ಬೆಳಗಾವಿ ಯುವಕನ ಬರ್ಬರ ಕೊಲೆ: ಚಿತ್ರನಟ ಸುದೀಪ್ ರೋಡ್ ಶೋ ರದ್ದು
ಬೆಳಗಾವಿ ವಿಧಾನಸಭಾ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಯುವಕನ ಬರ್ಬರ ಕೊಲೆಯ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಚುನಾವಣಾ ಪ್ರಚಾರ ಮತ್ತು ರೋಡ್ ಶೋ ರದ್ದಾಗಿದೆ.
ಬೆಳಗಾವಿ (ಮೇ 1): ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಕಳೆದೊಂದು ವಾರದಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ತಾರಿಹಾಳದಲ್ಲಿ ಯುವಕನೊಬ್ಬನ ಕೊಲೆ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಿಚ್ಚ ಸುದೀಪ್ ಅವರ ರೋಡ್ ಷೋ ಪ್ರಚಾರ ರದ್ದುಗೊಳಿಸಲಾಗಿದೆ.
ಸೋಮವಾರ ಬೆಳಗ್ಗೆಯಿಂದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ನಟ ಸುದೀಪ್ ರೋಡ್ ಷೋ ಮಾಡುತ್ತಿದ್ದಾರೆ. ರೋಡ್ ಷೋ ಯೋಜನೆಯಂತೆ ಮೊದಲು ಮೊದಲು ಸುಳೇಭಾವಿಯಲ್ಲಿ ನಿಗಿದಿಯಾಗಿದ್ದ ಪ್ರಚಾರ ಕಾರ್ಯಕ್ರಮವನ್ನು ಪರಿಶಿಷ್ಟ ಪಂಗಡ ಸಮುದಾಯದ ಜನರು ಹೆಚ್ಚಾಗಿರುವ ಗ್ರಾಮವಾದ ತಾರಿಹಾಳಕ್ಕೆ ನಿಗದಿ ಮಾಡಲಾಗಿತ್ತು. ಆದರೆ, ನಿನ್ನೆ ರಾತ್ರಿ ವೇಳೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಯುವಕನ ಎದೆಗೆ ಚೂರಿಯನ್ನು ಚುಚ್ಚಿ ಕೊಲೆಗೈದಿದ್ದಾಳೆ. ಈ ಬರ್ಬರ ಕೊಲೆಯ ಹಿನ್ನೆಲೆಯಲ್ಲಿ ಸುದೀಪ್ ರೋಡ್ ಷೋ ಕಾರ್ಯಕ್ರಮವನ್ನು ತರಡೆಹಿಡಿಯಲಾಗಿತ್ತು.
BJP MANIFESTO 2023: ಬೆಂಗಳೂರು, ಹಳೇ ಮೈಸೂರಿಗೆ ಭರ್ಜರಿ ಭರವಸೆ ಘೋಷಿಸಿದ ಬಿಜೆಪಿ!
ಗ್ರಾಮದಲ್ಲಿ ಹೆಣ ಇಟ್ಟುಕೊಂಡು ಸುದೀಪ್ ರೋಡ್ ಶೋ ಬೇಡ: ಇನ್ನು ನಿನ್ನೆಯೇ ಯುವಕನ ಕೊಲೆ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಪೊಲೀಸರಿಂದ ಪರಿಶೀಲನಾ ಕಾರ್ಯ ಹಾಗೂ ಆಸ್ಪತ್ರೆಯಲ್ಲಿ ಯುವಕನ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ನಂತರ ಶವವನ್ನು ಕುಟುಂಬಸ್ಥರಿಗೆ ನೀಡಿ ನಂತರ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಇನ್ನು ಯುವಕನ ಮೃತದೇಹವನ್ನು ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ಮಾಡಿದರೂ ಸಂಜೆ 4 ಗಂಟೆ ವೇಳೆಗೆ ತಾರಿಹಾಳ ಗ್ರಾಮದಲ್ಲಿ ನಟ ಕಿಚ್ಚ ಸುದೀಪ್ ಅವರಿಂದ ಬಿಜೆಪಿ ಅಭ್ಯರ್ಥಿ ಭರ್ಜರಿ ರೋಡ್ ಷೋ ಮೂಲಕ ಪ್ರಚಾರ ಕೈಗೊಳ್ಳಲು ಮುಂದಾಗಿದ್ದರು. ಆದರೆ, ಇನ್ನೂ ಕೊಲೆಯಾದ ಯುವಕನ ಅಂತ್ಯಕ್ರಿಯೆ ತಡವಾಗಿರುವ ಹಿನ್ನೆಲೆಯಲ್ಲಿ ನಮ್ಮ ಗ್ರಾಮದಲ್ಲಿ ರೋಡ್ ಷೋ ಮಾಡುವುದು ಬೇಡವೆಂದು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುದೀಪ್ ರೋಡ್ ಷೋ ರದ್ದುಗೊಳಿಸಲಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ನಾಗೇಶ್ ಪರ ಪ್ರಚಾರ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೊಳ್ಕರ್ ಪರ ಸುದೀಪ್ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. ಸುಳೇಭಾವಿ ರದ್ದಾದ ಬಳಿಕ ತಾರಿಹಾಳ ಗ್ರಾಮದಲ್ಲಿ ನಿಗದಿಯಾಗಿದ್ದ ರೋಡ್ ಷೋನಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಆದರೆ, ಈಗ ತಾರಿಹಾಳ ಗ್ರಾಮದಲ್ಲಿ ಯುವಕನ ಕೊಲೆ ಹಾಗೂ ಅಂತ್ಯಕ್ರಿಯೆ ತಡವಾಗಿರುವ ಕಾರಣಕ್ಕೆ ರೋಡ್ ಷೋ ರದ್ದುಗೊಳಿಸಲಾಗಿದೆ. ಆದ್ದರಿಂದ ಕೊನೆ ಕ್ಷಣದಲ್ಲಿ ಸುದೀಪ್ ರೋಡ್ ಷೋ ರದ್ದುಗೊಳಿಸಲಾಗಿದೆ. ಇನ್ನು ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಸುದೀಪ್ ಬೆಳಗಾವಿಯ ಹೋಟೆಲ್‌ಗೆ ಆಗಮಿಸಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
Amit Shah Interview: ಮೋದಿ ವಿಷ ಸರ್ಪವೆಂಬ ಖರ್ಗೆ ಹೇಳಿಕೆಯೇ ಬಿಜೆಪಿಗೆ ಗೆಲುವಿನ ಸಂಕೇತ
ನಟ ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದು, ಇಂದು ಕುಂದಾನಗರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.ಅದಲ್ಲದೆ ಬೆಳಗಾವಿಯಲ್ಲಿ ಬಿಜೆಪಿಯ ಐದು ಕಾರ್ಯಕ್ರಮಗಳಲ್ಲಿ ಸುದೀಪ್ ಭಾಗಿಯಾಗಿದ್ದಾರೆ. ಬೆಳಗ್ಗೆ ಬೆಳಗಾವಿ ಜಿಲ್ಲೆಯ ಕಿತ್ತೂರಿನ ನೇಸರ್ಗಿಯಲ್ಲಿ ಪಕ್ಷದ ಪರವಾಗಿ ರೋಡ್ ಶೋ ಕಾರ್ಯಕ್ರಮದಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ, ಬೆಳಗಾವಿ ಜಿಲ್ಲೆಯ ಗ್ರಾಮೀಣ ಕ್ಷೇತ್ರದ ತಾರಿಹಾಳದಲ್ಲಿ ಮಧ್ಯಾಹ್ನ ರೋಡ್ ಶೋ ಮೂಲಕ ಬಿಜೆಪಿ ಪರವಾಗಿ ಪ್ರಚಾರ ಮಾಡಬೇಕಿದ್ದು, ಈಗ ಕೊನೇ ಕ್ಷಣದಲ್ಲಿ ರದ್ದುಗೊಂಡಿದೆ. ಸಂಜೆ ಜಿಲ್ಲೆಯ ಪ್ರಮುಖ ಕ್ಷೇತ್ರಗಳಾದ ಯಮಕನ ಮರಡಿ, ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರಗಳಲ್ಲಿ ಪ್ರಚಾರ ಪಾಲ್ಗೊಳ್ಳಲಿದ್ದಾರೆ.