ಹೈದರಾಬಾದ್(ಡಿ.29): ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ಮದುವೆಯಾಗಿ ಒಂದು ವರ್ಷ ಕಳೆದಿದೆ. ಡಿಸೆಂಬರ್ 17ಕ್ಕೆ ಮೊದಲ ವರ್ಷಾಚರಣೆ ಆಚರಿಸಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಕಶ್ಯಪ್ ಪತ್ನಿ ಸೈನಾಗೆ ಅಚ್ಚರಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಆರ್ಕೆಸ್ಟ್ರಾದಲ್ಲಿ ಕಶ್ಯಪ್ ಬಾಲಿವುಡ್ ಹಾಡು ಹೇಳಿ ರಂಚಿಸಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೈ ಹಿಡಿದ ಪರುಪಳ್ಳಿ ಕಶ್ಯಪ್!

ಬಾಲಿವುಡ್‌ನ ಡರ್ಟಿ ಪಿಕ್ಚರ್ ಚಿತ್ರದ ಇಷ್ಕ್ ಸೂಫಿಯಾನ ಹಾಡುನ್ನು ಅದ್ಭುತವಾಗಿ ಹಾಡಿದ್ದಾರೆ. ಇದು ಸೈನಾ ಜೊತೆಗೆ ನೆರದಿದ್ದವಿರಿಗೂ ಅಚ್ಚರಿ ನೀಡಿತ್ತು. ಪಾರುಪಳ್ಳಿ ಕಶ್ಯಪ್ ಬ್ಯಾಡ್ಮಿಂಟನ್ ಮಾತ್ರವಲ್ಲ, ಹಾಡಿಗೂ ಸೈ ಎಂದಿದ್ದಾರೆ.  ಕಶ್ಯಪ್ ವಿಡಿಯೋ ರೆಕಾರ್ಡ್ ಮಾಡಿದ ಸೈನಾ, ಸಾಮಾಜಿಕ ತಾಲಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕಶ್ಯಪ್ ವಿಡಿಯೋ ವೈರಲ್ ಆಗಿದೆ.

 

ಸೈನಾ ವೀಸಾ ಸಮಸ್ಯೆಗೆ ನೆರವಾದ ಗೃಹ ಸಚಿವಾಲಯ

ಅಭಿಮಾನಿಗಳು ಕಶ್ಯಪ್ ಹಾಡು ಮೆಚ್ಚಿದ್ದಾರೆ. ಇಷ್ಟೇ ಅಲ್ಲ ಬಾಲಿವುಡ್‌ನಲ್ಲಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಹಾಡಲು ಅರ್ಹ ಎಂದು ಕಮೆಂಟ್ ಮಾಡಿದ್ದಾರೆ.