ನನಗೆ ಆಘಾತ ಹಾಗೂ ಆಶ್ಚರ್ಯವಾಯ್ತು: ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್ ಆದ ವೇಗಿಯ ಮನದಾಳದ ಮಾತು..!

ಡಿಸೆಂಬರ್ 23ರಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಸಂದೀಪ್ ಶರ್ಮಾ
ಐಪಿಎಲ್‌ನ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ಮಧ್ಯಮ ವೇಗಿ
50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿರುವ ಸಂದೀಪ್ ಶರ್ಮಾ

I Am Shocked And Disappointed Veteran Indian Pacer Sandeep Sharma On Going Unsold In IPL Auction kvn

ನವದೆಹಲಿ(ಡಿ.27): ಇಂಡಿಯನ್‌ ಪ್ರೀಮಿಯರ್ ಲೀಗ್ ಹರಾಜು ದಿನಕಳೆಯುವುದರೊಳಗಾಗಿ ಕೆಲ ಆಟಗಾರರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ. ಹರಾಜು ಮುಗಿದ ಮರುದಿನದಿಂದಲೇ ಯುವ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾದರೆ ನಾವು ನೀವೆಲ್ಲರೂ ಅಂತಹ ಆಟಗಾರರು ಬೆಳೆದು ಬಂದ ರೀತಿಯನ್ನು ಓದುತ್ತೇವೆ. ಅದೇ ರೀತಿ ಕೆಲವು ಅನುಭವಿ ಆಟಗಾರರು ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆದಾಗಲೂ ಇವರ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಚರ್ಚೆಗಳು ನಡೆಯುತ್ತವೆ. ಇದೀಗ ಅಂತಹದ್ದೇ ಒಂದು ಚರ್ಚೆ ಆರಂಭವಾಗಿದ್ದು, ಐಪಿಎಲ್‌ನ ಅನುಭವಿ ವೇಗಿಗಳಲ್ಲಿ ಒಬ್ಬರಾಗಿರುವ ಸಂದೀಪ್ ಶರ್ಮಾ, ಈ ಬಾರಿಯ ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ. 

ಡಿಸೆಂಬರ್ 23ರಂದು ನಡೆದ ಐಪಿಎಲ್‌ ಮಿನಿ ಹರಾಜಿನಲ್ಲಿ, ಸಂದೀಪ್ ಶರ್ಮಾ ಅವರನ್ನು ಖರೀದಿಸಲು ಯಾವೊಬ್ಬ ಫ್ರಾಂಚೈಸಿಯು ಒಲವು ತೋರಲಿಲ್ಲ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅನುಭವಿ ವೇಗಿ ಸಂದೀಪ್ ಶರ್ಮಾ, ತುಂಬಾ ಅಚ್ಚರಿ ಹಾಗೂ ಬೇಸರವಾಯಿತು ಎಂದು ಹೇಳಿದ್ದಾರೆ. " ನಾನು ಯಾಕಾಗಿ ಅನ್‌ಸೋಲ್ಡ್ ಆದೆ ಎಂದು ಅರ್ಥವಾಗುತ್ತಿಲ್ಲ. ನಾನು ಯಾವೆಲ್ಲಾ ತಂಡದ ಪರ ಆಡಿದ್ದೇನೋ ಆ ತಂಡದ ಪರವಾಗಿ ಉತ್ತಮ ಪ್ರದರ್ಶನವನ್ನೇ ತೋರಿದ್ದೇನೆ. ಕೆಲವೊಂದು ತಂಡಗಳು ನನ್ನ ಮೇಲೆ ಬಿಡ್ ಮಾಡಬಹುದು ಎಂದು ಭಾವಿಸಿದ್ದೆ. ನಿಜ ಹೇಳಬೇಕೆಂದರೇ, ನಾನು ಅನ್‌ಸೋಲ್ಡ್ ಆಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಎಲ್ಲಿ, ಏನೂ ತಪ್ಪಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ನಾನು ಉತ್ತಮ ಪ್ರದರ್ಶನ ತೋರಿದ್ದೇನೆ. ಇನ್ನು ರಣಜಿ ಟ್ರೋಫಿಯ ಕಳೆದ ಸುತ್ತಿನಲ್ಲಿ ನಾನು 7 ವಿಕೆಟ್ ಉರುಳಿಸಿದ್ದೇನೆ. ಇನ್ನು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿಯೂ ಚೆನ್ನಾಗಿ ಆಡಿದ್ದೆ" ಎಂದು ಸಂದೀಪ್ ಶರ್ಮಾ ಹೇಳಿದ್ದಾರೆ.

ಸಂದೀಪ್ ಶರ್ಮಾ, ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ನಿರಂತರವಾಗಿ ವಿಕೆಟ್‌ ಕಬಳಿಸುವ ಮೂಲಕ ಗಮನ ಸೆಳೆದಿದ್ದರು. ಸಂದೀಪ್ ಶರ್ಮಾ ಐಪಿಎಲ್ ಟೂರ್ನಿಯಲ್ಲಿ ಯಾವುದೇ ತಂಡವನ್ನು ಪ್ರತಿನಿಧಿಸಿದರೂ ಸಹಾ, ವಿಕೆಟ್ ಕಬಳಿಸುವ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಸಂದೀಪ್ ಶರ್ಮಾ, 104 ಟೆಸ್ಟ್ ಪಂದ್ಯಗಳನ್ನಾಡಿ 7.77ರ ಎಕಾನಮಿಯಲ್ಲಿ ರನ್‌ ನೀಡಿ 114 ವಿಕೆಟ್ ಕಬಳಿಸಿದ್ದರು.

IPL Auction 2023: ಹಲವು ಅಚ್ಚರಿಗಳಿಗೆ ಸಾಕ್ಷಿಯಾದ ಮಿನಿ ಹರಾಜು..!

ಕೊಚ್ಚಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ಸಂದೀಪ್ ಶರ್ಮಾ ಅವರ ಮೂಲ ಬೆಲೆ 50 ಲಕ್ಷ ರುಪಾಯಿ ನಿಗದಿ ಪಡಿಸಿಕೊಂಡಿದ್ದರು. ಹೀಗಿದ್ದೂ ಸಂದೀಪ್ ಶರ್ಮಾ ಖರೀದಿಸಲು 10 ಫ್ರಾಂಚೈಸಿಗಳ ಪೈಕಿ ಯಾವ ತಂಡವು ಒಲವು ತೋರಿರಲಿಲ್ಲ. ಹೀಗಿದ್ದೂ ಸಂದೀಪ್ ಶರ್ಮಾ ಅವರಿಗೆ ಐಪಿಎಲ್ ಆಡುವ ಅವಕಾಶದ ಬಾಗಿಲು ಮುಚ್ಚಿಲ್ಲ. ಯಾಕೆಂದರೇ ಯಾವುದಾದರೂ ಬೌಲರ್ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದರೆ ಅವರ ಬದಲಿಗೆ ಬದಲಿ ಆಟಗಾರನಾಗಿ ಐಪಿಎಲ್ ತಂಡವನ್ನು ಕೂಡಿಕೊಳ್ಳುವ ಅವಕಾಶವಿದೆ.

ಐಪಿಎಲ್ ಮಿನಿ ಹರಾಜಿಗೆ ಒಟ್ಟು 405 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಈ ಪೈಕಿ 80 ಆಟಗಾರರು ಹರಾಜಾದರು. 80 ಆಟಗಾರರ ಪೈಕಿ 51 ಆಟಗಾರರು ಭಾರತೀಯರಾದರೇ, 29 ಆಟಗಾರರು ವಿದೇಶಿ ಆಟಗಾರರಿದ್ದರು. ಶುಕ್ರವಾರ ನಡೆದ ಮಿನಿ ಹರಾಜಿನಲ್ಲಿ ಸ್ಯಾಮ್ ಕರ್ರನ್ ಅವರಿಗೆ 18.50 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ. 

Latest Videos
Follow Us:
Download App:
  • android
  • ios