ವಿಪಕ್ಷ ಸಭೆ ಬೆನ್ನಲ್ಲೇ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟ ಆಮ್ ಆದ್ಮಿ!

ಬಿಹಾರದಲ್ಲಿ ಕಾಂಗ್ರೆಸ್, ಟಿಎಂಸಿ, ಎನ್‌ಸಿಪಿ, ಆರ್‌ಜೆಡಿ, ಜೆಡಿಯು ಸೇರಿದಂತೆ 16 ಪಕ್ಷಗಳು ಮೈತ್ರಿ ಸಭೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಒಗ್ಗಟ್ಟಾಗಿ ಹೋರಾಡಲು ಚರ್ಚೆ ನಡೆಸಲಾಗಿದೆ. ಆದರೆ ಮೈತ್ರಿ ಸಭೆ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ಈ ಒಕ್ಕೂಟದಿಂದ ಒಂದು ಕಾಲು ಹೊರಗಿಟ್ಟಿದೆ.
 

AAP warns all parties on participate of  Opposition meet in future only Congress Opposes Delhi Ordinance ckm

ಪಾಟ್ನಾ(ಜೂ.23) ಮುಂಬರುವ ಲೋಕಸಭಾ ಚುನಾವಣೆಗೆ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಡಲು ಬೃಹತ್ ಮೈತ್ರಿಯ ಮೊದಲ ಸಭೆ ನಡೆದಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಈ  ಮೈತ್ರಿ ಸಭೆ ನಡೆಸಲಾಗಿದೆ. ನಿತೀಶ್ ಕುಮಾರ್ ಅವರ ಜೆಡಿಯು, ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ, ಟಿಎಂಸಿ, ಎನ್‌ಸಿಪಿ, ಆಪ್ ಸೇರಿದಂತೆ 16 ಪಕ್ಷಗಳು ಈ ಮೈತ್ರಿ ಸಭೆಯಲ್ಲಿ ಪಾಲ್ಗೊಂಡಿದೆ. ಆದರೆ ಈ ಸಭೆ ನಡೆದ ಹೊರಬಂದ ಬೆನ್ನಲ್ಲೇ ಮೈತ್ರಿಯಲ್ಲಿ ಬಿರುಕು ಕಾಣಸಿಕೊಳ್ಳಲು ಆರಂಭಿಸಿದೆ. ಸಭೆ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟಿದೆ.

ದೆಹಲಿ ಸರ್ಕಾ​ರಕ್ಕೆ ಸಂಬಂಧಿ​ಸದ ಸುಗ್ರೀವಾಜ್ಞೆಯಲ್ಲಿ ಮುಖ್ಯಕಾರ್ಯದರ್ಶಿಗೆ ಸಚಿವ ಸಂಪುಟಕ್ಕಿಂತ ಉನ್ನತ ಸ್ಥಾನ ನೀಡಲಾ​ಗಿ​ದೆ. ಇದರ ವಿರುದ್ದ ಈಗಾಗಲೇ ಅರಲಿಂದ್ ಕೇಜ್ರಿವಾಲ್ ಹಲವು ಪಕ್ಷಗಳ ಬೆಂಬಲ ಕೋರಿದೆ. ಆದರೆ ಕಾಂಗ್ರೆಸ್ ಈ ಕುರಿತು ಆಪ್‌ಗೆ ಬೆಂಬಲ ನೀಡುವ ಯಾವುದೇ ಖಚಿತತೆ ನೀಡಿಲ್ಲ.ಇಂದಿನ ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ  ಇದೇ ವಿಚಾರ ಮುಂದಿಟ್ಟಿದೆ. ಕೇಂದ್ರದ ವಿರುದ್ದ ಆಪ್ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿದಿದ್ದರೆ, ಮೈತ್ರಿ ಕೂಟದಿಂದ ಹೊರಗುಳಿಯುವುದಾಗಿ ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ ನೀಡಿದೆ.

ವಿಪಕ್ಷಗಳ ಬೃಹತ್‌ ಸಭೆಗೂ ಮುನ್ನವೇ ಒಡಕು? ಆರ್‌ಎಲ್‌ಡಿ ನಾಯಕ ಗೈರು!

ಕೇಂದ್ರದ ವಿರುದ್ಧ ಆಪ್ ನಡೆಸುತ್ತಿರುವ ಹೋರಾಟದಲ್ಲಿ ಕಾಂಗ್ರೆಸ್ ಇದುವರೆಗೂ ಯಾವುದೇ ನಿಲುವು ತೆಗೆದುಕೊಂಡಿಲ್ಲ. ಈಗಾಗಲೇ ಹಲವು ಪಕ್ಷಗಳು ಕೇಜ್ರಿವಾಲ್‌ಗೆ ಬೆಂಬಲ ಸೂಚಿಸಿದೆ. ಇದಕ್ಕಾಗಿ ಕೇಜ್ರಿವಾಲ್, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿ ಹಲವು ಪ್ರಮುಖ ನಾಯಕರನ್ನು ಭೇಟಿಯಾಗಿದ್ದರು. ಕೇಂದ್ರಕ್ಕೆ ದೆಹಲಿಯ ಆಡಳಿತ ಸೇವೆಗಳ ಮೇಲೆ ಅಧಿಕಾರ ನೀಡಿರುವ ಸುಗ್ರೀವಾಜ್ಞೆ ವಿರುದ್ಧ ರಾಜ್ಯ​ಸ​ಭೆ​ಯಲ್ಲಿ ಮತ ಹಾಕಿ ಆಪ್‌ ನಾಯ​ಕ ಅರವಿಂದ್‌ ಕೇಜ್ರಿವಾಲ್‌ಗೆ ಬೆಂಬಲ ಸೂಚಿಸುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಘೋಷಿಸಿದ್ದರು. ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ತಮ್ಮ ಪರ ಬೆಂಬಲ ಪಡೆಯಲು ದೇಶದ ಬಿಜೆಪಿಯೇತರ ಎಲ್ಲ ಪಕ್ಷಗಳ ಮುಖಂಡರನ್ನು ಭೇಟಿ ಮಾಡುತ್ತಿರುವ ಆಪ್‌ ಮುಖ್ಯಸ್ಥ ಕೇಜ್ರಿವಾಲ್‌ ಲಖನೌದಲ್ಲಿ ಅಖಿಲೇಶ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅಖಿಲೇಶ್‌, ‘ಸುಗ್ರೀವಾಜ್ಞೆ ವಿಷಯದಲ್ಲಿ ನಮ್ಮ ಪಕ್ಷವು ದೆಹಲಿ ಆಪ್‌ ಸರ್ಕಾರವನ್ನು ಬೆಂಬಲಿಸುತ್ತದೆ’ ಎಂದಿದ್ದರು.

ಪಾಟ್ನಾದಲ್ಲಿಂದು ಮಹಾಘಟಬಂಧನ್‌ ಮೀಟಿಂಗ್‌: ಮೋದಿ ಕಟ್ಟಿಹಾಕಲು ವಿಪಕ್ಷ ನಾಯಕರ ರಣತಂತ್ರ!

ಸಭೆಗೂ ಮುನ್ನ ಒಡಕು:
ವಿಪಕ್ಷಗಳ ಸಭೆಗೂ ಮುನ್ನವೇ ಒಡಕು ಸ್ಫೋಟಗೊಂಡಿತ್ತು. ಆರ್‌ಎಲ್‌ಡಿ ನಾಯಕ ಜಯಂತ್‌ ಚೌಧ​ರಿ ಮತ್ತು ಮಾಯಾವತಿ ಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದರು. ‘ಬಾಯಿಯಲ್ಲಿ ರಾಮನ ಜಪಿಸುತ್ತೀರಿ, ಆದರೆ ಕಂಕುಳ​ಲ್ಲಿ ಚೂರಿ ಇಟ್ಟುಕೊಂಡಿದ್ದೀರಿ’ ಎಂದು ವಿಪಕ್ಷಗಳನ್ನು ಮಾಯಾವತಿ ಟೀಕಿಸಿದ್ದಾರೆ. ಹಾಗಾಗಿ ಉತ್ತರ ಪ್ರದೇಶದಿಂದ ಕೇವಲ ಸಮಾಜವಾದಿ ಪಕ್ಷ ಮಾತ್ರ ಸಭೆಯಲ್ಲಿ ಭಾಗಿಯಾಗುತ್ತಿದೆ. ಇನ್ನು ಕೌಟುಂಬಿಕ ಕಾರಣದಿಂದಾಗಿ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಚೌಧರಿ ಸಭೆಗೆ ಹಾಜರಾಗುತ್ತಿಲ್ಲ ಎಂದಿದ್ದರು. 
 

Latest Videos
Follow Us:
Download App:
  • android
  • ios