್ ಹೇಳಿದ್ದಾರೆ.

ವಿಪಕ್ಷ ಸಭೆ ಬೆನ್ನಲ್ಲೇ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟ ಆಮ್ ಆದ್ಮಿ!

ಕೇಜ್ರಿವಾಲ್ ದೆಹಲಿಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ. ಈ ಹಣವನ್ನು ಗೋವಾ, ಪಂಜಾಬ್, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಖಂಡ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಳಕೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಗೆಲವಿಗೆ ನೆರವಾಗಿದ್ದಾರೆ. ಸಾಮಾನ್ಯರ ತೆರಿಗೆ ಹಣವನ್ನು ದುರುಪಯೋಗ ಮಾಡಿರುವ ಅರವಿಂದ್ ಕೇಜ್ರಿವಾಲ್ 171 ಕೋಟಿ ರೂಪಾಯಿ ನೀಡಿ ತಮ್ಮ ಮನೆಯನ್ನು ನವೀಕರಣ ಮಾಡಿದ್ದಾರೆ. ಇವೆಲ್ಲೂ ಕೇಜ್ರಿವಾಲ್ ಭ್ರಷ್ಟಾಚಾರದ  ಸಣ್ಣ ಸಣ್ಣ ಝಲಕ್ ಎಂದು ಮಾಕೇನ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios