3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!
ಅಮೆರಿಕಾದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಾಯಿಯಾಗಿ ಮೂರು ವರ್ಷಗಳ ಬಳಿಕ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಶಸ್ತಿ ಮೊತ್ತವನ್ನು ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಆಕ್ಲೆಂಡ್(ಜ.13): 23 ಗ್ರ್ಯಾಂಡ್‌ಸ್ಲಾಂಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಮೂರು ವರ್ಷಗಳ ಬಳಿಕ ಕೊನೆಗೂ ಪ್ರಶಸ್ತಿ ಬರ ನೀಗಿಸಿಕೊಂಡಿದ್ದಾರೆ.
ಕೆನಡಾ ಹುಡುಗಿ ಆಂಡ್ರಿಕ್ಸ್ US ಓಪನ್ ಒಡತಿ
ಇಲ್ಲಿ ಭಾನುವಾರ ನಡೆದ ಆಕ್ಲೆಂಡ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದವರೇ ಆದ ಜೆಸ್ಸಿಕಾ ಪೆಗುಲಾ ವಿರುದ್ಧ 6-3,6-4 ಸೆಟ್‌ಗಳಲ್ಲಿ ಜಯ ಗಳಿಸಿದರು. 2017ರ ಬಳಿಕ ಸೆರೆನಾ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಚಾಂಪಿಯನ್ ಆದ ಸೆರೆನಾಗೆ 30 ಲಕ್ಷ ರುಪಾಯಿ ಬಹುಮಾನ ದೊರೆಯಿತು.
ಬಹುಮಾನ ಮೊತ್ತವನ್ನು ಅವರು ಆಸ್ಪ್ರೇಲಿಯಾದ ಕಾಡ್ಗಿಚ್ಚು ಪರಿಹಾರ ನಿಧಿಗೆ ನೀಡಿ ಉದಾರತೆ ಮೆರೆದರು. ಮುಂದಿನ ವಾರ ಆರಂಭಗೊಳ್ಳಲಿರುವ ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂನಲ್ಲಿ ಸ್ಪರ್ಧಿಸಲಿರುವ ಸೆರೆನಾ, ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ.