ಕೌಲಾಲಂಪುರ[ಜ.07]: ಭಾರತದ ಸ್ಟಾರ್‌ ಆಟಗಾರ್ತಿ ಪಿ.ವಿ.ಸಿಂಧು ಮಂಗಳವಾರ ಇಲ್ಲಿ ಆರಂಭಗೊಳ್ಳಲಿರುವ ಮಲೇಷ್ಯಾ ಮಾಸ್ಟ​ರ್ಸ್ ಸೂಪರ್‌ 500 ಟೂರ್ನಿಯಲ್ಲಿ ಗೆಲುವಿನೊಂದಿಗೆ 2020ರ ಮೊದಲ ಕದನದಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದ್ದಾರೆ. 

ಬಾಲಿವುಡ್ ಹಾಡಿನ ಮೂಲಕ ಸೈನಾಗೆ ಅಚ್ಚರಿ ನೀಡಿದ ಪಾರುಪಳ್ಳಿ ಕಶ್ಯಪ್!

2019ರಲ್ಲಿ ಏಳು-ಬೀಳು ಎರಡನ್ನೂ ಕಂಡಿರುವ ಸಿಂಧು ಅವರು ವಿಶ್ವ  ಶ್ರೇಯಾಂಕದಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಆದರೆ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿರುವುದು ಸಿಂಧು ಅವರಿಗೆ ವೃತ್ತಿ ಜೀವನದ ಮಹತ್ವದ ಮೈಲಿಗಲ್ಲಾಗಿದೆ. ಇನ್ನೇನು ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಏಳು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಸಿಂಧು ಅವರು ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಎವಗ್ನೇನಿಯಾ ಕೊಸೆಟ್ಸ್‌ಕಯಾ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧುಗೆ ವಿಶ್ವ ನಂ.1 ತೈ ತ್ಸು ಯಿಂಗ್‌ ಎದುರಾಗುವ ನಿರೀಕ್ಷೆ ಇದೆ.

ಅಭಿಮಾನಿಗಳಿಗೆ ಹೊಸ ವರ್ಷದ ಶುಭ ಕೋರಿದ ಕ್ರೀಡಾ ತಾರೆಯರು

ಸೈನಾ ನೆಹ್ವಾಲ್‌ಗೆ ಮೊದಲ ಪಂದ್ಯದಲ್ಲಿ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಆಟಗಾರ್ತಿ ಎದುರಾಗಲಿದ್ದಾರೆ. ಶ್ರೀಕಾಂತ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. 2ನೇ ಶ್ರೇಯಾಂಕಿತ, ಚೈನೀಸ್‌ ತೈಪೆಯ ಚೌ ಟಿಯನ್‌ ಚೆನ್‌ ವಿರುದ್ಧ ಸೆಣಸಲಿದ್ದಾರೆ. ಬಿ.ಸಾಯಿ ಪ್ರಣೀತ್‌ಗೆ ಡೆನ್ಮಾರ್ಕ್ನ ರಾಸ್ಮಸ್‌ ಗೆಮ್ಕೆ, ಪಾರುಪಳ್ಳಿ ಕಶ್ಯಪ್‌ಗೆ ಮೊದಲ ಸುತ್ತಿನಲ್ಲಿ ವಿಶ್ವ ನಂ.1 ಕೆಂಟೊ ಮೊಮೊಟಾ ಎದುರಾಗಲಿದ್ದಾರೆ. ಸಮೀತ್‌ ವರ್ಮಾ ಥಾಯ್ಲೆಂಡ್‌ ಎದುರಾಳಿಯನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌-ಅಶ್ವಿನಿ ಪೊನ್ನಪ್ಪ ಸ್ಪರ್ಧಿಸಲಿದ್ದಾರೆ.