ಅಶ್ವಿನ್, ಜಡೇಜಾಗೆ ಮೊದಲ ಆದ್ಯತೆ; ವರಸೆ ಬದಲಿಸಿದ ಕೊಹ್ಲಿ!
ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್‌ಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಹಿರಿಯ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾರನ್ನು ಕಡೆಗಣಿಸಲಾಗಿತ್ತು. ಇದೀಗ ವರಸೆ ಬದಲಿಸಿರುವ ಕೊಹ್ಲಿ, ಅಶ್ವಿನ್ ಹಾಗೂ ಜಡೇಜಾ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ.
ಪುಣೆ(ಅ.09): ಟೀಂ ಇಂಡಿಯಾ ನಿಗದಿತ ಓವರ್ ಕ್ರಿಕೆಟ್‌ನಿಂದ ಸ್ಪಿನ್ನರ್ ಆರ್ ಅಶ್ವಿನ್‌ನ್ನು ದೂರ ಇಡಲಾಗಿದೆ. ರವೀಂದ್ರ ಜಡೇಜಾ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಈ ಸ್ಟಾರ್ ಸ್ಪಿನ್ನರ್‌ಗಳನ್ನು ಟೆಸ್ಟ್ ಮಾದರಿಯಿಂದಲೂ ಹೊರಗಿಡುವ ಪ್ರಯತ್ನಗಳೂ ನಡೆದಿದೆ. ವಿಂಡೀಸ್ ಪ್ರವಾಸದಲ್ಲಿ ಅಶ್ವಿನ್ ಒಂದು ಪಂದ್ಯ ಆಡಿಲ್ಲ. ಆದರೆ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಹಾಗೂ ಜಡೇಜಾ ಮೋಡಿಗೆ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಬಳಿಕ ಕೊಹ್ಲಿ ತಮ್ಮ ವರಸೆ ಬದಲಿಸಿದ್ದಾರೆ.
ಇದನ್ನೂ ಓದಿ: ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಹಿಂದಿಕ್ಕಿ ಕ್ಷಮೆ ಕೇಳಿದ ನೆದರ್ಲೆಂಡ್ ಕ್ರಿಕೆಟಿಗ!
ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ನೆಚ್ಚಿಕೊಂಡಿದ್ದ ಕೊಹ್ಲಿಗೆ, ಇದೀಗ ಮತ್ತದೇ ಹಳೇ ಹಾಗೂ ಅನುಭವಿ ಸ್ಪಿನ್ನರ್‌ಗಳೇ ಬೇಕಾಗಿದ್ದಾರೆ. ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಥಾನವನ್ನು ಕುಲ್ದೀಪ್ ಹಾಗೂ ಚಹಾಲ್‌ಗೆ ನೀಡಲಾಯಿತು. ಟೆಸ್ಟ್ ಮಾದರಿಯಲ್ಲೂ ಈ ಪ್ರಯತ್ನ ನಡೆಯಿತು. ಆದರೆ ಫಲ ನೀಡಲಿಲ್ಲ. ಇದೀಗ ಕೊಹ್ಲಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾಗೆ ನಮ್ಮ ಮೊದಲ ಆದ್ಯತೆ. ಇವರೇ ನಮ್ಮ ಸ್ಪಿನ್ನರ್ಸ್ ಎಂದಿದ್ದಾರೆ.
ಇದನ್ನೂ ಓದಿ: ಟ್ಯಾಟೂ ಅಭಿಮಾನಿಯ ಮೆಚ್ಚಿ ಅಪ್ಪಿದ ಕೊಹ್ಲಿ!
ಈ ಹಿಂದೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕೆಲ ಬದಲಾವಣೆ ಅನಿವಾರ್ಯ ಎಂದು ಅಶ್ವಿನ್ ಹಾಗೂ ಜಡೇಜಾಗೆ ಕೊಕ್ ನೀಡಲಾಗಿತ್ತು. ಆದರೆ ಕುಲ್ದೀಪ್, ಚಹಾಲ್ ಪರ್ಫಾಮೆನ್ಸ್ ಕಳೆಗುಂದಿದ ಬೆನ್ನಲ್ಲೇ, ಅಶ್ವಿನ್ ಜಡ್ಡು ಜೋಡಿ ಸಿಕ್ಕ ಅವಕಾಶದಲ್ಲಿ ದಿಟ್ಟ ಹೋರಾಟ ನೀಡಿ ಮಿಂಚಿದ್ದಾರೆ. ಇದೀಗ ಭಾರತದ ಕಂಡೀಷನ್‌ನಲ್ಲಿ ಅಶ್ವಿನ್ ಹಾಗೂ ಜಡೇಜಾಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 8 ವಿಕೆಟ್ ಕಬಳಿಸಿದರೆ, ಜಡೇಜಾಾ 6 ವಿಕೆಟ್ ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಜಡೇಜಾ 70 ರನ್ ಸಿಡಿಸಿದ್ದರು. ಇವರಿಬ್ಬರ ಪ್ರದರ್ಶನದಿಂದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.