10:29 PM (IST) May 30

Karnataka News Live 30 May 2026ಅಜ್ಞಾತ ಸ್ಥಳದಲ್ಲಿ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ವಿಶೇಷ ಹೋಮ, ಕುಟುಂಬಸ್ಥರು ಭಾಗಿ?

ರಾಜಭವನದಿಂದ ಡಿಕೆ ಶಿವಕುಮಾರ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಇದೇ ವೇಳೆ ಕುಟುಂಬಸ್ಥರ ಜೊತೆ ವಿಶೇಷ ಹೋಮದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Read Full Story
09:23 PM (IST) May 30

Karnataka News Live 30 May 2026ಭಾರಿ ಗಾಳಿ ಮಳೆಗೆ 3 ಅಂತಸ್ತಿನ ಕಟ್ಟಡ ಕುಸಿತ, ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ

ಭಾರಿ ಗಾಳಿ ಮಳೆಗೆ ಮೂರು ಅಂತಸ್ತಿನ ಕಟ್ಟಡ ಕುಸಿತಗೊಂಡಿದೆ. ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಅಗ್ನಿಶಾಮಕ ದಳ, ರಕ್ಷಣಾ ತಂಡ, ಪೊಲೀಸರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Read Full Story
08:52 PM (IST) May 30

Karnataka News Live 30 May 2026ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬೇಡಿ; ಡಿ.ಕೆ. ಶಿವಕುಮಾರ್‌ಗೆ ಭಾವುಕ ಪತ್ರ ಬರೆದ ಸಿದ್ದರಾಮಯ್ಯ

ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಅಭಿನಂದನಾ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, ಡಿಕೆಶಿ ಸಂಘಟನಾ ಚತುರತೆ ಶ್ಲಾಘಿಸಿ, ರಾಜ್ಯದ ಅಭಿವೃದ್ಧಿ ಜವಾಬ್ದಾರಿ ನೆನಪಿಸಿದ್ದಾರೆ.

Read Full Story
07:58 PM (IST) May 30

Karnataka News Live 30 May 2026ಅಹಮ್ಮದಾಬಾದ್ ಹೋಗೋ ವಿಮಾನ ತುಂಬಾ ಆರ್‌ಸಿಬಿ ಫ್ಯಾನ್ಸ್, ಅಚ್ಚರಿಗೊಂಡ ಪೈಲೆಟ್ ಹೇಳಿದ್ದೇನು?

ಅಹಮ್ಮದಾಬಾದ್ ವಿಮಾನಗಳಲ್ಲಿ ಇದೀಗ ಆರ್‌ಸಿಬಿ ಅಭಿಮಾನಿಗಳೇ ತುಂಬಿದ್ದಾರೆ. ಎಲ್ಲರು ಫೈನಲ್ ನೋಡಲು ಹೋಗ್ತಿದ್ದೀರಾ ಎಂದು ಪೈಲೆಟ್ ಕೇಳಿದಾಗ ಎಲ್ಲರೂ ಆರ್‌ಸಿಬಿ ಎಂದು ಕೂಗಿದ್ದಾರೆ. ಕೊನೆಯಲ್ಲಿ ಪೈಲೆಟ್ ಹೇಳಿದ ಮಾತಿಗೆ ಇಡೀ ವಿಮಾನವೇ ಜೈಕಾರ ಹಾಕಿದೆ.

Read Full Story
07:22 PM (IST) May 30

Karnataka News Live 30 May 2026ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕ ಡಿ.ಕೆ. ಶಿವಕುಮಾರ್‌ಗೆ ಸರ್ಕಾರ ರಚನೆಗೆ ರಾಜ್ಯಪಾಲರ ಅಧಿಕೃತ ಆಹ್ವಾನ!

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಜ್ಯಪಾಲರು ಸರ್ಕಾರ ರಚನೆಗೆ ಅಧಿಕೃತವಾಗಿ ಆಹ್ವಾನ ನೀಡಿದ್ದು, ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ.
Read Full Story
07:09 PM (IST) May 30

Karnataka News Live 30 May 2026ದೇವೇಗೌಡ್ರ ಆಶೀರ್ವಾದ ಪಡೆದ ಜೋಶ್​ನಲ್ಲಿ Bigg Boss ಜಾಹ್ನವಿ - ನಗರಸಭೆ, ಜನರಿಗೆ ಫುಲ್​ ಕ್ಲಾಸ್​

ಬಿಗ್ ಬಾಸ್ ಖ್ಯಾತಿಯ ನಟಿ ಮತ್ತು ನಿರೂಪಕಿ ಜಾಹ್ನವಿ, ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂಬರುವ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಅವರು, ಭೂಪಸಂದ್ರ ವಾರ್ಡ್‌ನ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತಿದ್ದಾರೆ.

Read Full Story
06:57 PM (IST) May 30

Karnataka News Live 30 May 2026ಡಿಕೆ ಶಿವಕುಮಾರ್ ನೂತನ ಸಿಎಂ ಆಗಿ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಅಭಿಮಾನಿಗಳ ಸಂಭ್ರಮ

ಡಿಕೆ ಶಿವಕುಮಾರ್ ಮುಂದಿನ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆಯಾಗುತ್ತಿದ್ದಂತೆ ರಾಜ್ಯದ ಹಲವೆಡೆ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಪಟಾಕಿ, ಬೈಕ್ ರ್ಯಾಲಿ , ಡಿಕೆ ಡಿಕೆ ಘೋಷಣೆಗಳ ಮೂಲಕ ಸೆಲೆಬ್ರೇಷನ್ ಶುರುವಾಗಿದೆ.

Read Full Story
06:33 PM (IST) May 30

Karnataka News Live 30 May 2026ಕಾಂಗ್ರೆಸ್ CLP ಸಭೆ ಅಪ್‌ಡೇಟ್ಸ್ - ಸಿದ್ದರಾಮಯ್ಯ ಪ್ರಸ್ತಾವನೆಗೆ ಬೆಂಬಲ, ಬುಧವಾರ ಡಿ.ಕೆ. ಶಿವಕುಮಾರ್ ಪಟ್ಟಾಭಿಷೇಕ!

ಸಿದ್ದರಾಮಯ್ಯ ರಾಜೀನಾಮೆಯ ನಂತರ, ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಿಎಲ್‌ಪಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಡಿಕೆಶಿ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಶೀಘ್ರದಲ್ಲೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Read Full Story
05:42 PM (IST) May 30

Karnataka News Live 30 May 2026Karnataka New Chief Minister - ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವಿರೋಧ ಆಯ್ಕೆ; ಬುಧವಾರ ಪ್ರಮಾಣವಚನ!

ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ, ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಅವರು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

Read Full Story
05:26 PM (IST) May 30

Karnataka News Live 30 May 2026ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಡ್ರಾಮ ನಡುವೆ ಹೈಕಮಾಂಡ್ ಕೈಗೆ ಮಂತ್ರಿ ಸ್ಥಾನದ 10 ಶಾಸಕರ ಪಟ್ಟಿ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ನೇರವಾಗಿ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸುವ ಮಾತುಗಳು ಕೇಳಿಬಂದಿತ್ತು. ಆದರೆ ಸಿದ್ದರಾಮಯ್ಯ ನೇರವಾಗಿ ಹೈಕಮಾಂಡ್ ತೀರ್ಮಾನ ಎಂದಿದ್ದಾರೆ. ಇತ್ತ ಸಿಎಂ ಜೊತೆ ಪ್ರಮಾಣವಚನ ಸ್ವೀಕರಿಸಲಿರುವ 10 ಶಾಸಕರ ಪಟ್ಟಿ ಹೈಕಮಾಂಡ್ ಕೈಸೇರಿದೆ.

Read Full Story
04:50 PM (IST) May 30

Karnataka News Live 30 May 2026ಡಿಕೆಶಿ ಸಿಎಂ ಆಗ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಸಂಚಲನ - ಒಂದೇ ದಿನ ಶೇ 20ರಷ್ಟು ಭಾರಿ ಜಿಗಿತ ಕಂಡ ಕಾಫಿ ಡೇ ಷೇರುಗಳು!

ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಘೋಷಣೆಯಾಗುತ್ತಿದ್ದಂತೆ, ಅವರ ಕುಟುಂಬದ ಸಂಬಂಧವಿರುವ ಕಾಫಿ ಡೇ ಎಂಟರ್‌ಪ್ರೈಸಸ್ (ಸಿಸಿಡಿ) ಷೇರುಗಳ ಬೆಲೆಯಲ್ಲಿ ಶೇ 20ರಷ್ಟು ಭಾರಿ ಏರಿಕೆ ಕಂಡುಬಂದಿದೆ. 

Read Full Story
04:22 PM (IST) May 30

Karnataka News Live 30 May 2026ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ - ನೂತನ ಸಿಎಲ್‌ಪಿ ನಾಯಕನ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ...

ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆಯ ಭಾಗವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಲಿದ್ದು, ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಿದ್ದರಾಮಯ್ಯನವರು ನಾಯಕನ ಹೆಸರನ್ನು ಪ್ರಸ್ತಾಪಿಸಲಿದ್ದು, ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಾಗುತ್ತದೆ.
Read Full Story
03:26 PM (IST) May 30

Karnataka News Live 30 May 2026ಸಿದ್ದರಾಮಯ್ಯನವರೇ, ಬಿಡುಗಡೆಯಾದ ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಎಲ್ಲೋಯ್ತು, ಲೆಕ್ಕ ಕೊಡ್ತೀರಾ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಸುರೇಶ್ ಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ರೂಪಾಯಿ ಹಣದ ಬಗ್ಗೆ ಪ್ರಶ್ನಿಸಿದ್ದಾರೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಆರೋಪಿಸಿ, ಈ ಹಣದ ಹಣೆಬರಹದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.
Read Full Story
01:56 PM (IST) May 30

Karnataka News Live 30 May 2026DK Shivakumar - ಡಿಕೆಶಿ ಸಿಎಂ ಆಗುವುದು ಖಚಿತವಾಗುತ್ತಿದ್ದಂತೆ ಸರ್ಕಾರ ಮತ್ತು ಪಕ್ಷದಲ್ಲಿ ಮಹತ್ವದ ಬದಲಾವಣೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಖಚಿತವಾಗಿದೆ. ಈ ಬದಲಾವಣೆಯು ಸರ್ಕಾರ ಮತ್ತು ಕೆಪಿಸಿಸಿ ಹಂತದಲ್ಲಿ ಸಚಿವ ಸಂಪುಟ, ಸಭಾಧ್ಯಕ್ಷ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ..

Read Full Story
01:30 PM (IST) May 30

Karnataka News Live 30 May 2026Photos - ಡಿಕೆಶಿ ಸಿಎಂ ಆಗಲೆಂದು 3 ವರ್ಷದಿಂದ ಗಡ್ಡ ಕೂದಲು ಕತ್ತರಿಸದೇ ಹರಕೆ; ಕೊನೆಗೂ ಅಭಿಮಾನಿಯ ತಪಸ್ಸು ಫಲಿಸಿತು!

ಡಿಕೆ ಶಿವಕುಮಾರ್(DK Shivakumar) ಸಿಎಂ ಆಗಲಿ ಎಂದು ರಾಮನಗರದ ಈಶ್ವರಪ್ಪ ಮೂರು ವರ್ಷಗಳಿಂದ ತಲೆಕೂದಲು, ಗಡ್ಡ ತೆಗೆಯದೆ ಹರಕೆ ಹೊತ್ತಿದ್ದರು. ಕುಂಭಮೇಳದಲ್ಲಿ ಮಾಡಿದ ಸಂಕಲ್ಪ ಈಗ ನೆರವೇರಿದ್ದು, ಮಂತ್ರಾಲಯದಲ್ಲಿ ಹರಕೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

Read Full Story
01:24 PM (IST) May 30

Karnataka News Live 30 May 2026ಡಿಕೆ ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ - ಕಾಂಗ್ರೆಸ್ 2.O ಸರ್ಕಾರದಲ್ಲಿ ಯಾರಿಗೆ ಅದೃಷ್ಟ?

ಡಿಕೆ ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದ್ದು, ಅವರೊಂದಿಗೆ ಹಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಸಂಭಾವ್ಯ ಸಚಿವರ ಪಟ್ಟಿ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

Read Full Story
12:30 PM (IST) May 30

Karnataka News Live 30 May 2026Priyank kharge - ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹರಿಕಾರ ಪ್ರಿಯಾಂಕ್‌ಗೆ ಡಿಸಿಎಂ ಸ್ಥಾನಕ್ಕೆ ಶಾಸಕರ ಒತ್ತಾಯ

ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸಂಪುಟದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಲ್ಯಾಣ ಕರ್ನಾಟಕ ಭಾಗದ ಹಲವು ಶಾಸಕರು ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಅವರ ಸಮರ್ಥ ಆಡಳಿತ ಹಿಂದುಳಿದ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಈ ಬೇಡಿಕೆ ಮುಂದಿಡಲಾಗಿದೆ.

Read Full Story
12:00 PM (IST) May 30

Karnataka News Live 30 May 2026DK Shivakumar - ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ರಾಮನಗರದಿದ 60 ಸಾವಿರ ಜನ ಸೇರಿಸಲು ಸಿದ್ಧತೆ!

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಪದಗ್ರಹಣ ಸಮಾರಂಭಕ್ಕೆ ಅವರ ತವರು ಜಿಲ್ಲೆಯಾದ ರಾಮನಗರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ, ಜಿಲ್ಲೆಯಿಂದ ಸುಮಾರು 60 ಸಾವಿರ ಜನರನ್ನು ಸಮಾರಂಭಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ.

Read Full Story
10:55 AM (IST) May 30

Karnataka News Live 30 May 2026ಡಿಕೆಶಿ ಕ್ಯಾಬಿನೆಟ್‌ಗೆ ಹೈಕಮಾಂಡ್ ಟೂ ಸ್ಟೇಜ್ ಫಾರ್ಮುಲಾ - ಜೂನ್ 3ಕ್ಕೆ ಸಿಎಂ ಜೊತೆ 10 ಮಂದಿ ಹಿರಿಯ ಶಾಸಕರಿಗೆ ಮಂತ್ರಿಗಿರಿ!

ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಎರಡು ಹಂತಗಳಲ್ಲಿ ಸಚಿವ ಸಂಪುಟ ರಚನೆಯಾಗಲಿದ್ದು, ಮೊದಲ ಹಂತದಲ್ಲಿ ಹಿರಿಯರಿಗೂ, ಎರಡನೇ ಹಂತದಲ್ಲಿ ಯುವಕರಿಗೂ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

Read Full Story
10:50 AM (IST) May 30

Karnataka News Live 30 May 2026Kalaburagi - ಬಕ್ರೀದ್ ಹಬ್ಬಕ್ಕೆ ಗೋಶಾಲೆಗೆ ಮೇವು ದೇಣಿಗೆ ನೀಡಿದ ಮುಸ್ಲಿಂ ಕುಟುಂಬ

ಕಲಬುರಗಿಯಲ್ಲಿ ಮುಸ್ಲಿಂ ಕುಟುಂಬವೊಂದು ಬಕ್ರೀದ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದೆ. ತಮ್ಮ ಹಿರಿಯರ ಸ್ಮರಣಾರ್ಥ ಗೋಶಾಲೆಗೆ 25 ಸಾವಿರ ಮೌಲ್ಯದ ಮೇವು ದಾನ ಮಾಡಿ, ಪ್ರಾಣಿ ದಯೆ ಮತ್ತು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
Read Full Story