Assembly election: ಇಂದು ಭದ್ರಾವತಿ, ತೀರ್ಥಹಳ್ಳಿಗೆ ಡಿ.ಕೆ.ಶಿವಕುಮಾರ್‌

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್‌ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದು, ಫೆ.8ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದ ತಂಡ ಜಿಲ್ಲೆಯ ಭದ್ರಾವತಿ ಮತ್ತು ತೀರ್ಥಹಳ್ಳಿಗೆ ಆಗಮಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಹೇಳಿದರು. 

DK Sivakumar visit to Bhadravati, Theerthahalli today rav

ಶಿವಮೊಗ್ಗ (ಫೆ.8) : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್‌ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದು, ಫೆ.8ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದ ತಂಡ ಜಿಲ್ಲೆಯ ಭದ್ರಾವತಿ ಮತ್ತು ತೀರ್ಥಹಳ್ಳಿಗೆ ಆಗಮಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ.8ರಂದು ಬೆಳಗ್ಗೆ 11.30ಕ್ಕೆ ಡಿ.ಕೆ.ಶಿವಕುಮಾರ್‌ ಅವರು ಭದ್ರಾವತಿಗೆ ಆಗಮಿಸಲಿದ್ದಾರೆ. ಅಲ್ಲಿನ ಕನಕ ಮಂಟಪದಲ್ಲಿ ಬಹಿರಂಗ ಸಭೆ ಇರುತ್ತದೆ. ಅನಂತರ ವಿಐಎಸ್‌ಎಲ್‌ ಕಾರ್ಖಾನೆ ಉಳಿಸಿ ಹೋರಾಟದಲ್ಲಿ ಮೃತಪಟ್ಟಕಾರ್ಮಿಕರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಮತ್ತು ಪ್ರತಿಭಟನಾ ಸ್ಥಳಕ್ಕೂ ಭೇಟಿ ನೀಡಿ, ಕಾರ್ಖಾನೆ ಉಳಿಸುವತ್ತ ಕಾರ್ಮಿಕರ ಜತೆ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ: ಲಖನ್‌ ಜಾರಕಿಹೊಳಿ

ಅನಂತರ 4.30ಕ್ಕೆ ತೀರ್ಥಹಳ್ಳಿಗೆ ಆಗಮಿಸಲಿದ್ದು, ಬಹಿರಂಗ ಸಭೆಯಲ್ಲಿ ಮಾತನಾಡುವರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಫಲ್ಯವನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ. ಜೊತೆಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದು ಹಾಗೂ ಸಂಸಾರವನ್ನು ತೂಗಿಸುವ ಮಹಿಳೆಗೆ ಪ್ರತಿ ತಿಂಗಳು .2000 ನೀಡುವ ಬಗ್ಗೆ ಮಾತನಾಡುವರು. ಜಿಲ್ಲೆಯಲ್ಲಿ ನಡೆದ ತಪ್ಪು ನಿರ್ಧಾರಗಳಿಂದ ಅನೇಕ ಜೀವಗಳು ಬಲಿಯಾಗುತ್ತಿವೆ. ಕೋಮು ಗಲಭೆ ನಡೆದಿದೆ. ಈ ಎಲ್ಲ ವಿಚಾರಗಳನ್ನು ಸಭೆಯಲ್ಲಿ ಮಾತನಾಡುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ.ಶ್ರೀನಿವಾಸ ಕರಿಯಣ್ಣ, ಶಂಕರಘಟ್ಟರಮೇಶ್‌, ಬಲದೇವಕೃಷ್ಣ, ಎಸ್‌.ಪಿ. ಶೇಷಾದ್ರಿ, ಚಂದ್ರಶೇಖರ್‌, ಟಿ.ಎನ್‌. ಶಶಿಧರ್‌, ಗಂಗಾಧರ್‌ ಸೇರಿದಂತೆ ಹಲವರಿದ್ದರು.

ಮೋದಿ ಮುಖ ನೋಡಿ ಮತದಾರ ಹಾಕುವುದಿಲ್ಲ

ಶಿವಮೊಗ್ಗ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಮೋದಿಯವರ ಮುಖ ನೋಡಿ ಮತದಾರ ಮಣೆ ಹಾಕುವುದಿಲ್ಲ. ಇದು ಬಿಜೆಪಿಯ ಭ್ರಮೆ ಅಷ್ಟೆ. ಎಲ್ಲಾ ಕಾಲವೂ, ಎಲ್ಲಾ ನಾಯಕರದ್ದು ನಡೆಯುವುದಿಲ್ಲ. ಜನರು ಬಿಜೆಪಿ ಬಗ್ಗೆ ಬೇಸತ್ತಿದ್ದಾರೆ. ಹಗರಣಗಳ ಜೊತೆಗೆ ಕೋಮು ದಳ್ಳುರಿಯೆ ಎದ್ದಿದೆ. ಬಿಜೆಪಿಯವರೇ ಈ ಮಾತನ್ನು ಹೇಳುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್‌ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಹಾಗೂ ಮಲೆನಾಡು ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು. ಈಗಾಗಲೇ ಜಿ. ಪರಮೇಶ್ವರ್‌ ನೇತೃತ್ವದ ಸಮಿತಿಯ ಮುಂದೆ ಈ ವಿಷಯ ಇಡಲಾಗಿದೆ ಎಂದು ಸುಂದರೇಶ್‌ ಹರಿಹಾಯ್ದರು. 

ರಮೇಶ್‌ ಜಾರಕಿಹೊಳಿಯಿಂದ ಡಿಕೆಶಿ ವಿರುದ್ಧ ಇಲ್ಲಸಲ್ಲದ ಆರೋಪ : ಲಕ್ಷ್ಮಣ್

Latest Videos
Follow Us:
Download App:
  • android
  • ios