Saina Nehwal Tweetಗೆ ನಟ ಸಿದ್ಧಾರ್ಥ್ ಅವಹೇಳನಕಾರಿ ಕಾಮೆಂಟ್: ಟೆನ್ನಿಸ್ ತಾರೆ ಬೆಂಬಲಕ್ಕೆ ನಿಂತ ರೈನಾ, ಸದ್ಗುರು!
*ಪ್ರಧಾನಿ ಭದ್ರತಾ ಲೋಪದ ಬಗ್ಗೆ ಸೈನಾ ನೆಹ್ವಾಲ್ ಟ್ವೀಟ್
*ಟ್ವೀಟ್‌ಗೆ ಅವಹೇಳನಕಾರಿ ಶಬ್ದ ಬಳಸಿ ನಟ ಸಿದ್ಧಾರ್ಥ್ ಟ್ವೀಟ್
*ಟೆನಿಸ್ ತಾರೆ ಬೆಂಬಲಕ್ಕೆ ನಿಂತ ಸುರೇಶ್ ರೈನಾ, ಸದ್ಗುರು!
ನವದೆಹಲಿ (ಜ. 10): ದೇಶದಲ್ಲಿ ಭಾರಿ ಸದ್ದು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ(PM Modi Security lapse) ಪ್ರಕರಣದ ಕುರಿತು ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಭಾರತದ ತಾರಾ ಟೆನಿಸ್ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal) ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಪ್ರಧಾನಿ ಭದ್ರತೆಯಲ್ಲಾದ ಲೋಪದ ಬಗ್ಗೆ ಖಂಡಿಸಿದ್ದರು. ಆದರೆ ಸೈನಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ನಟ ಸಿದ್ಧಾರ್ಥ್ ಆಕೆಯ ವಿರುದ್ಧ ಅಸಹ್ಯಕರ ಪದವನ್ನು ಬಳಸಿದ್ದಾರೆ. ಹೀಗಾಗಿ ನೆಟ್ಟಿಗರು ನಟ ಸಿದ್ಧಾರ್ಥ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ ಕ್ರಿಕೆಟಿಗ ಸುರೇಶ್ ರೈನಾ ಸೈನಾ, ಸದ್ಗುರು ನೆಹ್ವಾಲ್‌ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
"ಯಾವುದೇ ರಾಷ್ಟ್ರವು ತನ್ನ ಸ್ವಂತ ಪ್ರಧಾನಿಯ ಭದ್ರತೆಗೆ ರಾಜಿ ಮಾಡಿಕೊಂಡರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಪ್ರಬಲವಾದ ಪದಗಳಲ್ಲಿ ಇದನ್ನು ಖಂಡಿಸುತ್ತೇನೆ, ಅರಾಜಕತಾವಾದಿಗಳ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ. #BharatStandsWithModi #PMModi" ಎಂದು ಜನವರಿ 5 ರಂದು ನೆಹ್ವಾಲ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸಿದ್ಧಾರ್ಥ್ ಕಟುವಾದ ಪದವನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ.
"Subtle cock (ಲೈಂಗಿಕವಾಗಿ ಅಸಹ್ಯಕರ ಪದ) champion ( of the world... Thank God we have protectors of India. Shame on you #Rihanna," ಎಂದು ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ. ಆದರೆ ನೆಟ್ಟಿಗರು ಅವರನ್ನು ತರಾಟೆಗೆ ತೆಗುದುಕೊಳ್ಳತ್ತಿದ್ದಂತೆಯೇ ಹೊಸ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು ಅವರ ಟ್ವೀಟ್ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. " COCK & BULL" (ನಾಣ್ಣುಡಿ) That's the reference. Reading otherwise is unfair and leading! Nothing disrespectful was intended, said or insinuated. Period.," ಎಂದು ಅವರು ಹೇಳಿದ್ದಾರೆ.
ಪುರುಷನ ಮರ್ಮಾಂಗವನ್ನು ಗ್ರಾಮ್ಯವಾಗಿ ‘ಕಾಕ್ (Cock)’ ಎಂದು ಕರೆಯಲಾಗುತ್ತದೆ. ಆದರೆ COCK & BULL ಎಂಬುದು ಆಂಗ್ಲ ನಾಣ್ಣುಡಿಯಾಗಿದ್ದು COCK & BULL ಎಂದರೆ ನಂಬಲರ್ಹವಲ್ಲದ ಕಥೆ ಅಥವಾ ಕಟ್ಟು ಕಥೆ ಎಂದರ್ಥ. ಹೀಗಾಗಿ ನಟ್ ಸಿದ್ಧಾರ್ಥ್ ಎರಡನೇ ಟ್ವೀಟ್ COCK & BULL ಗೆ ಸಂಬಂಧಿಸಿ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. "ಸೈನ್ ನೆಹ್ವಾಲ್‌ರನ್ನು ಅವಮಾನ ಮಾಡುವ ಉದ್ದೇಶ ನನ್ನದಾಗಿರಲಿಲ್ಲ" ಎಂದು ಸಿದ್ಧಾರ್ಥ ಹೇಳಿದ್ದಾರೆ.
ನೆಹ್ವಾಲ್ ಬೆಂಬಲಕ್ಕೆ ನಿಂತ ರೈನಾ, ಸದ್ಗುರು
ಈ ಬೆನ್ನಲ್ಲೇ ರೈನಾ (Suresh Raina) ಕೂಡ ನೆಹ್ವಾಲ್ ಅನ್ನು ಬೆಂಬಲಿಸಿದ್ದು "ಕ್ರೀಡಾಪಟುಗಳು ತಮ್ಮ ದೇಶಕ್ಕಾಗಿ ತಮ್ಮ ಬೆವರು ಮತ್ತು ರಕ್ತವನ್ನು ನೀಡುತ್ತಾರೆ. ನಮ್ಮ ಹೆಮ್ಮೆ ಮತ್ತು ಕ್ರೀಡಾ ಐಕಾನ್ @NSaina ವಿರುದ್ಧ ಇಂತಹ ಸಡಿಲವಾದ ಭಾಷೆಯನ್ನು ಬಳಸುತ್ತಿರುವುದು ದುಃಖಕರವಾಗಿದೆ. ಭಾರತೀಯ ಕ್ರೀಡಾಪಟುವಾಗಿ ಮತ್ತು ಮಾನವನಾಗಿ, ನಾನು ಸೈನಾ ಅವರೊಂದಿಗೆ ನಿಲ್ಲುತ್ತೇನೆ ಮತ್ತು ಅಸಹ್ಯಕರ ಭಾಷೆಯನ್ನು ಖಂಡಿಸುತ್ತೇನೆ." ಎಂದು ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, ಸೈನಾ ಅವರ ಪತಿ, ಪರುಪಳ್ಳಿ ಕಶ್ಯಪ್ (Parupalli Kashyap), ತಮ್ಮ ಪತ್ನಿಗೆ ಬೆಂಬಲ ಸೂಚಿಸಿದ್ದು "ಇದು ನಮಗೆ ಅಸಮಾಧಾನ ತಂದಿದೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಆದರೆ ಉತ್ತಮ ಪದಗಳನ್ನು ಆರಿಸಿ . ಹೀಗೆ ಹೇಳುವುದು ನಿಮಗೆ ಕೂಲ್ ಅನ್ನಿಸಿರಬಹುದು ಎಂದು ನನಗೆ ಅನಿಸುತ್ತದೆ ಆದರೆ ಈ ರೀತಿ ವರ್ತನೆ #ನಾಟ್ಕೂಲ್ #ಅವಮಾನಕರ" ಎಂದು ಹೇಳಿದ್ದಾರೆ.ಇನ್ನೂ ಈ ಬಗ್ಗೆ ಟ್ವೀಟ್ ಮಾಡಿರುವ ಸದ್ಗುರು (Sadgguru) " #ಸೈನಾ ನೆಹ್ವಾಲ್ ದೇಶದ ಹೆಮ್ಮೆ. ಈ ಟ್ವೀಟ್ ಅತ್ಯಂತ ಅಸಹ್ಯಕರ, ನಾವು ಸಾರ್ವಜನಿಕ ವೇದಿಕೆಗಳನ್ನು ಎಲ್ಲಗೆ ತೆಗೆದುಕೊಂಡು ಹೋಗುತ್ತಿದ್ದೇವೆ" ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಕೂಡ ಪ್ರಧಾನಿ ಭದ್ರತಾ ವೈಫಲ್ಯವನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಿದ್ದು ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ತ್ರಿಸದಸ್ಯರ(3 member Committee) ಸಮಿತಿ ರಚಿಸಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪಂಜಾಬ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ರೈತರ ತಂಡವೊಂದು ಫ್ಲೈಓವರ್‌ವೊಂದರ ಮೇಲೆ ತಡೆಗಟ್ಟಿದ ಆತಂಕಕಾರಿ ಘಟನೆ ಬುಧವಾರ ನಡೆದಿದೆ.ಇದು ಪ್ರಧಾನಿಯಂತಹ ಅತಿಗಣ್ಯರ ವಿಷಯದಲ್ಲಿ ಕಂಡು ಕೇಳರಿಯದ ಭದ್ರತಾ ಲೋಪ ( Security Lapse) ಎನ್ನಿಸಿಕೊಂಡಿದೆ