ನವ​ದೆ​ಹ​ಲಿ[ಅ.09]: ಅ.15ರಿಂದ 20ರ ವರೆಗೆ ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ​ಯಲ್ಲಿ ಸ್ಪರ್ಧಿ​ಸ​ಲಿ​ರುವ ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ ವೀಸಾ ಸಮಸ್ಯೆ ಎದು​ರಿ​ಸುತ್ತಿದ್ದು ಕೇಂದ್ರ ಗೃಹ ಸಚಿ​ವಾ​ಲಯ ಅಧಿ​ಕಾರಿ ಸಂಜೀವ್‌ ಗುಪ್ತಾ ಸೋಮ​ವಾರ ತಕ್ಷ​ಣವೇ ನೆರ​ವಾ​ಗಿ​ದ್ದಾ​ರೆ. 

T20I ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ ಟಾಪ್ 10 ಕ್ರಿಕೆಟಿಗರಿವರು..

ವೀಸಾ ಅರ್ಜಿ​ ಸಲ್ಲಿ​ಸುವಾಗ ಅರ್ಜಿ​ದಾ​ರರು ಸಂದರ್ಶನದಲ್ಲಿ ಉಪಸ್ಥಿತರಿರಬೇಕು ಎಂಬ ಡೆನ್ಮಾರ್ಕ್’ನ ಭಾರತ ರಾಯ​ಭಾರ ಕಚೇ​ರಿಯ ಹೊಸ ನಿಯ​ಮ​ ಸಮಸ್ಯೆಗೆ ಕಾರ​ಣ​ವಾ​ಯಿತು. ‘ಹೈ​ದ​ರಾ​ಬಾ​ದ್‌​ನಲ್ಲಿ ವೀಸಾ ಪ್ರಕ್ರಿಯೆ ಆರಂಭ​ವಾ​ಗಿದೆ. ರಜಾ ದಿನದಲ್ಲೂ ಅಸಾ​ಧ್ಯ​ವಾ​ಗಿ​ದ್ದ ಕೆಲಸ ಸಾಧಿ​ಸಿದ ಸಂಜೀವ್‌, ಡೆನ್ಮಾ​ರ್ಕ್​ನ​ಲ್ಲಿ​ರುವ ಭಾರತ ರಾಯ​ಭಾರ ಕಚೇರಿ ಹಾಗೂ ವಿಎ​ಫ್‌​ಎಸ್‌ ಗ್ಲೋಬ​ಲ್‌ಗೆ ಸೈನಾ ಕೃತ​ಜ್ಞ​ತೆ​ ಹೇಳಿದ್ದಾರೆ. ಶುಕ್ರ​ವಾರ ಪ್ರಯಾ​ಣಕ್ಕೆ ವೀಸಾ ಲಭ್ಯ​ವಾ​ಗುವ ನಿರೀ​ಕ್ಷೆ​ಯಿ​ದೆ’ ಎಂದು ಸೈನಾ ಟ್ವೀಟ್‌ ಮಾಡಿದ​ರು.

ಸೈನಾ ನೆಹ್ವಾಲ್ ಪ್ರಸ್ತುತ 8ನೇ ಶ್ರೇಯಾಂಕ ಹೊಂದಿದ್ದು, ಕಳೆದ ವರ್ಷ ನಡೆದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಇದೀಗ ಸೈನಾ ಮೊದಲ ಸುತ್ತಿನಲ್ಲಿ ಜಪಾನಿನ ಸಯಾಕಾ ತಕಹಾಸಿ ಅವರನ್ನು ಎದುರಿಸಲಿದ್ದಾರೆ.

ಅಶ್ವಿನ್, ಜಡೇಜಾಗೆ ಮೊದಲ ಆದ್ಯತೆ; ವರಸೆ ಬದಲಿಸಿದ ಕೊಹ್ಲಿ!

ಇನ್ನು ಸೈನಾ ಸಹಪಾಠಿ ಸಿಂಧು ಸಹಾ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಹಾಗೂ ಬಿ. ಸಾಯಿ ಪ್ರಣೀತ್ ಇತ್ತೀಚೆಗಷ್ಟೇ ಮುಕ್ತಾಯವಾದ ಕೊರಿಯಾ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡಿದ್ದರು.