ಟೀಂ ಇಂಡಿಯಾದಲ್ಲಿ ಮಹತ್ವದ ಬೆಳವಣಿಗೆ, ಟಿ20ಯಿಂದ ತಾತ್ಕಾಲಿಕ ಬ್ರೇಕ್ ಪಡೆದ ವಿರಾಟ್ ಕೊಹ್ಲಿ!

ಬಾಂಗ್ಲಾದೇಶ ಟೆಸ್ಟ್ ಸರಣಿ ಯಶಸ್ವಿಯಾಗಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೆ ಸಜ್ಜಾಗುತ್ತಿದೆ. ಇದರ ನಡುವೆ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ವಿರಾಟ್ ಕೊಹ್ಲಿ ಟಿ20 ಯಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. 

Virat kohlli takes temporary break from t20 format to concentrate Test and ODi future ckm

ಮುಂಬೈ(ಡಿ.27): ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯದ ಕಳಪೆ ಪ್ರದರ್ಶನ, ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲ ಸೇರಿದಂತೆ ಹಲವು ಕಾರಣಗಳಿಂದ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ. ಇದರಲ್ಲಿ ಮೂರು ಮಾದರಿಗೆ ಮೂರು ತಂಡ ರಚಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಬಿಸಿಸಿಐ ಬೆಳವಣಿಗೆಗಳು ಈಗಾಗಲೇ ಆಟಗಾರರು ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ. ಇದರ ನಡುವೆ ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರ ಅಭಿಮಾನಿಗಳಿಗೆ ಶಾಕ್ ಆಗಿದೆ. ಟಿ20 ಮಾದರಿಯಿಂದ ವಿರಾಟ್ ಕೊಹ್ಲಿ ತಾತ್ಕಾಲಿಕ ಬ್ರೇಕ್ ಪಡೆದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಯಾವಾಗ ಟಿ20 ಮಾದರಿಗೆ ಹಿಂತಿರುಗುತ್ತೇನೆ ಅನ್ನೋದನ್ನು ಬಿಸಿಸಿಐಗೆ ಸ್ಪಷ್ಟಪಡಿಸಿಲ್ಲ. ಇದು ಅಭಿಮಾನಿಗಳ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಶ್ರೀಲಂಕಾ(India vs Sri lanka) ವಿರುದ್ದದ ಟಿ20 ಸರಣಿಯಿಂದ(T20 Format) ವಿರಾಟ್ ಕೊಹ್ಲಿ(Virat Kohi) ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದಾರೆ. ಇದರಿಂದ  ಲಂಕಾ ವಿರುದ್ದದ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ, ಇಂಜುರಿಗೆ ತುತ್ತಾಗಿರುವ ರೋಹಿತ್ ಶರ್ಮಾ(Rohit sharma) ಹಾಗೂ ಕೆಎಲ್ ರಾಹುಲ್(KL Rahul) ಅಲಭ್ಯರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ(Team India) ಹೋರಾಟ ನಡೆಸಲಿದೆ.

ಸ್ಟಾರ್ಟ್ ಅಪ್ ಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿರುವ 7 ಭಾರತೀಯ ಕ್ರಿಕೆಟಿಗರು ಇವರೇ ನೋಡಿ!

ಕೊಹ್ಲಿ ಎಷ್ಟು ದಿನ ಟಿ20 ಮಾದರಿಂದ ವಿಶ್ರಾಂತಿ(Virat Kohli takes Break) ಪಡೆಯಲಿದ್ದಾರೆ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಏಕದಿನ(ODI) ಹಾಗೂ ಟೆಸ್ಟ್(Test) ಮಾದರಿಯಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಲು ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಅಭಿಮಾನಿಗಳ ಆತಂಕವೂ ಹೆಚ್ಚಾಗಿದೆ. ಕೊಹ್ಲಿ ಟಿ20 ಮಾದರಿಯಿಂದ ದೂರ ಸರಿಯುತ್ತಿದ್ದಾರೆ ಅನ್ನೋ ಮಾತಿಗೆ ಈ ವಿಶ್ರಾಂತಿ ನಿರ್ಧಾರ ಪುಷ್ಠಿ ನೀಡುತ್ತಿದೆ.

ಐಪಿಎಲ್ 2023ರ ಟೂರ್ನಿ ವರೆಗೆ ಕೊಹ್ಲಿ ಟೀಂ ಇಂಡಿಯಾ ಟಿ20 ಟೂರ್ನಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಸದ್ಯ ವಿಶ್ರಾಂತಿ ಪಡೆದುಕೊಂಡಿರುವ ಕೊಹ್ಲಿ 2023ರ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತ ಇದೆ.

ಟಿ20 ಟೂರ್ನಿಯಿಂದ ವಿಶ್ರಾಂತಿ ಪಡೆಯುತ್ತಿರುವುದಾಗಿ ಕೊಹ್ಲಿ ಈಗಾಗಲೇ ಬಿಸಿಸಿಐಗೆ ತಿಳಿಸಿದ್ದಾರೆ. ಕೊಹ್ಲಿ ಪ್ರಮುಖ ಸರಣಿಗಳತ್ತ ಗಮನಹರಿಸಿದ್ದಾರೆ. ರೋಹಿತ್ ಶರ್ಮಾಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ. ಇಂಜುರಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ರೋಹಿತ್ ತಂಡಕ್ಕೆ ಮರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

 

Virat Kohli: 2019ರ ಬಳಿಕ ಮೊದಲ ಏಕದಿನ ಶತಕ ಸಿಡಿಸಿದ ಕಿಂಗ್ ಕೊಹ್ಲಿ..!

ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅಲಭ್ಯತೆಯಿಂದ ಇದೀಗ ಆಯ್ಕೆ ಸಮಿತಿ ಈ ಸ್ಥಾನಕ್ಕೆ ಸೂಕ್ತರನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಇದೆ. ಇಷ್ಟೇ ಅಲ್ಲ 2024ರ ಟಿ20 ವಿಶ್ವಕಪ್ ಟೂರ್ನಿಗೆ ಈಗಿನಿಂದಲೇ ತಂಡವನ್ನು ಸೆಟ್ ಮಾಡವು ಮಹತ್ತರ ಜವಾಬ್ದಾರಿಯೂ ಆಯ್ಕೆ ಸಮಿತಿ ಮೇಲಿದೆ. ಯುವ ಆಟಗಾರರಿಗೆ ಸ್ಥಾನ ಕಲ್ಪಿಸಿ ಬಲಿಷ್ಠ ತಂಡ ರೂಪಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ. ಹೀಗಾಗಿ ಹಿರಿಯರ ಅನುಪಸ್ಥಿತಿಯಲ್ಲಿ ಇದೀಗ ಬಿಸಿಸಿಐ ಹೊಸ ತಂಡ ಕಟ್ಟಲಿದೆ. ಫಿಟ್ನೆಸ್ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸುವ ಆಟಗಾರನಿಲ್ಲ. ಆದರೆ ಸತತ ಟೂರ್ನಿಗಳಿಂದ ಕೊಹ್ಲಿ ಬಳಲಿದ್ದಾರೆ. ಹೀಗಾಗಿ 34ರ ಹರೆಯದ ವಿರಾಟ್ ಕೊಹ್ಲಿ ವಿಶ್ರಾಂತಿಗೆ ಜಾರಿದ್ದಾರೆ.  

Latest Videos
Follow Us:
Download App:
  • android
  • ios