ನೋವಾಕ್ ಜೋಕೋವಿಚ್ ನೇತೃತ್ವದ ಸರ್ಬಿಯಾ ತಂಡವು 2-1 ಅಂತರದಲ್ಲಿ ಸ್ಪೇನ್ ತಂಡವನ್ನು ಮಣಿಸಿದೆ. ಈ ಮೂಲಕ ಚೊಚ್ಚಲ ಎಟಿಪಿ ಕಪ್ ಜಯಿಸುವಲ್ಲಿ ಸರ್ಬಿಯಾ ತಂಡ ಯಶಸ್ವಿಯಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಸಿಡ್ನಿ(ಜ.13): ಉದ್ಘಾಟನಾ ಆವೃತ್ತಿಯ ಎಟಿಪಿ ಕಪ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ರಾಫೆಲ್‌ ನಡಾಲ್‌ ನೇತೃತ್ವದ ಸ್ಪೇನ್‌ ತಂಡವನ್ನು 2-1ರಿಂದ ಸೋಲಿಸಿದ ನೋವಾಕ್‌ ಜೋಕೋವಿಚ್‌ರ ಸರ್ಬಿಯಾ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಡೇವಿಸ್‌ ಕಪ್‌ ರೀತಿ ಹೊಸ ಟೆನಿಸ್‌ ಟೂರ್ನಿ

Scroll to load tweet…

ಫೈನಲ್‌ ಮುಖಾಮುಖಿಯ ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.10 ಸ್ಪೇನ್‌ನ ರೊಬೆರ್ಟೊ ಬಟಿಸ್ಟಾ, ದುಸಾನ್‌ ಲಜೊವಿಚ್‌ ವಿರುದ್ಧ 7-5, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 

Scroll to load tweet…

ಇನ್ನು 2ನೇ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.1 ಜೋಕೋವಿಚ್‌ ಹಾಗೂ ವಿಶ್ವ ನಂ.2 ನಡಾಲ್‌ ಎದುರಾದರು. ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯವನ್ನು ಜೋಕೋವಿಚ್‌ 6-2, 7-6(7/4) ಸೆಟ್‌ಗಳಲ್ಲಿ ಗೆದ್ದರು. ನಂತರ ಡಬಲ್ಸ್‌ ಪಂದ್ಯದಲ್ಲಿ ಜೋಕೋವಿಚ್‌ ಹಾಗೂ ವಿಕ್ಟರ್‌ ಟ್ರೊಯ್ಕಿ ಜೋಡಿ ಫೆಲಿಸಿಯಾನೋ ಲೊಪೆಜ್‌ ಹಾಗೂ ಪಾಬ್ಲೊ ಕರ್ರೆನೊ ವಿರುದ್ಧ 6-3, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ, ಟ್ರೋಫಿ ಎತ್ತಿಹಿಡಿಯಿತು.

Scroll to load tweet…