ವಿಶ್ವದ ನಂ.1 ಟೆನಿಸ್ ಪಟು ನೋವಾಕ್ ಜೊಕೊವಿಚ್‌ಗೆ ಕೊರೋನಾ ಪಾಸಿಟೀವ್!

 ವಿಶ್ವದ ನಂಬರ್ 1 ಟೆನಿಸ್ ಪಟು ಸರ್ಬಿಯಾದ ನೋವಾಕ್ ಜೊಕೋವಿಚ್‌ಗೆ ಕೊರೋನಾ ತಗುಲಿದೆ. ಇಷ್ಟೇ ಅಲ್ಲ ಜೊಕೋವಿಚ್ ಕುಟುಂಬ ಸದಸ್ಯರಿಗೂ ಕೊರೋನಾ ಮಹಾಮಾರಿ ಅಂಟಿಕೊಂಡಿದೆ. ಈ ಮೂಲಕ ಹಾಲಿ ಟೆನಿಸ್ ಪಟುಗಳ ಪೈಕಿ ಕೊರೋನಾ ಕಾಣಿಸಿಕೊಂಡ 4ನೇ ಟೆನಿಸ್ ಪಟು ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ.

World No 1 tennis player Novak Djokovic has tested positive for Covid 19

ಸರ್ಬಿಯಾ(ಜೂ.23): ಕೊರೋನಾ ವೈರಸ್‌ನಿಂದ ಕ್ರೀಡಾಪಟುಗಳು ದೂರವಿದ್ದರು. ಆದರೆ ಲಾಕ್‌ಡೌನ್ ಸಡಿಲಿಕೆ, ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ ಇದೀಗ ಕ್ರೀಡಾಪಟುಗಳಿಗೂ ಕೊರೋನಾ ವಕ್ಕರಿಸುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶ ಕ್ರಿಕೆಟಿರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಇದೀಗ ಟೆನಿಸ್ ಪಟುಗಳಲ್ಲೂ ಕೊರೋನಾ ಕಾಣಿಸಿಕೊಂಡಿದೆ. ವಿಶ್ವದ ನಂ.1 ಟೆನಿಸ್ ಪಟು ನೋವಾಕ್ ಜೊಕೋವಿಚ್‍ಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

ಪಾಕಿಸ್ತಾನದ ಮೂವರು ಸ್ಟಾರ್ ಕ್ರಿಕೆಟಿಗರಿಗೆ ಕೊರೋನಾ ಅಟ್ಯಾಕ್..!..

ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಸರ್ಬಿಯಾ ಹಾಗೂ ಕ್ರೊವೇಶಿಯಾ ಪ್ರದರ್ಶನ ಪಂದ್ಯವನ್ನು ಎರ್ಪಡಿಸಲಾಗಿತ್ತು. ಪಂದ್ಯಕ್ಕಾಗಿ ಬೆಲ್‌ಗ್ರೇಡ್‌ಗೆ ತೆರಳಿದ್ದ ನೋವಾಕ್ ಜೊಕೋವಿಚ್ ಟೂರ್ನಿ ಮುಗಿಸಿ ವಾಪಸ್ ಆಗಿದ್ದರು. ತಾಯ್ನಾಡಿದ ಮರಳಿದ ಬೆನ್ನಲ್ಲೇ ನಿಯಮದ ಪ್ರಕಾರ ನೋವಾಕ್ ಜೊಕೋವಿಚ್ ತಪಾಸಣೆ ನಡೆಸಲಾಯಿತು. ಈ ವೇಳೆ ಜೊಕೋವಿಚ್‌ಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. 

ಬಾಂಗ್ಲಾ ಕ್ರಿಕೆಟಿಗ ಮಶ್ರಫೆ ಮೊರ್ತಜಾಗೆ ಕೊರೋನಾ ಸೋಂಕು

ಜೊಕೋವಿಚ್ ಜೊತೆಗೆ ಕುಟುಂಬ ಸದಸ್ಯರಿಗೂ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಆದರೆ ಅದೃಷ್ಟವಶಾತ್ ಜೊಕೋವಿಚ್ ಮಕ್ಕಳಿಗೆ ಕೊರೋನಾ ತಗುಲಿಲ್ಲ.  ನೋವಾಕ್ ಜೊಕೋವಿಚ್  ಕೊರೋನಾ ವೈರಸ್ ತಗುಲಿಸಿಕೊಂಡ ನಾಲ್ಕನೇ ಟೆನಿಸ್ ಪಟುವಾಗಿದ್ದಾರೆ. ಇದಕ್ಕೂ ಮೊದಲು ಗ್ರಿಗೋರ್ ಡಿಮಿಟ್ರೋವ್, ಬೊರ್ನಾ ಕೊರಿಕ್ ಹಾಗೂ ವಿಕ್ಟೋರ್ ಟ್ರೊಯ್ಕಿಗೆ ಕೊರೋನಾ ವೈರಸ್ ತಗುಲಿತ್ತು.
 

Latest Videos
Follow Us:
Download App:
  • android
  • ios