ಇತ್ತೀಚೆಗೆ ಬಿಸಿಸಿಐ ಕ್ರಿಕೆಟ್  ಮಂಡಳಿ 15ವರ್ಷದ ಒಳಗಿನ ಬಾಲಕಿಯರ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಗುಮ್ಮಟನಗರಿ ವಿಜಯಪುರದ ಶ್ರೇಯಾ ಎಸ್ ಚವ್ಹಾಣ ಹಾಗೂ ಪ್ರಿಯಾ ಎಸ್ ಚವ್ಹಾಣ ಏಕದಿನ ಕ್ರಿಕೆಟ್ ಪಂದ್ಯ ಗಳಿಗೆ ಆಯ್ಕೆಯಾಗಿದ್ದಾರೆ.

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಡಿ.27): ಇತ್ತೀಚೆಗೆ ಬಿಸಿಸಿಐ ಕ್ರಿಕೆಟ್ ಮಂಡಳಿ 15ವರ್ಷದ ಒಳಗಿನ ಬಾಲಕಿಯರ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಗುಮ್ಮಟನಗರಿ ವಿಜಯಪುರದ ಶ್ರೇಯಾ ಎಸ್ ಚವ್ಹಾಣ ಹಾಗೂ ಪ್ರಿಯಾ ಎಸ್ ಚವ್ಹಾಣ ಏಕದಿನ ಕ್ರಿಕೆಟ್ ಪಂದ್ಯ ಗಳಿಗೆ ಆಯ್ಕೆಯಾಗಿದ್ದಾರೆ. ಸದ್ಯ ಗುಜರಾತಿನ ರಾಜಕೋಟದಲ್ಲಿ ಆರಂಭವಾಗಿರುವ ಏಕದಿನ ಸರಣಿಯಲ್ಲಿ ತಮ್ಮ ಪ್ರದರ್ಶನ ತೋರಲಿದ್ದಾರೆ. ಇಬ್ಬರು ಬಾಲಕಿಯರು ಅಸ್ಸಾಂ, ರಾಜಸ್ಥಾನ, ಜಮ್ಮು ಕಾಶ್ಮೀರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ತಂಡದ ಜತೆ ಆಟಕ್ಕೆ ಕಣಕ್ಕೆ ಇಳಿಯಲಿದ್ದಾರೆ. ಈ ವಿಚಾರ ಗುಮ್ಮಟನಗರಿ ಜನರಲ್ಲಿ‌ ಸಂತಸ ಮೂಡಿಸಿದೆ 

ಸರ್ಕಾರಿ ಶಾಲೆಯಲ್ಲಿ‌ ಓದಿದ ಪ್ರೀಯಾ: ಅಂದಹಾಗೆ ಪ್ರಿಯಾ ಚವ್ಹಾಣ ಬಂದಿರುವುದು ಬಡತನದ ಕುಟುಂಬದಿಂದ.‌ ಹೇಳಿಕೊಳ್ಳುವಂತ ಆರ್ಥಿಕತೆ ಹೊಂದಿದ ಕುಟುಂಬವಲ್ಲ. ಹೀಗಾಗಿ ನಗರದ ಸರ್ಕಾರಿ ಶಾಲೆ ನಂ7ರಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಲೆ ವಿಶೇಷ ಸಾಧನೆ ಮಾಡಿ ಈಗ ವಿಜಯಪುರಕ್ಕೆ ಹೆಸರು ತಂದಿದ್ದಾಳೆ. ಶ್ರೇಯಾ ತಂದೆ ಬಸ್ ಕಂಡಕ್ಟರ್ ಆಗಿದ್ದಾರೆ. ಇಬ್ಬರು ಓಂ ಕ್ರಿಕೆಟ್ ಅಕಾಡಮಿ ಮತ್ತು ಸ್ಪೋರ್ಟ್ಸ್ ಅರೆನಾ ಕ್ಲಬ್ ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ್ದಾರೆ. ಇಬ್ಬರು ಬಾಲಕಿಯರು ಕರ್ನಾಟಕ ತಂಡಕ್ಕೆ ಆಯ್ಕೆಯಾಗುವ ಮೂಲಕ ವಿಜಯಪುರದ‌ ಕೀರ್ತಿ ಪತಾಕೆ ಹಾರಿಸಿದ್ದಾರೆ. 

ಕೋಚ್‌ಗಳಲ್ಲು ಸಂತಸ: ಕೋಚ ಮುರಳಿ ಬೀಳಗಿ ಇವರ ಮಾರ್ಗದರ್ಶನದಲ್ಲಿ ಬಾಲಕಿಯರು‌ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ಬಾಲಕಿಯರ ಸಾಧನೆಗೆ ಕ್ಲಬ್ ಕಾರ್ಯದರ್ಶಿ ರಾಜೇಶ ತೊರವಿ ಸಂತಸ ವ್ಯಕ್ತಪಡಿಸಿದ್ದಾರೆ.

ಮಣಿಪಾಲ ಟೆಕ್ನಾಲಜಿಗೆ ಕೆಎಚ್‌ ಸಿಸಿಎಲ್‌ ಪ್ರಶಸ್ತಿ
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯು ಆಯೋಜಿಸಿದ್ದ 3 ದಿನಗಳ ಕಾರ್ಪೊರೇಟ್‌ ಕ್ರಿಕೆಟ್‌ ಲೀಗ್‌ (ಕೆ.ಎಚ್‌- ಸಿ.ಸಿ.ಎಲ್‌) ನಲ್ಲಿ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್‌ ಪ್ರಶಸ್ತಿ ಗೆದ್ದುಕೊಂಡಿದೆ. ಶುಕ್ರವಾರ ಆರಂಭವಾದ ಈ ಕೂಟವು ಭಾನುವಾರ ಮುಕ್ತಾಯಗೊಂಡಿತು. ಸಮಾರೂಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೇಂದ್ರ ಪಾಲ್ಗೊಂಡಿದ್ದರು.

ನನಗೆ ಆಘಾತ ಹಾಗೂ ಆಶ್ಚರ್ಯವಾಯ್ತು: ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್ 

ಈ ಲೀಗ್‌ನಲ್ಲಿ ಭಾಗವಹಿಸಿದ್ದ ಎಲ್ಲ ತಂಡಗಳು 1,20,000 ರು.ಗಳನ್ನು ಸೇರಿಸಿ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗ ನಿಧಿಗೆ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್‌ ಅವರಿಗೆ ಹಸ್ತಾಂತರಿಸಲಾಯಿತು.

ಟೀಂ ಇಂಡಿಯಾದಲ್ಲಿ ಮಹತ್ವದ ಬೆಳವಣಿಗೆ, ಟಿ20ಯಿಂದ ತಾತ್ಕಾಲಿಕ ಬ್ರೇಕ್ ಪಡೆದ ವಿರಾಟ್ ಕೊಹ್ಲಿ!

ಕೆ.ಎಂ.ಸಿ. ಡೀನ್‌ ಡಾ. ಶರತ್‌ ಕೆ. ರಾವ್‌, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್‌ ವೇಣುಗೋಪಾಲ್‌ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿಉಪಸ್ಥಿತರಿದ್ದರು. ಫೈನಲ್‌ ಪಂದ್ಯದಲ್ಲಿ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್‌ ಪ್ರಥಮ, ಉಡುಪಿ ಎಸ್‌ಪಿ 11 ರನ್ನರ್‌ ಆಪ್‌ ಪ್ರಶಸ್ತಿ ಪಡೆದವು. ಪ್ರಶಾಂತ್‌ ಸರಣಿ ಶ್ರೇಷ್ಠ, ಕಾರ್ತಿಕ್‌ ಉತ್ತಮ ದಾಂಡಿಗ ಮತ್ತು ಸಿದ್ದೇಶ್‌ ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರು.