US Open ಜ್ವೆರೆವ್ ಬಗ್ಗುಬಡಿದು ಫೈನಲ್ ಪ್ರವೇಶಿಸಿದ ಜೋಕೋವಿಚ್
* ಕ್ಯಾಲೆಂಡರ್ ಗ್ರ್ತಾನ್ ಸ್ಲಾಂ ಗೆಲ್ಲುವ ಹೊಸ್ತಿಲಲ್ಲಿ ನೊವಾಕ್ ಜೋಕೋವಿಚ್
* ಗ್ರ್ಯಾನ್ ಸ್ಲಾಂ ಇತಿಹಾಸದಲ್ಲಿ 31ನೇ ಬಾರಿಗೆ ಫೈನಲ್ ಪ್ರವೇಶಿಸಿದ ಜೋಕೋ
* 21ನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಟೆನಿಸಿಗ
ನ್ಯೂಯಾರ್ಕ್(ಸೆ.11): ವಿಶ್ವದ ನಂ.1 ಶ್ರೇಯಾಂಕಿತ ಟೆನಿಸಿಗ ನೊವಾಕ್ ಜೋಕೋವಿಚ್ ಯುಎಸ್ ಓಪನ್ ಫೈನಲ್ ಪ್ರವೇಶಿಸುವ ಮೂಲಕ ಕ್ಯಾಲೆಂಡರ್ ಗ್ರ್ತಾನ್ ಸ್ಲಾಂ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ(ಸೆ.10) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ದ 4-6, 6-2, 6-4,4-6,6-2 ಸೆಟ್‌ಗಳಿಂದ ಜಯಿಸುವ ಮೂಲಕ ಪ್ರಶಸ್ತಿಗೆ ಲಗ್ಗೆಯಿಟ್ಟಿದ್ದಾರೆ
ಕಳೆದ ತಿಂಗಳಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ನ ಟೆನಿಸ್ ಸೆಮಿಫೈನಲ್‌ನಲ್ಲಿ ಸರ್ಬಿಯಾದ ಜೋಕೋವಿಚ್ ವಿರುದ್ದ ಗೆಲುವು ಸಾಧಿಸುವ ಮೂಲಕ ನೊವಾಕ್ ಗೋಲ್ಡನ್ ಗ್ರ್ಯಾನ್ ಸ್ಲಾಂ ಕನಸಿಗೆ ತಣ್ಣೀರೆರಚಿದ್ದರು. ಇದೀಗ ಯುಎಸ್ ಓಪನ್ ಸೆಮಿಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುವ ಒಲಿಂಪಿಕ್ಸ್ ಸೋಲಿಗೆ ಸೇಡು ತೀರಿಸಿಕೊಂಡರು. ಆರ್ಥರ್ ಆಶೆ ಕೋರ್ಟ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ದಾಖಲಿಸುತ್ತಿದ್ದಂತೆ ರಾಡ್ ಲೆವರ್ ಹಾಗೂ ಸಾವಿರಾರು ಪ್ರೇಕ್ಷಕರೆದುರು ಅಕ್ಷರಶಃ ಘರ್ಜಿಸಿದರು. 52 ವರ್ಷಗಳ ಹಿಂದೆ ರಾಡ್ ಲೆವರ್ ವರ್ಷವೊಂದರಲ್ಲೇ ಸತತ 4 ಗ್ರ್ಯಾನ್ ಸ್ಲಾಂ ಜಯಿಸುವ ಮೂಲಕ ಕ್ಯಾಲಂಡರ್ ಗ್ರ್ಯಾನ್ ಸ್ಲಾಂ ಜಯಿಸಿದ ಮೊದಲ ಹಾಗೂ ಏಕೈಕ ಟೆನಿಸಿಗ ಎನಿಸಿದ್ದಾರೆ. ಇದೀಗ ರಾಡ್ ಲೆವರ್ ದಾಖಲೆ ಸರಿಗಟ್ಟುವ ಅವಕಾಶ ಜೋಕೋವಿಚ್‌ಗಿದೆ.
ಯುಎಸ್ ಓಪನ್: ಸ್ಪೇನ್‌ನ 18 ವರ್ಷದ ಕಾರ್ಲೊಸ್ ಔಟ್
ಸದ್ಯ ನೊವಾಕ್ ಜೋಕೋವಿಚ್ 20 ಗ್ರ್ಯಾನ್ ಸ್ಲಾಂ ಜಯಿಸುವ ಮೂಲಕ ರಾಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದೀಗ ಭಾನುವಾರ ನಡೆಯಲಿರುವ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ರಷ್ಯಾದ ಡೇನಿಯಲ್ ಮೆಡ್ವಡೇವ್ ವಿರುದ್ದ ಗೆಲುವು ಸಾಧಿಸಿದರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅತಿಹೆಚ್ಚು ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದ ಟೆನಿಸಿಗ ಎನಿಸಿಕೊಳ್ಳಲಿದ್ದಾರೆ. 2021ನೇ ಸಾಲಿನಲ್ಲಿ ಜೋಕೋವಿಚ್ ಈಗಾಗಲೇ ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಜಯಿಸಿದ್ದು, ಇದೀಗ ಯುಎಸ್ ಓಪನ್ ಜಯಿಸಿದರೆ, ಕ್ಯಾಲಂಡರ್ ಗ್ರ್ಯಾನ್ ಸ್ಲಾಂ ಜಯಿಸಿದ ಎರಡನೇ ಟೆನಿಸಿಗ ಎನಿಸಿಕೊಳ್ಳಲಿದ್ದಾರೆ
ಫೈನಲ್ ಪ್ರವೇಶಿಸಿ ಫೆಡರರ್ ದಾಖಲೆ ಸರಿಗಟ್ಟಿದ ನಡಾಲ್: ನೊವಾಕ್ ಜೋಕೋವಿಚ್ ಜ್ವೆರೆವ್ ಎದುರು ಗೆಲುವು ಸಾಧಿಸಿ ಗ್ರ್ಯಾನ್ ಸ್ಲಾಂ ಇತಿಹಾಸದಲ್ಲಿ 31ನೇ ಬಾರಿಗೆ ಫೈನಲ್ ಪ್ರವೇಶಿಸಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದ್ದಾರೆ. ಫೈನಲ್‌ನಲ್ಲಿ ಗೆದ್ದು ಜೋಕೋ ಹೊಸ ಇತಿಹಾಸ ಬರೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.