Asianet Suvarna News Asianet Suvarna News

ಖೇಲೋ ಇಂಡಿಯಾ: ರಾಜ್ಯಕ್ಕೆ ವಾಲಿಬಾಲ್‌ನಲ್ಲಿ ಕಂಚು

ಖೇಲೋ ಇಂಡಿಯಾ ಯೂತ್ ಕ್ರೀಡಾಕೂಟದ ಆರನೇ ದಿನ ಕರ್ನಾಟಕ ತಂಡವು 4 ಕಂಚಿನ ಪದಕ ಬಾಚಿಕೊಂಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

Khelo India Karnataka won 4 Bronze medals on day 6
Author
Guwahati, First Published Jan 16, 2020, 12:33 PM IST
  • Facebook
  • Twitter
  • Whatsapp

ಗುವಾಹಟಿ(ಜ.16): 3ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕ ನಿಧಾನವಾಗಿ ಪದಕ ಪಟ್ಟಿಯಲ್ಲಿ ಮೇಲೇಳುತ್ತಿದೆ. ಬುಧವಾರ ರಾಜ್ಯಕ್ಕೆ ಒಟ್ಟು 4 ಕಂಚಿನ ಪದಕ ದೊರೆಯಿತು.

ಅಂಡರ್‌-17 ಬಾಲಕಿಯರ ವಾಲಿಬಾಲ್‌ನಲ್ಲಿ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಕೇರಳ ವಿರುದ್ಧ ಜಯ ಸಾಧಿಸಿತು. ಆಕರ್ಷಕ ಪ್ರದರ್ಶನ ತೋರಿದ ರಾಜ್ಯ ತಂಡ 3-0 (25-19, 25-21, 25-23) ಸೆಟ್‌ಗಳಲ್ಲಿ ಗೆಲುವು ಪಡೆದು ಕಂಚಿನ ಪದಕಕ್ಕೆ ಮುತ್ತಿಟ್ಟಿತು.

ಖೇಲೋ ಇಂಡಿಯಾ: ಕೂಟ ದಾಖಲೆ ಬರೆದ ಕನ್ನಡಿಗರು

ಅಂಡರ್‌-17 ಬಾಲಕಿಯರ 2000 ಮೀ. ಸೈಕ್ಲಿಂಗ್‌ ವೈಯಕ್ತಿಕ ಪಸ್ರ್ಯೂಟ್‌ ವಿಭಾಗದಲ್ಲಿ ಅಂಕಿತಾ ರಾಥೋಡ್‌ 2 ನಿಮಿಷ 54.859 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿದರು. ಅಂಡರ್‌-21 ಪುರುಷರ 4000 ಮೀ. ಸೈಕ್ಲಿಂಗ್‌ ವೈಯಕ್ತಿಕ ಪಸ್ರ್ಯೂಟ್‌ ವಿಭಾಗದಲ್ಲಿ ವೆಂಕಪ್ಪ ಕೆಂಗಲಗುತ್ತಿ 4 ನಿಮಿಷ 58.412 ಸೆಕೆಂಡ್‌ಗಳಲ್ಲಿ ರೇಸ್‌ ಪೂರ್ಣಗೊಳಿಸಿ 3ನೇ ಸ್ಥಾನ ಪಡೆದರು. ಈ ಕ್ರೀಡಾಕೂಟದಲ್ಲಿ ವೆಂಕಪ್ಪ ಗೆದ್ದ 3ನೇ ಪದಕವಿದು.

ಅಂಡರ್‌-21 ಮಹಿಳೆಯರ 3000 ಮೀ. ವೈಯಕ್ತಿಕ ಪಸ್ರ್ಯೂಟ್‌ ವಿಭಾಗದಲ್ಲಿ ಕೀರ್ತಿ ರಂಗಸ್ವಾಮಿ 4 ನಿಮಿಷ 26.849 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. ಕರ್ನಾಟಕ 6ನೇ ದಿನದ ಮುಕ್ತಾಯಕ್ಕೆ 5 ಚಿನ್ನ, 8 ಬೆಳ್ಳಿ, 9 ಕಂಚಿನೊಂದಿಗೆ ಒಟ್ಟು 22 ಪದಕಗಳನ್ನು ಗೆದ್ದಿದ್ದು, ಪದಕ ಪಟ್ಟಿಯಲ್ಲಿ 15ನೇ ಸ್ಥಾನ ಪಡೆದಿದೆ.

 

Follow Us:
Download App:
  • android
  • ios