ಗುವಾಹಟಿ(ಜ.23): 3ನೇ ಆವೃತ್ತಿಯ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಬುಧವಾರ ವೈಭವದ ತೆರೆ ಬಿತ್ತು. ಸತತ 3ನೇ ವರ್ಷವೂ ಕರ್ನಾಟಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. ಅಂತಿಮ ದಿನ 7 ಚಿನ್ನ ಸೇರಿ ಒಟ್ಟು 13 ಪದಕಗಳು ರಾಜ್ಯದ ಖಾತೆಗೆ ಸೇರ್ಪಡೆಗೊಂಡವು. 32 ಚಿನ್ನ, 26 ಬೆಳ್ಳಿ, 22 ಕಂಚಿನ ಪದಕಗಳೊಂದಿಗೆ ಕರ್ನಾಟಕ ಒಟ್ಟು 80 ಪದಕಗಳನ್ನು ಗಳಿಸಿತು.

 

ಇದನ್ನೂ ಓದಿ: ಖೇಲೋ ಇಂಡಿಯಾ: ಕೂಟ ದಾಖಲೆ ಬರೆದ ಕನ್ನಡಿಗರು

ರಾಜ್ಯದ ಈಜುಪಟುಗಳು ಬುಧವಾರವೂ ಪ್ರಾಬಲ್ಯ ಮೆರೆದರು. ಅಂಡರ್‌-21 ಬಾಲಕರ 50 ಮೀ. ಬ್ಯಾಕ್‌ಸ್ಟ್ರೋಕ್ಸ್ ಹಾಗೂ 100 ಮೀ. ಫ್ರೀಸ್ಟೈಲ್‌ನಲ್ಲಿ ತಾರಾ ಈಜುಪಟು ಶ್ರೀಹರಿ ನಟರಾಜ್‌ ಚಿನ್ನದ ಪದಕ ಗೆದ್ದರು. ಈ ಕ್ರೀಡಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಅವರು 5 ಚಿನ್ನ, 3 ಬೆಳ್ಳಿ ಪದಕ ಗೆದ್ದರು. ಅಂಡರ್‌-17 ವಿಭಾಗದ ಬಾಲಕಿಯರ 1500 ಮೀ ಫ್ರೀಸ್ಟೈಲ್‌ನಲ್ಲಿ ಅಶ್ಮಿತಾ ಬೆಳ್ಳಿ ಗೆದ್ದರೆ, ಬಾಲಕರ 200 ಮೀ. ಬ್ರೆಸ್ಟ್‌ಸ್ಟೊ್ರೕಕ್‌ನಲ್ಲಿ ಕಲ್ಪ್‌ ಕಂಚಿನ ಪದಕ ಜಯಿಸಿದರು. ಬಾಲಕಿಯರ 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ರಿಧಿಮಾ ಚಿನ್ನ, ನೀನಾ ವೆಂಕಟೇಶ್‌ ಬೆಳ್ಳಿ ಜಯಿಸಿದರು. ಬಾಲಕರ 100 ಮೀ. ಫ್ರೀ ಸ್ಟೈಲ್‌ನಲ್ಲಿ ಸಂಭವ್‌ ಚಿನ್ನಕ್ಕೆ ಕೊರಳ್ಳೊಡಿದರು. ಕರ್ನಾಟಕ ಗೆದ್ದ 32 ಚಿನ್ನದ ಪದಕಗಳ ಪೈಕಿ 21 ಪದಕಗಳನ್ನು ಈಜುಪಟುಗಳೇ ಗೆದ್ದಿದ್ದು ವಿಶೇಷ.

 

ಇದನ್ನೂ ಓದಿ: ಖೇಲೋ ಇಂಡಿಯಾ: ರಾಜ್ಯಕ್ಕೆ ವಾಲಿಬಾಲ್‌ನಲ್ಲಿ ಕಂಚು

ವೇಟ್‌ಲಿಫ್ಟಿಂಗ್‌ನಲ್ಲಿ ರಾಜ್ಯಕ್ಕೆ ಮತ್ತೆರಡು ಪದಕಗಳು ದೊರೆತವು. ಅಂಡರ್‌-21 ಬಾಲಕಿಯರ 87 ಕೆ.ಜಿ ವಿಭಾಗದಲ್ಲಿ ಉಷಾ ಎಸ್‌.ಆರ್‌ ಚಿನ್ನ ಗೆದ್ದರೆ, ಬಾಲಕರ +109 ಕೆ.ಜಿ ವಿಭಾಗದಲ್ಲಿ ಕುಶಾಲ್‌ ಗೌಡ ಕಂಚಿಗೆ ತೃಪ್ತಿಪಟ್ಟರು. ಅಂಡರ್‌-21 ಬಾಲಕರ 64 ಕೆ.ಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ನಿಶಾಂತ್‌ ದೇವ್‌ ಚಿನ್ನಕ್ಕೆ ಮುತ್ತಿಟ್ಟರು. ಅಂಡರ್‌-17 ಬಾಲಕಿಯರ ಟೆನಿಸ್‌ ಸಿಂಗಲ್ಸ್‌ ವಿಭಾಗದಲ್ಲಿ ರೇಶ್ಮಾ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಇದನ್ನೂ ಓದಿ: ಖೇಲೋ ಇಂಡಿಯಾ: ಈಜಿನಲ್ಲಿ ರಾಜ್ಯದ ಪ್ರಾಬಲ್ಯ

78 ಚಿನ್ನದೊಂದಿಗೆ ಒಟ್ಟು 256 ಪದಕ ಗೆದ್ದ ಮಹಾರಾಷ್ಟ್ರ ಸತತ 2ನೇ ವರ್ಷ ಚಾಂಪಿಯನ್‌ ಪಟ್ಟಅಲಂಕರಿಸಿತು. 68 ಚಿನ್ನದೊಂದಿಗೆ ಒಟ್ಟು 200 ಪದಕ ಗೆದ್ದ ಹರಾರ‍ಯಣ, 39 ಚಿನ್ನದೊಂದಿಗೆ ಒಟ್ಟು 122 ಪದಕ ಗೆದ್ದ ದೆಹಲಿ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದವು.

2018ರಲ್ಲಿ ನಡೆದಿದ್ದ ಮೊದಲ ಆವೃತ್ತಿಯಲ್ಲಿ ಕರ್ನಾಟಕ 16 ಚಿನ್ನ ಸೇರಿ 44 ಪದಕ ಗೆದ್ದಿತ್ತು. 2019ರ ಆವೃತ್ತಿಯಲ್ಲಿ 30 ಚಿನ್ನ ಸೇರಿ ಒಟ್ಟು 77 ಪದಕಗಳು ಕರ್ನಾಟಕದ ಪಾಲಾಗಿದ್ದವು.