ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್‌ನವರು ಪ್ರತಿ ಚುನಾವಣೆಯಲ್ಲಿ ಕೆಟ್ಟದಾಗಿ ಮಾತನಾಡಿದಾಗಲೂ ಬಿಜೆಪಿ ನಿಶ್ಚಿತವಾಗಿ ಜಯಗಳಿಸಿದೆ. ಈಗ ಖರ್ಗೆ ಹೇಳಿಕೆಯೂ ಶುಭ ಸಂಕೇತವಾಗಿದೆ.

ಬೆಂಗಳೂರು (ಏ.30): ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್‌ನವರು ಪ್ರತಿ ಚುನಾವಣೆಯಲ್ಲಿ ಕೆಟ್ಟದಾಗಿ ಮಾತನಾಡಿದಾಗಲೂ ಬಿಜೆಪಿ ನಿಶ್ಚಿತವಾಗಿ ಜಯಗಳಿಸಿದೆ. ಹೀಗಾಗಿ, ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿ ಅವರಿಗೆ ವಿಷ ಸರ್ಪ ಎಂದು ಹೇಳಿರುವುದು ಕೂಡ ಶುಭ ಸಂಕೇತದಂತೆ ಕಾಣುತ್ತಿದೆ ಎಂದು ಬಿಜೆಪಿಯ ಚಾಣಕ್ಯ ಖ್ಯಾತಿಯ ಕೇಂದ್ರ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ಅಜಿತ್‌ ಹನುಮಕ್ಕನವರ್‌ ಅವರು ಕೇಂದ್ರ ಸಚಿವ ಅಮಿತ್‌ ಶಾ ಅವರೊಂದಿಗೆ ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತು ಮಾಡಿದ ವಿಶೇಷ ಸಂದರ್ಶನದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ವಿಷ ಸರ್ಪದ ಹೇಳಿಕೆಯನ್ನ ಯಾವ ರೀತಿ ನೋಡ್ತೀರಾ ಎಂದು ಕೇಳಿದ ಪ್ರಶ್ನೆಗೆ ಧನಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿದರು. ಖರ್ಗೆ ಅವರಷ್ಟೇ ಅಲ್ಲ. ಕಾಂಗ್ರೆಸ್‌ನ ಹಲವು ನಾಯಕರು ಮೋದಿ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ. ಸೋನಿಯಾ ಒಮ್ಮೆ ಮೋದಿಯನ್ನ ಸಾವಿನ ದಲ್ಲಾಳಿ ಅಂತಾ ಹೇಳಿದ್ದರು. ಪ್ರಿಯಾಂಕಾ ಒಮ್ಮೆ ಅವರನ್ನ ನೀಚ ಜಾತಿಯ ವ್ಯಕ್ತಿ ಅಂತಾ ಹೇಳಿದ್ದರು. ಗುಜರಾತ್‌ನ ಕಾಂಗ್ರೆಸ್ ಪ್ರಭಾರಿ ಬಿ.ಕೆ ಹರಿಪ್ರಸಾದ್ ಅವರು ಏನೋ ಹೇಳಿದ್ದರು. ಮಣಿಶಂಕರ್ ಅಯ್ಯರ್ ನಂತರ, ಮಲ್ಲಿಕಾರ್ಜುನ ಖರ್ಗೆ ಕೂಡ ಹೇಳಿದ್ದಾರೆ. ಇವರ ಹೇಳಿಕೆಗಳು ಬಂದಾಗೆಲ್ಲ ಬಿಜೆಪಿ ನಿಶ್ಚಿತವಾಗಿ ಜಯಗಳಿಸಿದೆ. ನನಗೆ ಇದು ಶುಭ ಸಂಕೇತದಂತೆ ಕಾಣುತ್ತಿದೆ ಎಂದರು.

ಮೈಸೂರಿನಲ್ಲಿ ಮೋದಿ ರೋಡ್ ಶೋ, ಪ್ರಧಾನಿ ನೋಡಲು ಮುಗಿಬಿದ್ದ ಜನಸಾಗರ!

ಕಾರ್ಯಕರ್ತರಲ್ಲಿ ಜೋಶ್ ಕಡಿಮೆಯಾಗಿದೆ ಎಂದು ಅನಿಸುತ್ತಾ?:  ಆ ತರಹದ ಪ್ರಶ್ನೆಯಿಲ್ಲ.. ನಾನು ಓಡಾಡಿಕೊಂಡು ಬಂದಿದ್ದೇನೆ.. ನಿಮ್ಮ ಕ್ಯಾಮರಾ ಮೆನ್‌ಗಳು ನೋಡಿದ್ದಾರೆ.. ಯಾದಗಿರಿಯ ರೋಡ್ ಷೋ ನಾನು ಯೋಚನೆ ಕೂಡ ಮಾಡಿರಲಿಲ್ಲ. ಜನರ ರಿಯಾಕ್ಷನ್ ನೋಡ್ತಿದ್ದಂತೆ ವಾತಾವರಣ ಹೇಗಿದೆ ಅಂತ ಗೊತ್ತಾಗುತ್ತದೆ. ಹಾಸನದ ಸಕಲೇಶಪುರದಲ್ಲಿ ನಾನು ಯೋಚನೆ ಕೂಡ ಮಾಡಿರಲಿಲ್ಲ.. ನನ್ನ ಬಳಿ ಅಲ್ಲಿನ ಲೆಕ್ಕಾಚಾರಗಳಿವೆ.. ಆ ಕ್ಷೇತ್ರದ ಹಿನ್ನೆಲೆ ಕೂಡ ಗೊತ್ತು. ಯಾದಗಿರಿ, ಸಕಲೇಶಪುರದಲ್ಲಿ ನಾನು ಈ ಮೊದಲೂ ಕಾರ್ಯಕ್ರಮ ಮಾಡಿದ್ದೆ, ಈಗಲೂ ಮಾಡಿ ಬಂದಿದ್ದೇನೆ.​

​ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕಿಲ್ಲ ಅಂತಾ ತುಂಬಾ ಜನ ಅಸಮಧಾನಗೊಂಡಿದ್ದಾರಲ್ಲ, ಪರಿಣಾಮ ಬೀರಲ್ವಾ?​​: ಚುನಾವಣೆಗಳಲ್ಲಿ ಅಸಮಧಾನ ಸ್ವಾಭಾವಿಕ ಪ್ರಕ್ರಿಯೆ. ಇದನ್ನ ಎಲ್ಲ ಪಾರ್ಟಿಯವರು ಎದುರಿಸಬೇಕಾಗುತ್ತದೆ. ಕಾಂಗ್ರೆಸ್ನಲ್ಲೂ ತುಂಬಾ ಜನ ಅಸಮಧಾನಗೊಂಡಿದ್ದಾರೆ.. ಏನಾಗಬಹುದು..? ಸಿದ್ದರಾಮಯ್ಯ ಕೂಡ ಅಸಮಧಾನಗೊಂಡಿದ್ದಾರೆ. ನೀವು ಅವರ ಹೇಳಿಕೆಗಳನ್ನ ವಿಶ್ಲೇಷಣೆ ಮಾಡಿ ನೋಡಿ... 7 ದಿನಕ್ಕೆ 7 ಥರಹದ ಹೇಳಿಕೆ ಕೊಡ್ತಾರೆ.. ನೀವೇ ಲೆಕ್ಕಾಚಾರ ಮಾಡಿ.. ನನ್ನ ಸಂದರ್ಶನದ ಬಳಿಕ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಅರ್ಧ ಗಂಟೆಯ ಕಾರ್ಯಕ್ರಮ ಮಾಡಿ. ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣದ ತಲೆನೀವು ಎಲ್ಲಾ ಪಾರ್ಟಿಗಳಿಗೂ ಇದ್ದಿದ್ದೆ. ಆದ್ರೆ ಬಿಜೆಪಿ ವೋಟ್ ಬ್ಯಾಂಕ್ ಐಡಿಯಾಲಜಿ ಮೇಲೆ.. ಮೋದಿ ಅವರ ಮೇಲೆ ನಿರ್ಧಾರವಾಗುತ್ತದೆ ಎಂದರು.

ಕಾಂಗ್ರೆಸ್‌ನವರು ಕೇಳ್ತಾರೆ ಮೋದಿ ಅವರನ್ನ ಯಾಕೆ ಇಷ್ಟು ಬಾರಿ ಕರ್ಕೊಂಡು ಬರ್ತಿರಾ ಅಂತಾರೆ?: ​ಈ ಮಾತನ್ನ ಅರ್ಥ ಮಾಡಿಕೊಳ್ಳಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅನ್ನೋದು ಸಂವಿಧಾನದ ಒಂದು ಉತ್ಸವ. ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿ.. ಎಲ್ಲೇ ಚುನಾವಣೆ ಆದ್ರು ಅವರು ಹೋಗ್ತಾರೆ.​ ಕಾಂಗ್ರೆಸ್‌ಗೆ ಮನಮೋಹನ್ ಸಿಂಗ್ ಅಭ್ಯಾಸವಾಗಿಬಿಟ್ಟಿತ್ತು. ಅವರು ಮಾತಾಡ್ತಾನೆ ಇರಲಿಲ್ಲ. ಹಾಗಿದ್ದಾಗ ನಾವೇನ್ ಮಾಡೋಕಾಗುತ್ತೆ. ಮೋದಿ ಮಾತನ್ನ ಕೇಳೋಕೆ ಜನ ಬರ್ತಾರೆ.. ಆದರೆ ಮನಮೋಹನ್ ಸಿಂಗ್ ಮಾತು ಕೇಳೋಕೆ ಯಾರು ಬರೋದಿಲ್ಲ.. ಅದಕ್ಕೆ ಯಾರೂ ಬರಲ್ಲ.​

​ರಾಜ್ಯದಲ್ಲಿ ನೀರಿಗೆ ತುಂಬಾ ಸಂಕಷ್ಟವಿದೆ. ನೀವು ನೀರಿಗಾಗಿ ಏನೂ ಮಾಡಿಲ್ಲ ಎಂದು ಕಾಂಗ್ರೆಸ್‌ನವರು ಹೇಳ್ತಾರೆ?: ಇಲ್ಲಿ ನಾವು ಏನು ಹೇಳಿದ್ದೀವಿ, ಕಾಂಗ್ರೆಸ್ ಏನು ಹೇಳಿದೆ ಎನ್ನುವುದು ಮುಖ್ಯವಲ್ಲ. ಏನಾಗಿದೆ ಅನ್ನೋದು ದಾಖಲೆಗಳಲ್ಲಿ ಇದೆ. ವಿವಾದ ಪರಿಹಾರವಾಗಿದೆ. ಅನ್ನೋದು ಜಗತ್ತಿಗೆ ಗೊತ್ತಿರುವ ವಿಷಯ.. ಕಳಸಾ ಬಂಡೂರಿ ಕೆಲಸ ಈಗ ಆಗಿದೆ. ಕೃಷ್ಣ ಮೇಲ್ದಂಡೆ ಕೆಲಸ ಕೂಡ ಆಗಿದೆ. ಇದು ಎಲ್ಲರಿಗೂ ಗೊತ್ತಿದೆ.​

ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಅಭಿವೃದ್ಧಿ, ಮಹಿಳಾ ಸಲೀಕರಣ, ಉದ್ಯೋಗ ಭರವಸೆ!

ರಾಜ್ಯಗಳ ನಡುವಿನ ವಿವಾದ ಪರಿಹಾರಕ್ಕೆ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಕೊಡಿ ಅಂತ ಜೆಡಿಎಸ್‌ ಕೇಳ್ತಿದೆ? ವಿವಾದ ಎರಡು ರಾಜ್ಯಗಳ ಮಧ್ಯೆ ಇದ್ದಾಗ.. ಪ್ರಾದೇಶಿಕ ಪಕ್ಷ ಹೇಗೆ ಸಮಸ್ಯೆ ಬಗೆ ಹರಿಸುತ್ತೆ..?​ ಬೇರೆ ರಾಜ್ಯದವರು ಒಪ್ಪದೇ ಇದ್ದಾಗ ಸಮಸ್ಯೆ ಹೇಗೆ ಬಗೆಹರಿಯುತ್ತೆ. ಜಗಳ ಮಾಡಿಕೊಂಡೇ ಇರಿ.. ಅವರ ಇಂತಹ ಹೇಳಿಕೆಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಪೂರ್ತಿ ಕರ್ನಾಟಕದ ಜನತೆಗೆ ಗೊತ್ತಾಗಿದೆ... ಜೆಡಿಎಸ್‌ಗೆ ವೋಟ್ ಹಾಕಿದ್ರೆ ಅದು ಕಾಂಗ್ರೆಸ್‌ಗೆ ವೋಟ್ ಹಾಕಿದಂತೆ ಎಂದು​ ಹೇಳ್ತಾರೆ. ಆದರೆ, ಜೆಡಿಎಸ್ ಹೇಗೆ ಸರ್ಕಾರ ಮಾಡುತ್ತದೆ. ಅವರಿಗೆ ಸೀಟೇ ಇಲ್ಲ.. ಸರ್ಕಾರ ಹೇಗೆ ಮಾಡ್ತಾರೆ ಹೇಳಿ​ ಎಂದು ಅಮಿತ್‌ ಶಾ ಮಾರ್ಮಿಕವಾಗಿ ನುಡಿದರು.