ವಿಜಯ್ ಹಜಾರೆ ಟ್ರೋಫಿ ಫೈನಲ್: ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ
ಕರ್ನಾಟಕ-ತಮಿಳುನಾಡು ನಡುವಿನ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿದೆ. ತಮಿಳುನಾಡು ತಂಡ ಆರಂಭಿಕ ಆಘಾತ ಅನುಭವಿಸಿದೆ.
ಬೆಂಗಳೂರು[ಅ.25]: 2019ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ-ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿದೆ. ಇನ್ನು ಮೊದಲ ಓವರ್’ನಲ್ಲೇ ಬರ್ತ್ ಡೇ ಹೀರೋ ಅಭಿಮನ್ಯು ಮಿಥುನ್, ಮುರಳಿ ವಿಜಯ್ ಅವರನ್ನು ಪೆವಿಲಿಯನ್’ಗೆ ಅಟ್ಟಿದ್ದಾರೆ. ಇದೀಗ 8 ಓವರ್ ಮುಕ್ತಾಯದ ವೇಳೆಗೆ ತಮಿಳುನಾಡು ತಂಡ 2 ವಿಕೆಟ್ ಕಳೆದುಕೊಂಡು 24 ರನ್ ಬಾರಿಸಿದೆ. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಮಿಂಚಿದ್ದ ಕೌಶಿಕ್, ಟೀಂ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ಕರ್ನಾಟಕ, 5 ಬಾರಿ ಪ್ರಶಸ್ತಿ ಗೆದ್ದು ಟೂರ್ನಿಯ ಅತ್ಯಂತ ಯಶ್ವಸಿ ತಂಡ ಎನಿಸಿಕೊಂಡಿರುವ ತಮಿಳುನಾಡು ನಡುವಿನ ಕಾದಾಟಕ್ಕೆ ಆತಿಥ್ಯ ವಹಿಸಿದೆ. ಈ ಋುತುವಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಉಭಯ ತಂಡಗಳ ನಡುವಿನ ಪ್ರಶಸ್ತಿ ಸುತ್ತಿನ ಹೋರಾಟ ಭಾರೀ ಕುತೂಹಲ ಹುಟ್ಟಿಸಿದೆ.
ವಿಜಯ್ ಹಜಾರೆ ಟೂರ್ನಿ 2019: ಫೈನಲ್’ಗೆ ಲಗ್ಗೆಯಿಟ್ಟ ಕರ್ನಾಟಕ
ತಾರೆಗಳ ಮುಖಾಮುಖಿ: ಈ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ ಅನುಭವವಿರುವ ಹಲವು ಆಟಗಾರರು ಕಣಕ್ಕಿಳಿದಿರುವುದು ವಿಶೇಷ. ಕರ್ನಾಟಕ ತಂಡದಲ್ಲಿ ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್ ಇದ್ದರೆ, ತಮಿಳುನಾಡು ತಂಡವನ್ನು ದಿನೇಶ್ ಕಾರ್ತಿಕ್, ಆರ್.ಅಶ್ವಿನ್, ಮುರಳಿ ವಿಜಯ್, ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್ ಇದ್ದಾರೆ.
ಕರ್ನಾಟಕ ತನ್ನ ಅಗ್ರ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ. ರಾಹುಲ್, ಮಯಾಂಕ್ ಜತೆ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅದ್ಭುತ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲೂ ಕರ್ನಾಟಕ ಹಲವು ಆಯ್ಕೆಗಳನ್ನು ಹೊಂದಿದೆ.
ಅನಿಲ್ ಕುಂಬ್ಳೆ ಕೆಳಗಿಳಿಸಿದ್ದು ಕೊಹ್ಲಿ; ಸೀಕ್ರೆಟ್ ಬಿಚ್ಚಿಟ್ಟ ಬಿಸಿಸಿಐ ನಿರ್ಗಮಿತ COA!
ತಮಿಳುನಾಡು ತಂಡದ ಸಹ ತನ್ನ ಬ್ಯಾಟಿಂಗ್ ವಿಭಾಗದ ಮೇಲೆ ಅವಲಂಬಿತಗೊಂಡಿದ್ದರೂ ಟಿ.ನಟರಾಜನ್, ಎಂ.ಮೊಹಮದ್, ಕೆ.ವಿಗ್ನೇಶ್ರಂತಹ ಪ್ರತಿಭಾನ್ವಿತ ಬೌಲರ್ಗಳಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರವೂ ಪ್ರಮುಖವೆನಿಸಲಿದ್ದು, ಎರಡೂ ತಂಡಗಳಲ್ಲಿ ಉತ್ತಮ ಸ್ಪಿನ್ನರ್ಗಳಿದ್ದಾರೆ. ಪಂದ್ಯ ಭಾರೀ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಇದ್ದು, ಕರ್ನಾಟಕ ತಂಡ 4ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ವಿಶ್ವಾಸದಲ್ಲಿದೆ.
ಉಚಿತ ಪ್ರವೇಶ
ಕರ್ನಾಟಕ-ತಮಿಳುನಾಡು ನಡುವಿನ ಫೈನಲ್ ಪಂದ್ಯದ ವೀಕ್ಷಣೆಗೆ ಕೆಎಸ್‌ಸಿಎ ಉಚಿತ ಪ್ರವೇಶ ಕಲ್ಪಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿ3 ಸ್ಟ್ಯಾಂಡ್‌ಗೆ ಪ್ರವೇಶವಿದ್ದು, ಗೇಟ್ ನಂ.15ರಿಂದ ಕ್ರೀಡಾಂಗಣ ಪ್ರವೇಶಿಸಬಹುದಾಗಿದೆ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2