ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್’ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಕ್ವಾರ್ಟರ್ ಫೈನಲ್’ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಪ್ಯಾರಿಸ್‌[ಅ.25]: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್‌, ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಫ್ರೆಂಚ್‌ ಓಪನ್‌: ದ್ವಿತೀಯ ಸುತ್ತಿಗೇರಿದ ಸೈನಾ

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಸೈನಾ, ಡೆನ್ಮಾರ್ಕ್’ನ ಹೊಜ್ಮಾರ್ಕ್ ಕ್ಜೇಸ್‌ಫೆಲ್ಟ್‌ ವಿರುದ್ಧ 21-10, 21-11 ಗೇಮ್‌ಗಳಲ್ಲಿ ಜಯಿ​ಸಿ​ದರು. ಕ್ವಾರ್ಟರ್‌ನಲ್ಲಿ ಸೈನಾ, ಕೊರಿಯಾದ ಅನ್‌ ಸೆ ಯಂಗ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ಚಾಂಪಿ​ಯನ್‌ ಸಿಂಧು, ಸಿಂಗಾಪುರದ ಜಿಯಾ ಮಿನ್‌ ಯಿಯೊ ಎದುರು 21-10, 21-13 ಗೇಮ್‌ಗಳಲ್ಲಿ ಗೆದ್ದು ಅಂತಿಮ 8ರ ಘಟ್ಟ​ಕ್ಕೇ​ರಿ​ದರು.

ವಿಜಯ್ ಹಜಾರೆ ಟ್ರೋಫಿ ಫೈನಲ್: ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ

ಚಿರಾಗ್‌-ಸಾತ್ವಿಕ್‌ಗೆ ಜಯ: ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ, ವಿಶ್ವ ಚಾಂಪಿ​ಯನ್‌ ಜೋಡಿ​ಯಾದ ಇಂಡೋನೇಷ್ಯಾದ ಅಹಸಾನ್‌ ಮತ್ತು ಸೆಟಿವಾನ್‌ ವಿರುದ್ಧ 21-18, 18-21, 21-13 ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಅಚ್ಚರಿ ಮೂಡಿ​ಸಿದರು. ಭಾರ​ತೀ​ಯ ಜೋಡಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ತು.

Scroll to load tweet…