ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಬಳಿಕ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬೆಲೆ ಏರಿಕೆ, ಧರ್ಮ ಸಂಘರ್ಷದಿಂದಾಗಿ ಜನರು ಬೇಸತ್ತುಹೋಗಿದ್ದಾರೆ. ಈಗ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಕೆಪಿಸಿಸಿ ಸಹಕಾರಿ ರಾಜ್ಯ ಸಂಚಾಲಕ ಆರ್‌.ಎಂ. ಮಂಜುನಾಥ್‌ಗೌಡ ಹೇಳಿದರು.

ಶಿವಮೊಗ್ಗ (ಫೆ.8) : ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಬಳಿಕ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬೆಲೆ ಏರಿಕೆ, ಧರ್ಮ ಸಂಘರ್ಷದಿಂದಾಗಿ ಜನರು ಬೇಸತ್ತುಹೋಗಿದ್ದಾರೆ. ಈಗ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಕೆಪಿಸಿಸಿ ಸಹಕಾರಿ ರಾಜ್ಯ ಸಂಚಾಲಕ ಆರ್‌.ಎಂ. ಮಂಜುನಾಥ್‌ಗೌಡ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್‌ ಗಾಂಧಿ ಯಾತ್ರೆ ಮಾಡಿದರು. ಬಿಸಿಲು, ಚಳಿ, ಮಳೆ, ಹಿಮವನ್ನು ಲೆಕ್ಕಿಸದೇ, ರಜೆ ಪಡೆಯದೇ ಯಾತ್ರೆಯಲ್ಲಿ ನಡೆದರು. ಇದರ ಪರಿಣಾಮ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದರು.

Assembly election: ಇಂದು ಭದ್ರಾವತಿ, ತೀರ್ಥಹಳ್ಳಿಗೆ ಡಿ.ಕೆ.ಶಿವಕುಮಾರ್‌

ಈ ಯಾತ್ರೆ ಬಳಿಕ ರಾಹುಲ್‌ ಗಾಂಧಿ ವರ್ಚಸ್ಸೇ ಬದಲಾಗಿ ಹೋಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವಿಭಿನ್ನ ಹವಾಮಾನದಲ್ಲಿಯೂ ಅಂಜದೇ ರಾಹುಲ್‌ ನಡೆಸಿದ ಯಾತ್ರೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಜನ ರಾಹುಲ್‌ ಅವರಿಗೆ ತೋರಿದ ಪ್ರೀತಿ, ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದು ಮರೆಯಲು ಸಾಧ್ಯವೇ ಇಲ್ಲ. ಕಾಶ್ಮೀರ ತಲುಪಿದಾಗ ಅಲ್ಲಿದ್ದ ವಾತಾವರಣವೇ ಬೇರೆ. ಅಲ್ಲಿ ಸುರಿಯುತ್ತಿದ್ದ ಹಿಮದ ಮಳೆಯ ನಡುವೆಯೂ ರಾರ‍ಯಲಿ ನಡೆಸಿದ ಅವರು ನಾನು ಪಕ್ಷಕ್ಕಾಗಿ ನಡೆಸಿದ ಯಾತ್ರೆಯಲ್ಲ, ಒಡೆದ ಮನಸ್ಸನ್ನು ಜೋಡಿಸಲು ದೇಶಕ್ಕಾಗಿ ನಡೆಸಿದ ಯಾತ್ರೆ ಎಂದಾಗ ಜನ ಅಭೂತಪೂರ್ವವಾಗಿ ಸ್ಪಂದಿಸಿದರು. ತಮಗೂ ಇದೊಂದು ಮರೆಯದ ಅನುಭವ ಎಂದು ಹೇಳಿಕೊಂಡರು.

ವೈಷಮ್ಯದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಾಗಿದೆ. ಕಾಂಗ್ರೆಸ್‌ ಆ ಕೆಲಸ ಮಾಡುತ್ತಿದೆ ಎಂಬ ಅವರ ಮಾತು ಈಗಲೂ ಕಿವಿಯಲ್ಲಿ ಗುಂಯ್‌ ಗುಡುತ್ತಿದೆ. ಬೆಲೆ ಏರಿಕೆ, ನಿರುದ್ಯೋಗದಿಂದ ತತ್ತರಿಸಿರುವ ಜನ ಬದಲಾವಣೆ ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದ ಕೂಸಾದ ಅದಾನಿ ಕಂಪನಿಯ ಹಗರಣದಿಂದ ಆರ್ಥಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮ ಊಹಿಸಲೂ ಸಾಧ್ಯವಿಲ್ಲ. ಇದೀಗ ಬಿಜೆಪಿಯ ಸತ್ಯದರ್ಶನವಾಗಿದೆ ಎಂದು ಹೇಳಿದರು.

ಕೋಟಿ ಕೋಟಿ ಉದ್ಯೋಗ ಕೊಡುತ್ತೇವೆಂದು ಸುಳ್ಳು ಹೇಳಿದ ಬಿಜೆಪಿ ಸುಳ್ಳಿನ ವ್ಯಾಪಾರವನ್ನು ಗುತ್ತಿಗೆ ತೆಗೆದುಕೊಂಡಿದೆ. ಬಿಜೆಪಿ ವೈಷಮ್ಯದ ಮಾರುಕಟ್ಟೆಮೂಲಕ ತನ್ನ ವ್ಯಾಪಾರ ಮುಂದುವರೆಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸುಳ್ಳನ್ನೇ ಕೇಂದ್ರವಾಗಿಟ್ಟುಕೊಂಡು ಜನರ ಪರವಾಗಿ ನಿಲ್ಲದೆ ದೇಶವನ್ನು ಅಧೋಗತಿಗೆ ತಂದಿದ್ದಾರೆ ಎಂದು ಹರಿಹಾಯ್ದರು. ವಿಐಎಸ್‌ಎಲ್‌, ಎಂಪಿಎಂ ಅನ್ನು ಮುಚ್ಚುವ ಮೂಲಕ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಜನರ ಉದ್ಯೋಗ ಕಿತ್ತು ಕೊಳ್ಳಲಾಗಿದೆ. ಈಗ ಇವರಿಗೆ ಪರಾರ‍ಯಯ ಏನು ಎಂದು ಹೇಳಬೇಕಲ್ಲವೇ ಎಂದು ಪ್ರಶ್ನಿಸಿದ ಅವರು ಇನ್ನೂ ವಿಐಎಸ್‌ಎಲ್‌ ಉಳಿಸುತ್ತೇವೆ ಎಂದು ಸುಳ್ಳು ಹೇಳುವುದು ಸರಿಯೇ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯು ಕಾಂಗ್ರೆಸ್‌ ಪಕ್ಷಕ್ಕೆ ಪೂರಕ ವಾತಾವರಣವಿದೆ. ಈ ಹಿಂದೆ ತಾವು ಕೂಡ ಎರಡು ಭಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ವಾತಾವರಣ ಬೇರೆ ಇತ್ತು. ಈಗ ಬೇರೆ ಇದೆ. ಈ ಬದಲಾವಣೆ ಶಿವಮೊಗ್ಗ ಜಲ್ಲೆಯಿಂದಲೇ ಆರಂಭವಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಶಂಕರಘಟ್ಟರಮೇಶ್‌, ಕೆಪಿಸಿಸಿ ಕಾರ್ಯದರ್ಶಿ ಪಿ.ಓ.ಶಿವಕುಮಾರ್‌, ಸದಸ್ಯ ವೈ.ಹೆಚ್‌.ನಾಗರಾಜ್‌, ಪ್ರಮುಖರಾದ ಕೆ. ಎಲ್‌. ಜಗದೀಶ್ವರ್‌, ರವಿಕುಮಾರ್‌, ಮೋಹನ್‌, ಸುರೇಶ್‌, ಹಂಜಾ, ಸುಖೇಶ್‌, ಸಿದ್ದಪ್ಪ ಇದ್ದರು.

ಶಿವಮೊಗ್ಗ: ಬಿಎ​ಸ್‌ವೈ ಕಾಳ​ಜಿ​ಯಿಂದಾಗಿ ಪರಿಶಿಷ್ಟರಿಗೆ ಹಕ್ಕುಪತ್ರ

ವಿಮಾನ ನಿಲ್ದಾಣ ಬಂದಿದ್ದನ್ನು ಸ್ವಾಗತಿಸುತ್ತೇನೆ. ಆದರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಬೇಕು. ಅಡಕೆ ಬೆಳೆಗಾರರ ಸ್ಥಿತಿ ಕಷ್ಟದಲ್ಲಿದೆ. ಅಡಕೆಗೆ ಸಮಸ್ಯೆಯಾದರೆ ಹಲವು ಜಿಲ್ಲೆಯ ಆರ್ಥಿಕತೆಯೇ ಪಾತಾಳಕ್ಕೆ ಕುಸಿಯುತ್ತದೆ. ಆದರೆ ಇದುವರೆಗೆ ಪರಾರ‍ಯಯ ವ್ಯವಸ್ಥೆ ಬಗ್ಗೆ ಯೋಚಿಸಿಯೇ ಇಲ್ಲ

- ಆರ್‌.ಎಂ. ಮಂಜು​ನಾಥ ಗೌಡ, ಕಾಂಗ್ರೆಸ್‌ ಮುಖಂಡ