Asianet Suvarna News Asianet Suvarna News

ಟೆನ್ನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಹಾಗೂ ನಟಿ ಟಿಎಂಸಿ ಸೇರ್ಪಡೆ

  •  ಹಿರಿಯ ಟೆನ್ನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಹಾಗೂ ನಟಿ ನಫೀಸಾ ಅಲಿ ಟಿಎಂಸಿ ಸೆರ್ಪಡೆ
  • ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉಪಸ್ಥಿತಿಯಲ್ಲಿ ಪಕ್ಷಕ್ಕೆ
Tennis Star Leander Paes Actor Nafisa Ali Joins TMC snr
Author
Bengaluru, First Published Oct 30, 2021, 7:13 AM IST
  • Facebook
  • Twitter
  • Whatsapp

ಪಣಜಿ(ಅ.30):  ಹಿರಿಯ ಟೆನ್ನಿಸ್‌ ಆಟಗಾರ (Tennis Star ) ಲಿಯಾಂಡರ್‌ ಪೇಸ್‌ (Tennis Star Leander Paes) ಹಾಗೂ ನಟಿ ನಫೀಸಾ ಅಲಿ (Nafisa Ali) ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಅವರ ಉಪಸ್ಥಿತಿಯಲ್ಲಿ ಶುಕ್ರವಾರ ತೃಣಮೂಲ ಕಾಂಗ್ರೆಸ್‌ (TMC) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ, ಪೇಸ್‌ ಒಲಿಂಪಿಕ್ಸ್‌ನಲ್ಲಿ (Olympic) ಕಂಚಿನ ಪದಕವನ್ನು ಗೆದ್ದಿದ್ದನ್ನು ಸ್ಮರಿಸಿಕೊಂಡರು. ‘ನಾನು ಪೇಸ್‌ನ್ನು ಮೊದಲ ಬಾರಿ ಭೇಟಿಯಾದ ಸಂದರ್ಭದಲ್ಲಿ ಕ್ರೀಡಾ ಮಂತ್ರಿಯಾಗಿದ್ದೆ (Sports Minister), ನಾನು ಟಿಎಂಸಿಯಲ್ಲಿ (TMC) ನನ್ನ ಕಿರಿಯ ಸಹೋದರನನ್ನು ಸ್ವಾಗತಿಸುತ್ತೇನೆ’ ಎಂದರು.

ಬಳಿಕ ಮಾತನಾಡಿದ ಲಿಯಾಂಡರ್‌, ‘ನಾನು ಟೆನ್ನಿಸ್‌ ನಿಂದ ನಿವೃತ್ತಿ ಪಡೆದಿದ್ದೇನೆ. ಜನರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯವನ್ನು(Politics) ಪ್ರವೇಶಿಸುತ್ತಿದ್ದು ದೇಶದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತೇನೆ’ ಎಂದರು.

ಕೇಂದ್ರದಕ್ಕೆ ದಾದಾಗಿರಿಗೆ ಬಿಡಲ್ಲ

 

 ಗೋವಾ ರಾಜ್ಯಕ್ಕೆ ಮೂರು ದಿನ ಪ್ರವಾಸ ಕೈಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ನಾನು  ಸಿಎಂ ಆಗಲು ಇಲ್ಲಿ ಬಂದಿಲ್ಲ, ಆದರೆ ಕೇಂದ್ರಕ್ಕೆ ದಾದಾಗಿರಿ ಮಾಡಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ.  ಗುರುವಾರ ಸಂಜೆ ಮಮತಾ ಬ್ಯಾನರ್ಜಿ ಗೋವಾ ತಲುಪಿದ್ದರು.

"ಮೀನು ಮತ್ತು ಫುಟ್ಬಾಲ್" ಬಂಗಾಳ ಮತ್ತು ಗೋವಾವನ್ನು ಸಂಪರ್ಕಿಸುವ ಎರಡು ವಿಷಯಗಳಾಗಿವೆ ಎಂದು ಹೇಳಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಕೇಂದ್ರದ "ದಾದಾಗಿರಿ" ನಡೆಯಲು ಬಿಡುವುದಿಲ್ಲ ಎಂದು ಹೇಳಿದರು. ಆದಾಗ್ಯೂ, ಅಧಿಕಾರ ಹಿಡಿಯಲು ಅಥವಾ ಗೋವಾದ ಮುಖ್ಯಮಂತ್ರಿಯಾಗಲು ರಾಜ್ಯಕ್ಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. "ದೆಲ್ಲಿಚಿ ದಾದಾಗಿರಿ ಅನಿಕ್ ನಾಕಾ (ಇನ್ನು ಮುಂದೆ ದೆಹಲಿಯಿಂದ ದಬ್ಬಾಳಿಕೆ ಬೇಡ). ನಾನು ಹೊರಗಿನವಳಲ್ಲ, ಗೋವಾದ ಸಿಎಂ ಆಗಲು ಬಯಸುವುದಿಲ್ಲ" ಎಂದು ಕೊಂಕಣ ಭಾಷೆಯಲ್ಲಿ ಪಣಜಿಯಲ್ಲಿ  ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ.

ಮಮತಾಗೆ ಬಿಜೆಪಿ ವಿರೋಧ!

"ನಾನು ಭಾರತೀಯಳು, ನಾನು ಎಲ್ಲಿ ಬೇಕಾದರೂ ಹೋಗಬಹುದು, ಬಂಗಾಳ ನನ್ನ ತಾಯಿನಾಡು, ಗೋವಾ ಕೂಡ ನನ್ನ ತಾಯಿನಾಡು, ನಾನು ಗೋವಾಕ್ಕೆ ಬರುತ್ತೇನೆ, ಅವರು ನನ್ನ ಪೋಸ್ಟರ್‌ಗಳನ್ನು ಹಾಳು ಮಾಡುತ್ತಾರೆ, ಅವರು (ಬಿಜೆಪಿ) ಮಾನಸಿಕ ಅರೋಗ್ಯ ಸರಿಯಿಲ್ಲ, ಅವರು ನನಗೆ ಕಪ್ಪು ಬಾವುಟ ತೋರಿಸಿದರು ಆದರೆ ನಾನು ನಮಸ್ತೆ ಹೇಳಿದೆ," ಎಂದು ಮಮತಾ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಭೇಟಿಗೆ ಮುನ್ನ ಗೋವಾದಲ್ಲಿ ಅವರ ಚಿತ್ರಗಳನ್ನು ಹೊಂದಿರುವ ಹಲವಾರು ಹೋರ್ಡಿಂಗ್‌ಗಳನ್ನು ವಿರೂಪಗೊಳಿಸಲಾಗಿತ್ತು. ಇದು ಬಿಜೆಪಿ ಮತ್ತು ಟಿಎಂಸಿ  ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.

ಬಿಜೆಪಿ ಸರ್ಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ: ಮಾಜಿ ರಾಜ್ಯಪಾಲರ ಆರೋಪ

ಮಮತಾ ಬ್ಯಾನರ್ಜಿ ಅವರೊಂದಿಗೆ ಗೋವಾದ ಮಾಜಿ ಮುಖ್ಯಮಂತ್ರಿ  ಲುಯಿಜಿನೊ ಫಲೆರೊ, ಟಿಎಂಸಿ ಸಂಸದ ಡೆರೆಕ್ ಒಬ್ರೇನ್ ಮತ್ತು ಸ್ಥಳೀಯ ನಾಯಕರು ಮಮತಾ ಜತೆಯಾಗಿದ್ದಾರೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಗೋವಾದಲ್ಲಿ 40 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಟಿ ನಫೀಸಾ ಅಲಿ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರ್ಪಡೆ ಗೋವಾದಲ್ಲಿ ಮುಂದಿನ ವರ್ಷದ ಚುನಾವಣೆಗೆ ಮುನ್ನ ಪಕ್ಷಕ್ಕೆ ಉತ್ತಮ ಬೆಳವಣಿಯಾಗಿದೆ. ಈ ಬಗ್ಗೆ ತೃಣಮೂಲ ಕಾಂಗ್ರೇಸ್‌ ಟ್ವೀಟ್‌ ಕೂಡ ಮಾಡಿದೆ.

ರಾಗಾಗೆ ಮೋದಿ ಶಕ್ತಿಯ ಅಂದಾಜಿಲ್ಲ!

ಇತ್ತೀಚೆಗೆ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಬಿಜೆಪಿಯ ಬಗ್ಗೆ ಗೋವಾದಲ್ಲಿ ಮಾತನಾಡಿದ್ದರು. ಭಾರತೀಯ ಜನತಾ ಪಕ್ಷ (BJP) ಮುಂದಿನ ದಶಕಗಳವರೆಗೆ (Decade) ಭಾರತದ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿ ಉಳಿಯಲಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದರು. ಬಿಜೆಪಿಯು ಹಲವಾರು ದಶಕಗಳ ಕಾಲ ಹೋರಾಡಬೇಕಾಗುತ್ತದೆ ಎಂದು ಕಿಶೋರ್ ನಂಬಿದ್ದಾರೆ. ಕಿಶೋರ್ ಮಾತನಾಡಿ, 40 ವರ್ಷಗಳ ಹಿಂದೆ ಕಾಂಗ್ರೆಸ್ (Congress) ಹೇಗೆ ಅಧಿಕಾರದ ಕೇಂದ್ರವಾಗಿತ್ತು, ಅದೇ ರೀತಿ ಬಿಜೆಪಿ ಸೋತರೂ ಗೆದ್ದರೂ ಅಧಿಕಾರದ ಕೇಂದ್ರದಲ್ಲಿ ಉಳಿಯುತ್ತದೆ. ಒಮ್ಮೆ ರಾಷ್ಟ್ರಮಟ್ಟದಲ್ಲಿ ಶೇ.30ರಷ್ಟು ಮತ ಪಡೆದರೆ ರಾಜಕೀಯ ಚಿತ್ರಣದಿಂದ ಅಷ್ಟು ಬೇಗ ದೂರ ಸರಿಯಲು ಆಗುವುದಿಲ್ಲ ಎಂದಿದ್ದರು.

ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳ ಜೊತೆ ಅ.23ಕ್ಕೆ ಮೋದಿ ಸಂವಾದ!

ಗೋವಾ ಮ್ಯೂಸಿಯಂನಲ್ಲಿ (Goa Musium) ಮಾತನಾಡಿದ ಪ್ರಶಾಂತ್ ಕಿಶೋರ್ "ಜನರು ಮೋದಿ (ಪ್ರಧಾನಿ ನರೇಂದ್ರ ಮೋದಿ) ಮೇಲೆ ಕೋಪಗೊಂಡಿದ್ದಾರೆ ಮತ್ತು ಅವರನ್ನು ಅಧಿಕಾರದಿಂದ ಹೊರಹಾಕುತ್ತಾರೆ ಎಂಬ ಬಲೆಗೆ ಬೀಳಬೇಡಿ" ಎಂದಿದ್ದರು. ಜನರು ಮೋದಿಯನ್ನು ಅಧಿಕಾರದಿಂದ ಹೊರಹಾಕಬಹುದು ಆದರೆ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ. ಮುಂದಿನ ಹಲವಾರು ದಶಕಗಳವರೆಗೆ ನೀವು ಈ ಪಕ್ಷದ ವಿರುದ್ಧ ಹೋರಾಡಬೇಕಾಗುತ್ತದೆ ಎಂದು ಪ್ರಶಾಂತ್‌ ಹೇಳಿದ್ದರು.

Follow Us:
Download App:
  • android
  • ios