ಯುಎಸ್ ಓಪನ್‌: ಸ್ಪೇನ್‌ನ 18 ವರ್ಷದ ಕಾರ್ಲೊಸ್‌ ಔಟ್‌

* ಯುಎಸ್ ಓಪನ್ ಟೆನಿಸ್‌ ಟೂರ್ನಿಯಲ್ಲಿ  ಕಾರ್ಲೊಸ್‌ ಆಲ್ಕರಾಜ್‌ಗೆ ಶಾಕ್

* 18ನೇ ವರ್ಷದ ಸ್ಪೇನ್‌ ಆಟಗಾರನಿಗೆ ನಿರಾಸೆ

* ಗಾಯದ ಸಮಸ್ಯೆಯಿಂದಾಗಿ ಸ್ಪರ್ಧೆಯಿಂದ ಹೊರಬಿದ್ದ ಕಾರ್ಲೊಸ್

US Open Tennis Injury Brings Early End To Carlos Alcaraz Dream Run kvn

ನ್ಯೂಯಾರ್ಕ್(ಸೆ.09): ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ರೋಚಕ ಘಟ್ಟತಲುಪಿದ್ದು, ಆಕರ್ಷಕ ಆಟದಿಂದ ಎಲ್ಲರ ಗಮನ ಸೆಳೆದಿದ್ದ ಸ್ಪೇನ್‌ನ 18 ವರ್ಷದ ಕಾರ್ಲೊಸ್‌ ಆಲ್ಕರಾಜ್‌, ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಕೆನಡಾದ ಆಗುರ್‌ ಅಲಿಯಾಸಿಮ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕಾರ್ಲೊಸ್‌ 3-6, 1-3ರಿಂದ ಹಿಂದಿದ್ದರು. ಬಲಗಾಲಿನ ಗಾಯದಿಂದಾಗಿ ಅವರು ಹೊರನಡೆದರು. ಇದೇ ವೇಳೆ ನೆದರ್‌ಲೆಂಡ್ಸ್‌ನ ವ್ಯಾನ್‌ ಡೆ ಜ್ಯಾಂಡ್‌ಸ್ಕಲ್ಪ್‌ ವಿರುದ್ಧ 6-3, 6-0, 4-6, 7-5 ಸೆಟ್‌ಗಳಲ್ಲಿ ಗೆದ್ದ ವಿಶ್ವ ನಂ.2 ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಸೆಮಿಫೈನಲ್‌ಗೇರಿದ್ದಾರೆ.

ಯುಎಸ್ ಓಪನ್‌: ಕ್ವಾರ್ಟರ್‌ ಫೈನಲ್‌ಗೆ ಜೋಕೋವಿಚ್‌ ಲಗ್ಗೆ

ಸೆಮೀಸ್‌ಗೆ ಸಬಲೆಂಕಾ, ಫೆರ್ನಾಂಡೆಜ್‌: ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.2, ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ, ಕೆನಡಾದ ಆ್ಯನಿ ಫೆರ್ನಾಂಡೆಜ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಸಬಲೆಂಕಾ, ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ ವಿರುದ್ಧ ಗೆದ್ದರೆ, ಫೆರ್ನಾಂಡೆಜ್‌, ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ವಿರುದ್ಧ ಜಯಗಳಿಸಿದರು.
 

Latest Videos
Follow Us:
Download App:
  • android
  • ios