ರೋಹನ್ ಬೋಪಣ್ಣ ಪತ್ನಿಯನ್ನು "ಅತ್ಯಂತ ಸುಂದರ ಮಹಿಳೆ" ಎಂದ ಅಭಿಮಾನಿ: ಟೆನ್ನಿಸ್ ಆಟಗಾರನ ಪ್ರತಿಕ್ರಿಯೆ ಹೀಗಿದೆ..!
ವೈರಲ್ ಆದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಭಾರತದ ಖ್ಯಾತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ, "ನಾನು ಒಪ್ಪಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ಶುಕ್ರವಾರ ನಡೆದ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಟೆನಿಸ್ ತಾರೆಗಳಾದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಸೋಲು ಕಂಡರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಬೋಪಣ್ಣ ಮತ್ತು ಸಾನಿಯಾ ಜೋಡಿ ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್ ವಿರುದ್ಧ ನೇರ ಸೆಟ್‌ಗಳಲ್ಲಿ (6-7, 2-6) ಸೋತಿದ್ದಾರೆ. ಈ ಪಂದ್ಯ ಭಾರತದ ಮೂಗುತಿ ಸುಂದರಿ ಎಂದೇ ಖ್ಯಾತಿ ಪಡೆದಿರುವ ಸಾನಿಯಾ ಮಿರ್ಜಾ ಅವರ ವೃತ್ತಿ ಜೀವನದ ಕೊನೆಯ ಗ್ರ್ಯಾನ್‌ಸ್ಲಾಮ್ ಪಂದ್ಯ ಎಂದು ಹೇಳಲಾಗಿದೆ. ಗ್ರ್ಯಾನ್‌ಸ್ಲಾಮ್‌ನಲ್ಲಿ ಕೊನೆಯ ಪಂದ್ಯ ಹಿನ್ನೆಲೆ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಸನಿಯಾ ಮಿರ್ಜಾ ಪುತ್ರ ಇಜಾನ್ ಸೇರಿದಂತೆ ಸಾನಿಯಾ ಅವರ ಕುಟುಂಬ ಉಪಸ್ಥಿತರಿದ್ದರು. ಅಷ್ಟೇ ಅಲ್ಲದೆ, ರೋಹನ್ ಬೋಪಣ್ಣ ಅವರ ಪತ್ನಿ ಮತ್ತು ಮಕ್ಕಳು ಸಹ ಈ ಪಂದ್ಯದಲ್ಲಿ ಹಾಜರಾಗಿದ್ದು, ಭಾರತೀಯ ಮಿಶ್ರ ಡಬಲ್ಸ್ ಜೋಡಿಯನ್ನು ಹುರಿದುಂಬಿಸುತ್ತಿದ್ದರು.
ಆದರೆ, ಈ ಪಂದ್ಯ ಸಾನಿಯಾ ಮಿರ್ಜಾ (Sania Mirza) ಅವರ ಕೊನೆಯ ಪ್ರಮುಖ ಪಂದ್ಯ ಎಂದಲ್ಲದೆ, ಮತ್ತೊಂದು ಕಾರಣಕ್ಕೂ ವಿಶೇಷವಾಗಿದೆ. ಏಕೆಂದರೆ, ಪಂದ್ಯದ ನಂತರ, ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ರೋಹನ್ ಬೋಪಣ್ಣ (Rohan Bopanna) ಅವರ ಪತ್ನಿಯನ್ನು "ಅತ್ಯಂತ ಸುಂದರ ಮಹಿಳೆ" ಎಂದು ಕರೆದು ಅವರ ಫೋಟೋವನ್ನೂ ಹಾಕಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ (Tweet) ವೈರಲ್ (Viral) ಆಗಿದೆ. ಅದೂ, ಎಷ್ಟರ ಮಟ್ಟಿಗೆ ಅಂದರೆ, ಇದಕ್ಕೆ ಸ್ವತ: ರೋಹನ್ ಬೋಪಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Leander Paesಗೂ ಮೊದಲು ಈ ಕ್ರಿಕೆಟರ್ ಜೊತೆ ಡೇಟಿಂಗ್‌ನಲ್ಲಿದ್ದ Kim Sharma
ಹೌದು, ವೈರಲ್ ಆದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಭಾರತದ ಖ್ಯಾತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ, "ನಾನು ಒಪ್ಪಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ರೋಬ್ಸ್‌ಪಿಯರ್ರ್ (Robespierre) @brookeabeyer ಎಂಬ ಟ್ವಿಟ್ಟರ್ ಅಕೌಂಟ್ ಹೊಂದಿರುವ ಬಳಕೆದಾರರೊಬ್ಬರು ಈ ಟ್ವೀಟ್ ಮಾಡಿದ್ದು, ಇದು ವೈರಲ್ ಆಗಿದೆ. ಇನ್ನು, ಈ ಟ್ವೀಟ್‌ಗೆ ಸ್ವತ: ಮಹಿಳೆಯ ಪತಿ ರೋಹನ್ ಬೋಪಣ್ಣ ಪ್ರತಿಕ್ರಿಯೆ ನೀಡಿರುವುದು ಆ ಬಳಕೆದಾರರಿಗೆ ಅಚ್ಚರಿ ಮೂಡಿಸಿದೆ.
ಇನ್ನು, ನಾನು ಒಪ್ಪಿಕೊಳ್ಳುತ್ತೇನೆ ಎಂಬ ರೋಹನ್ ಬೋಪಣ್ಣ ಅವರ ಪ್ರತಿಕ್ರಿಯೆಯ ಟ್ವೀಟ್‌ಗೆ ಅಚ್ಚರಿ ವ್ಯಕ್ತಪಡಿಸಿದ ಬಳಕೆದಾರರು, ಓ ಮೈ ಗೋಶ್, ನಾವು ಅವರನ್ನು ಪ್ರೀತಿಸುತ್ತೇವೆ ಎಂದು ಹೇಳಿ ಎಂದು ಆ ಟ್ವಿಟ್ಟರ್ ಬಳಕೆದಾರರು ಅಚ್ಚರಿಯ ರಿಪ್ಲೈಗೆ ತಿಳಿಸಿದ್ದಾರೆ. ಒಟ್ಟಾರೆ, ರೋಹನ್ ಬೋಪಣ್ಣ ಅವರ ಪತ್ನಿಯ ಫೋಟೋ ಹೊಂದಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: Saina Nehwal Tweetಗೆ ನಟ ಸಿದ್ಧಾರ್ಥ್ ಅವಹೇಳನಕಾರಿ ಕಾಮೆಂಟ್: ಟೆನ್ನಿಸ್ ತಾರೆ ಬೆಂಬಲಕ್ಕೆ ನಿಂತ ರೈನಾ, ಸದ್ಗುರು!
ಸಾನಿಯಾ ಮಿರ್ಜಾ ಕಣ್ಣೀರು..!
ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನದೊಂದಿಗೆ ಸಾನಿಯಾ ತಮ್ಮ ಅದ್ಭುತ ಗ್ರ್ಯಾನ್ ಸ್ಲಾಮ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ನಾನು ಅಳುತ್ತಿದ್ದರೆ, ಇದು ಸಂತೋಷದ ಕಣ್ಣೀರು. ಅದು ಕೇವಲ ಹಕ್ಕು ನಿರಾಕರಣೆ. ನಾನು ಇನ್ನೂ ಒಂದೆರಡು ಪಂದ್ಯಾವಳಿಗಳನ್ನು ಆಡಲಿದ್ದೇನೆ. ಆದರೆ ನನ್ನ ವೃತ್ತಿಪರ ವೃತ್ತಿಜೀವನದ ನನ್ನ ಪ್ರಯಾಣವು ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಯಿತು ಎಂದು ಭಾವುಕರಾದ ಸಾನಿಯಾ ಮಿರ್ಜಾ ಕಣ್ಣೀರನ್ನು ತಡೆದುಕೊಳ್ಳಲು ಹೆಣಗಾಡಿದರು.
ನಾನು 14 ವರ್ಷದವನಾಗಿದ್ದಾಗ ರೋಹನ್ ಬೋಪಣ್ಣ ನನ್ನ ಮೊದಲ ಮಿಶ್ರ ಡಬಲ್ಸ್ ಪಾಲುದಾರನಾಗಿದ್ದರು ಮತ್ತು ನಾವು ರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದೇವೆ, ಇದು 22 ವರ್ಷಗಳ ಹಿಂದೆ ಮತ್ತು ನಾನು ಉತ್ತಮ ವ್ಯಕ್ತಿಯ ಬಗ್ಗೆ ಯೋಚಿಸಲು ಸಾಧ್ಯವಾಗಲಿಲ್ಲ, ಅವರು ನನ್ನ ಅತ್ಯುತ್ತಮ ಸ್ನೇಹಿತ ಮತ್ತು ನನ್ನ ವೃತ್ತಿಜೀವನವನ್ನು ಮುಗಿಸಲು ನನ್ನ ಅತ್ಯುತ್ತಮ ಪಾಲುದಾರರಲ್ಲಿ ಒಬ್ಬರು. ," ಎಂದು ಸಾನಿಯಾ ಮಿರ್ಜಾ ಹೇಳಿದ್ದು, ರೋಹನ್ ಬೋಪಣ್ಣ ಅವರಿಗೆ ಧನ್ಯವಾದ ತಿಳಿಸಿದರು. ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಡಬ್ಲ್ಯುಟಿಎ ಈವೆಂಟ್ ತನ್ನ ಕೊನೆಯ ಪಂದ್ಯಾವಳಿ ಎಂದು 36 ವರ್ಷ ವಯಸ್ಸಿನ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಈಗಾಗಲೇ ಘೋಷಿಸಿದ್ದಾರೆ.
ಇದನ್ನೂ ಓದಿ: ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ನಟಿ ಟಿಎಂಸಿ ಸೇರ್ಪಡೆ