ಐದು ಗ್ಯಾರಂಟಿಗಳಲ್ಲೊಂದಾದ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹಜ್ಯೋತಿ’ ಯೋಜನೆಗೆ ಮಾಸಿಕ 1955 ಕೋಟಿ ರು.ನಂತೆ ವಾರ್ಷಿಕ ಅಂದಾಜು 23,400 ಕೋಟಿ ರು. ಅನುದಾನ ಅಗತ್ಯವಿದೆ ಎಂಬ ಮಾಹಿತಿಯನ್ನು ವರದಿಯಲ್ಲಿ ತಿಳಿಸಿದೆ ಎಂದು ಗೊತ್ತಾಗಿದೆ. 

ಬೆಂಗಳೂರು (ಮೇ.27): ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಹೇಳಿರುವ ಕಾಂಗ್ರೆಸ್‌ ಸರ್ಕಾರ ಪ್ರತಿ ಯೋಜನೆಯಡಿ ಎಷ್ಟು ಫಲಾನುಭವಿಗಳು ಬರುತ್ತಾರೆ ಹಾಗೂ ಯೋಜನೆಗಳ ಜಾರಿಯಿಂದ ಸರ್ಕಾರದ ಮೇಲಾಗುವ ಹೊರೆ ಎಷ್ಟು ಎಂಬ ಬಗ್ಗೆ ಇಲಾಖಾವಾರು ವರದಿ ಕೇಳಿದ್ದು, ಮೊದಲಿಗೆ ಇಂಧನ ಇಲಾಖೆಯು ವಿವರವಾದ ವರದಿ ಸಲ್ಲಿಸಿದೆ.

ಐದು ಗ್ಯಾರಂಟಿಗಳಲ್ಲೊಂದಾದ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹಜ್ಯೋತಿ’ ಯೋಜನೆಗೆ ಮಾಸಿಕ 1955 ಕೋಟಿ ರು.ನಂತೆ ವಾರ್ಷಿಕ ಅಂದಾಜು 23,400 ಕೋಟಿ ರು. ಅನುದಾನ ಅಗತ್ಯವಿದೆ ಎಂಬ ಮಾಹಿತಿಯನ್ನು ವರದಿಯಲ್ಲಿ ತಿಳಿಸಿದೆ ಎಂದು ಗೊತ್ತಾಗಿದೆ. ಇದರೊಂದಿಗೆ ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಯೋಜನೆಯೇ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಐದೂ ಗ್ಯಾರಂಟಿಗಳ ಜಾರಿಗೆ 50 ಸಾವಿರ ರು. ಕೋಟಿ ರು. ಅಂದಾಜಿಸಿರುವ ಸರ್ಕಾರಕ್ಕೆ ಇದರ ಅರ್ಧದಷ್ಟುಅನುದಾನ ಗೃಹಜ್ಯೋತಿ ಒಂದೇ ಯೋಜನೆಗೆ ಬೇಕಾಗುತ್ತದೆ.

ಇಂದಿರಾ ಕ್ಯಾಂಟೀನ್‌ ದುರಸ್ತಿಗೆ ತಲಾ 1 ಲಕ್ಷ: ಬಿಬಿಎಂಪಿಯಿಂದ ಮಹತ್ವದ ನಿರ್ಧಾರ

ಮುಖ್ಯಮಂತ್ರಿಗಳ ಸೂಚನೆಯಂತೆ ಇಂಧನ ಇಲಾಖೆಯು ಬೆಸ್ಕಾಂ, ಚೆಸ್ಕಾಂ ಸೇರಿದಂತೆ ತನ್ನೆಲ್ಲಾ ವಿದ್ಯುತ್‌ ಸರಬರಾಜು ನಿಗಮಗಳಿಂದ ಮಾಸಿಕ 200 ಯುನಿಟ್‌ನೊಳಗೆ ವಿದ್ಯುತ್‌ ಬಳಕೆದಾರರ ಮಾಹಿತಿ ಸಂಗ್ರಹಿಸಿದೆ. ಆ ಪ್ರಕಾರ, ರಾಜ್ಯದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 86 ಲಕ್ಷ, ಚೆಸ್ಕಾಂನಡಿ 20 ಲಕ್ಷ, ಮೆಸ್ಕಾಂ ವ್ಯಾಪ್ತಿಯಲ್ಲಿ 15 ಲಕ್ಷ, ಹೆಸ್ಕಾಂ ವ್ಯಾಪ್ತಿಯಲ್ಲಿ 28 ಲಕ್ಷ ಹಾಗೂ ಜೆಸ್ಕಾ ಅಡಿ 19 ಲಕ್ಷ ಸಂಪರ್ಕಗಳು ಸೇರಿ ಒಟ್ಟಾರೆ ಎಲ್ಲಾ ನಿಗಮಗಳ ಅಡಿ 1.70 ಕೋಟಿ ವಿದ್ಯುತ್‌ ಸಂಪರ್ಕಗಳಿದ್ದು, ಈ ಪೈಕಿ 1.20 ಕೋಟಿಯಷ್ಟು ಬಳಕೆದಾರರು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆದಾರರಾಗಿದ್ದಾರೆ. 

ಕೂಪನ್‌ಗಳ ಹಂಚಿ 50 ಕಡೆ ಕಾಂಗ್ರೆಸ್‌ ಗೆಲುವು, ನಿಖಿಲ್‌ ಸೋಲಿಗೂ ಇದೇ ಕಾರಣ: ಎಚ್‌ಡಿಕೆ

ಇವರೆಲ್ಲರಿಗೂ ಗೃಹಜ್ಯೋತಿ ಯೋಜನೆ ಜಾರಿಗೆ ಮಾಸಿಕ 1955 ಕೋಟಿ ರು.ನಂತೆ 23,400 ಕೋಟಿ ರು.ಗಳಷ್ಟುಅನುದಾನ ಬೇಕೆಂದು ತಿಳಿಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಗೃಹ ಬಳಕೆ ವಿದ್ಯುತ್‌ಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೇರೆ ಬೇರೆ ರೀತಿಯ ದರ ನಿಗದಿಪಡಿಸಲಾಗಿದೆ. ಆ ಪ್ರಕಾರ ಗೃಹಜ್ಯೋತಿ ಯೋಜನೆ ಜಾರಿಯಿಂದ ಮಾಸಿಕ ಗರಿಷ್ಠ 200 ಯುನಿಟ್‌ವರೆಗೆ ವಿದ್ಯುತ್‌ ಬಳಸುವ ಫಲಾನುಭವಿಗೆ ಗ್ರಾಮೀಣ ಭಾಗದಲ್ಲಿ 1000 ರು., ನಗರ ಪ್ರದೇಶದಲ್ಲಿ 1200 ರು. ನಷ್ಟುಉಳಿತಾಯವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.