ಅಭಿಮಾನಿಗಳಿಗೆ ಹೊಸ ವರ್ಷದ ಶುಭ ಕೋರಿದ ಕ್ರೀಡಾ ತಾರೆಯರು
ಹೊಸವರ್ಷಕ್ಕೆ ಕ್ರೀಡಾ ತಾರೆಯರು ಶುಭ ಕೋರಿದ್ದಾರೆ. ವಿರುಷ್ಕಾ ಜೋಡಿ ಸ್ವಿಟ್ಜರ್‌ಲ್ಯಾಂಡ್‌ನಿಂದಲೇ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ಯಾವೆಲ್ಲಾ ಕ್ರೀಡಾತಾರೆಯರು ಶುಭ ಹಾರೈಸಿದ್ದಾರೆ ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ...
"
ಬೆಂಗಳೂರು[ಜ.01]: ಭಾರತ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು 2020ರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿವೆ. ಜಗಮಗ ಬೆಳಕಿನ ನಡುವಿನ ಹೊಸ ವರ್ಷವನ್ನು ಸಾಮಾನ್ಯರಿಂದ ಸೆಲಿಬ್ರಿಟಿಗಳವರೆಗೆ ಎಲ್ಲರೂ ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ.
ಗೆಳತಿ ಜೊತೆ ಥಾಯ್ಲೆಂಡ್‌ನಲ್ಲಿ ಹೊಸ ವರ್ಷ ಆಚರಿಸಿದ ಕೆಎಲ್ ರಾಹುಲ್!
2020 ಕ್ರೀಡಾ ಪ್ರೇಮಿಗಳ ಪಾಲಿಗೆ ಹಬ್ಬವಾಗಿರಲಿದ್ದು, ಹಲವಾರು ಮಹತ್ವದ ಕ್ರೀಡಾಕೂಟಗಳಿಗೆ 2020 ಸಾಕ್ಷಿಯಾಗಲಿದೆ. ಹೌದು, ಏಪ್ರಿಲ್ ಆರಂಭದಿಂದಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯಲಿದೆ. ಇದಾದ ಬಳಿಕ ಜುಲೈ 24ರಿಂದ ಟೋಕಿಯೋ ಒಲಿಂಪಿಕ್ಸ್ ಆರಂಭವಾಗಲಿದೆ. ಇನ್ನು ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೀಗಾಗಿ ವರ್ಷಾವಿಡಿ ಕ್ರೀಡೆಯನ್ನು ಎಂಜಾಯ್ ಮಾಡಬಹುದಾಗಿದೆ.
ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ ವಿರುಷ್ಕಾ ಜೋಡಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ.