Asianet Suvarna News Asianet Suvarna News

ಶಿವಮೊಗ್ಗ: ಬಿಎ​ಸ್‌ವೈ ಕಾಳ​ಜಿ​ಯಿಂದಾಗಿ ಪರಿಶಿಷ್ಟರಿಗೆ ಹಕ್ಕುಪತ್ರ

 ದೇಶ ಸ್ವಾತಂತ್ರ್ಯ ಗಳಿಸಿ 65-70 ವರ್ಷ ಕಳೆದರೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಬಗರ್‌ಹುಕುಂ ರೈತರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರಗಳನ್ನು ಯಾವ ಸರ್ಕಾರವೂ ನೀಡಲಿಲ್ಲ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರದಲ್ಲಿ ತಾಲೂಕಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅತಿ ಹೆಚ್ಚು ರೈತರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸಮರ್ಥಿಸಿಕೊಂಡರು.

BS Yeddyurappas care got to the Scheduled house title deeds says by raghavendra rav
Author
First Published Feb 7, 2023, 7:33 AM IST

ಶಿಕಾರಿಪುರ (ಫೆ.7) : ದೇಶ ಸ್ವಾತಂತ್ರ್ಯ ಗಳಿಸಿ 65-70 ವರ್ಷ ಕಳೆದರೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಬಗರ್‌ಹುಕುಂ ರೈತರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರಗಳನ್ನು ಯಾವ ಸರ್ಕಾರವೂ ನೀಡಲಿಲ್ಲ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರದಲ್ಲಿ ತಾಲೂಕಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅತಿ ಹೆಚ್ಚು ರೈತರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸಮರ್ಥಿಸಿಕೊಂಡರು.

ಸೋಮವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬಗರ್‌ಹುಕುಂ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಗರ್‌ಹುಕುಂ ಮಂಜುರಾತಿ ಕೋರಿ 1991ನೇ ಸಾಲಿನಲ್ಲಿ ನಮೂನೆ 50, 1998ರಲ್ಲಿ ನಮೂನೆ 53ರಲ್ಲಿ, 2018ರಲ್ಲಿ ನಮೂನೆ 57ರಂತೆ ಬಗರ್‌ಹುಕುಂ ರೈತರು ಅರ್ಜಿ ಸಲ್ಲಿಸಿದ್ದರು. ಆದರೆ, ಸ್ವಾತಂತ್ರ್ಯಾ ನಂತರ 65-70 ವರ್ಷ ಕಳೆದರೂ ರಾಜ್ಯದ ಮುಖ್ಯಮಂತ್ರಿಯಾಗಿ ಜಿಲ್ಲೆಯ ಎಸ್‌.ಬಂಗಾರಪ್ಪ ಸೇರಿದಂತೆ ಅನೇಕರು ಆಡಳಿತ ನಡೆಸಿದರೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಸಾಗುವಳಿದಾರರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರಗಳನ್ನು ಯಾವ ಸರ್ಕಾರವೂ ನೀಡಿರಲಿಲ್ಲ. ಆದರೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಶಿಕಾರಿಪುರ ತಾಲೂಕಿನಲ್ಲಿ ಮಾತ್ರ ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಬಗರ್‌ ಹುಕುಂ ರೈತರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ ಎಂದರು.

 

ಕ್ಷೇತ್ರ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ: ಸಂಸದ ಬಿ.ವೈ.ರಾಘ​ವೇಂದ್ರ

2018ರಲ್ಲಿ ನಮೂನೆ 57ರ ಪ್ರಕಾರ ಶಿಕಾರಿಪುರ ತಾಲೂಕು ವ್ಯಾಪ್ತಿಯಲ್ಲಿ ಬಗರ್‌ಹುಕುಂ ಮಂಜೂರಾತಿ ಕೋರಿ, ಒಟ್ಟು 11008 ಅರ್ಜಿಗಳನ್ನು ಸ್ವೀಕರಿಸಿ, ಈಗಾಗಲೇ ಸ್ವೀಕೃತ ಅರ್ಜಿಗಳಲ್ಲಿ 36 ಅರ್ಜಿ ತಿರಸ್ಕೃತಗೊಂಡಿವೆ. 3573 ಅರ್ಜಿಗಳನ್ನು ಸರ್ಕಾರಿ ಆದೇಶದಂತೆ ಜಿಲ್ಲಾಧಿಕಾರಿಗೆ ಕಳಿಸಲಾಗಿದೆ. ಉಳಿದ 7570 ಅರ್ಜಿಗಳು ಬಾಕಿ ಉಳಿದಿವೆ. ಅತಿ ಶೀಘ್ರದಲ್ಲಿಯೇ ಪರಿಶೀಲನೆ ನಡೆಸಿ, ಹಕ್ಕುಪತ್ರಗಳನ್ನು ನೀಡಲಾಗುವುದು ಎಂದರು.

ನಮೂನೆ 57ರಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಸಿಗದೇ ಇರುವವರಿಗೆ ಸರ್ಕಾರವು ಪುನಃ ಹೊಸದಾಗಿ ಅರ್ಜಿ ಸಲ್ಲಿಸಲು ದಿನಾಂಕ ಮೇ 30, 2022 ರಿಂದ 1 ವರ್ಷದವರೆಗೆ ಕಾಲಾವಕಾಶ ನೀಡಲಾಗಿದ್ದು, ಈ ಪೈಕಿ ಈಗಾಗಲೇ ತಾಲೂಕಿನಲ್ಲಿ 1169 ಅರ್ಜಿಗಳನ್ನು ಸಲ್ಲಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 94 ಹಾಗೂ 1961ರ ಕಲಂ 38(ಎ) ಪ್ರಕಾರ ತಾಲೂಕಿನ ವ್ಯಾಪ್ತಿಯಲ್ಲಿ ಮೂಲ ಗ್ರಾಮದಿಂದ 1 ಕಿಮೀ ಒಳಗೆ 10ರಿಂದ 49 ವಾಸದ ಮನೆಯಲ್ಲಿ 250 ಜನ ವಾಸವಾಗಿದ್ದ ಗ್ರಾಮಗಳನ್ನು ಉಪ ಗ್ರಾಮಗಳಾಗಿ, 49ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿರುವ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಲು ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಇದರಂತೆ ತಾಲೂಕಿನ ಹೊಸೂರು ಹೋಬಳಿ ಸಂಕ್ಲಾಪುರ ಗ್ರಾಮದಿಂದ ಸ.ನಂ. 09ರಲ್ಲಿ 12.11 ಎ​ಕರೆಯಲ್ಲಿ ದುರ್ಗಾಪುರ ಗ್ರಾಮವನ್ನು ಹೊಸ ಕಂದಾಯ ಗ್ರಾಮವನ್ನಾಗಿಸಲು ಸರ್ಕಾರದ ಆದೇಶವಿದೆ. ಅತಿ ಶೀಘ್ರದಲ್ಲೇ ಆ ಗ್ರಾಮದ ಜನತೆಗೆ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

 

ವಿಎಸ್‌ಐಎಲ್‌ ಉಳಿವಿಗೆ ಸಿಎಂ ಬಳಿ ನಿಯೋಗ: ಸಂಸ​ದ ಬಿ.ವೈ.​ರಾ​ಘ​ವೇಂದ್ರ

ಸಭೆಯಲ್ಲಿ ತಹಸೀಲ್ದಾರ್‌ ವಿಶ್ವನಾಥ್‌, ಎಸಿಎಫ್‌ ಗೋಪ್ಯಾನಾಯ್ಕ… ಸಮಿತಿ ಸದಸ್ಯ ಸೋಮನಗೌಡ, ರೇಖಾ ರಾಜಶೇಖರ, ಬಸವರಾಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚುನಾವಣೆ ಸಮೀಪ ಆಗುತ್ತಿದ್ದಂತೆ ಸಂಸದ ಹಾಗೂ ಶಾಸಕರಿಗೆ ಸಾಗುವಳಿದಾರ ರೈತರು ನೆನಪಾಗುತ್ತಾರೆ. ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅಧಿಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ 2015- 16ರಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟಪಂಗಡದ 613 ಸಾಗುವಳಿದಾರ ರೈತರಿಗೆ ಹಕ್ಕುಪತ್ರಗಳನ್ನು ಸಂಸದರ ಸಮಕ್ಷಮದಲ್ಲಿ ವಿತ​ರಿ​ಸಿ​ದ್ದಾ​ರೆ

- ಮಾರ​ವಳ್ಳಿ ಉಮೇಶ್‌, ಮಾಜಿ ಸದಸ್ಯ, ಬಗ​ರ್‌​ಹುಕುಂ ಸಮಿ​ತಿ

Follow Us:
Download App:
  • android
  • ios