ಗುವಾಹಟಿ(ಜ.20): 3ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕ ಈಜು ಸ್ಪರ್ಧೆಯಲ್ಲಿ ಪ್ರಾಬಲ್ಯ ಮುಂದುವರೆಸಿದೆ. ಭಾನುವಾರ 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದೆ. ಈ ಮೂರು ಪದಕಗಳನ್ನು ಈಜುಪಟುಗಳೇ ರಾಜ್ಯದ ಖಾತೆಗೆ ಸೇರ್ಪಡೆಗೊಳಿಸಿದರು.

ಈಜಿನಲ್ಲಿ ರಾಜ್ಯಕ್ಕೆ 5 ಚಿನ್ನ; ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕರ್ನಾಟಕ!

ಅಂಡರ್‌ 17 ಬಾಲಕರ 400 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್‌ ಗೌಡ, 4 ನಿಮಿಷ 08.55 ಸೆ.ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಅಂಡರ್‌ 21 ಬಾಲಕರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಂಜಯ್‌ ಸಿ.ಜೆ., 57.52 ಸೆ.ಗಳಲ್ಲಿ ಗುರಿ ಮುಟ್ಟಿಕಂಚಿನ ಪದಕ ಗೆದ್ದರು. 

ಖೇಲೋ ಇಂಡಿಯಾ : ಸೈಕ್ಲಿಂಗ್‌ನಲ್ಲಿ 1 ಚಿನ್ನ ಗೆದ್ದ ಕರ್ನಾಟಕ

ಬಾಲಕರ 4/100 ಮೀ. ಮೆಡ್ಲೆಯಲ್ಲಿ ಶ್ರೀಹರಿ ನಟರಾಜ್‌, ಪೃಥ್ವಿ, ಸೈಫ್‌ ಚಂದನ್‌ ಹಾಗೂ ಸಂಜಯ್‌ ಸಿ.ಜೆ. ಅವರನ್ನೊಳಗೊಂಡ ಕರ್ನಾಟಕ ತಂಡ 3 ನಿಮಿಷ 57.07 ಸೆ.ಗಳಲ್ಲಿ ಗುರಿ ಮುಟ್ಟಿಬೆಳ್ಳಿ ಪದಕ ಜಯಿಸಿತು. ಈಜು ಸ್ಪರ್ಧೆಯಲ್ಲಿ 11 ಚಿನ್ನ, 7 ಬೆಳ್ಳಿ, 2 ಕಂಚಿನೊಂದಿಗೆ 20 ಪದಕ ಗೆದ್ದಿರುವ ಕರ್ನಾಟಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 10ನೇ ದಿನದ ಮುಕ್ತಾಯಕ್ಕೆ ಕರ್ನಾಟಕ ಒಟ್ಟು 16 ಚಿನ್ನ, 16 ಬೆಳ್ಳಿ ಹಾಗೂ 13 ಕಂಚಿನೊಂದಿಗೆ 45 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಉಳಿದಿದೆ.