ಢಾಕ(ಜೂ.20): ಕೊರೋನಾ ವೈರಸ್ ಇದೀಗ ಯಾರನ್ನೂ ಬಿಡುತ್ತಿಲ್ಲ. ಭಾರತದಲ್ಲಿ ಕೊರೋನಾ ವಾರಿಯರ್ಸ್‌ಗೆ ಕೊರೋನಾ ವಕ್ಕರಿಸಿಕೊಳ್ಳುತ್ತಿದೆ. ಅತ್ತ ಬಾಂಗ್ಲಾದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಬಾಂಗ್ಲಾದೇಶ ಕ್ರಿಕೆಟಿಗ ಮಶ್ರಫೆ ಮೊರ್ತಜಾಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸ್ವಯಂ ಐಸೋಲೇಶನ್‌ಗೆ ಒಳಗಾಗಿರುವ ಮಶ್ರಫೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಾಂಗ್ಲಾ ಕ್ರಿಕೆಟಿಗ ಮುಶ್ರಫೆ ಮೊರ್ತಝಾ ಕುಟುಂಬ ಸದಸ್ಯರಿಗೆ ಕೊರೋನಾ!.

ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮಶ್ರಫೆ ಮೊರ್ತಜಾಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಮನೆಯಲ್ಲಿ ಮಶ್ರಫೆ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಮಶ್ರಫೆ ಮೊರ್ತಜಾ ಶೀಘ್ರದಲ್ಲೇ ಚೇತರಿಸಿಕೊಳ್ಳಲು ಪ್ರಾರ್ಥಿಸಿ ಎಂದು ಸಹೋದರ ಮನವಿ ಮಾಡಿದ್ದಾರೆ.

ಕೊರೋನಾ ವೈರಸ್ ಸಮಯಜಲ್ಲಿ ಮಶ್ರಫೆ, ನಿರ್ಗತಿಕರಿಗೆ, ಬಡವರಿಗೆ ನರವು ನೀಡುತ್ತಾ ಹಲವು ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಮಶ್ರಫೆ ಮೊರ್ತಜಾ ಕುಟುಂಬಸ್ಥರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಇನ್ನು ಬಾಂಗ್ಲಾದೇಶ ಏಕದಿನ ನಾಯಕ ತಮೀಮ್ ಇಕ್ಬಾಲ್ ಸಹೋದರ ನಫೀಸ್ ಇಕ್ಬಾಲ್‌ಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ.