ಡೇವಿಸ್ ಕಪ್: ತಟಸ್ಥ ಸ್ಥಳದಲ್ಲಿ ಇಂಡೋ-ಪಾಕ್ ಟೆನಿಸ್ ಪಂದ್ಯ
ಡೇವಿಸ್ ಕಪ್ ಈ ಬಾರಿ ತಟಸ್ಥ ಸ್ಥಳದಲ್ಲಿ ನಡೆಯುವುದು ಕೊನೆಗೂ ಅಂತಿಮವಾಗಿದೆ. ಆದರೆ ಪಾಕಿಸ್ತಾನದಿಂದ ಹೊರಗೆ ಎಲ್ಲಿ ನಡೆಯಲಿದೆ ಎನ್ನುವುದು ಇನ್ನು 5 ದಿನದಲ್ಲಿ ಖಚಿತವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ನ.05]: ಭಾರತ ಹಾಗೂ ಪಾಕಿಸ್ತಾನ ನಡುವೆ ಇದೇ ತಿಂಗಳು 29, 30ರಂದು ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಡೇವಿಸ್ ಕಪ್ ಪಂದ್ಯವನ್ನು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಿದೆ.
ಡೇವಿಸ್ ಕಪ್: ಪಾಕ್‌ಗೆ ತೆರಳಲಿದ್ದಾರೆ ಪೇಸ್!
5 ದಿನಗಳೊಳಗೆ ಹೊಸ ಸ್ಥಳವನ್ನು ತಿಳಿಸುವಂತೆ ಪಾಕಿಸ್ತಾನ ಟೆನಿಸ್ ಫೆಡರೇಷನ್ಗೆ ಸೂಚಿಸಲಾಗಿದೆ. ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ತಂಡ ಒಪ್ಪದ ಕಾರಣ, ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿತ್ತು. ಆದರೆ ಐಟಿಎಫ್‌ನಿಂದ ನಿಷೇಧ ಶಿಕ್ಷೆ ಎದುರಾಗ ಭೀತಿಯಿಂದ, ಪ್ರಮುಖ ಆಟಗಾರರು ಹಿಂದೆ ಸರಿದರೂ ದ್ವಿತೀಯ ದರ್ಜೆ ತಂಡ ಕಳುಹಿಸಲು ಅಖಿಲ ಭಾರತ ಟೆನಿಸ್ ಫೆಡರೇಷನ್ ನಿರ್ಧರಿಸಿತು.
ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31
ಸೋಮವಾರವಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್ ರಾಜ್‌ಪಾಲ್‌ರನ್ನು ಭಾರತ ತಂಡದ ಆಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಇದೀಗ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಯುವ ಕಾರಣ, ಭಾರತ ಬಲಿಷ್ಠ ತಂಡದೊಂದಿಗೆ ಆಡಲು ನಿರ್ಧರಿಸುವ ಸಾಧ್ಯತೆ ಇದೆ.
ಡೇವಿಸ್ ಕಪ್ ತಂಡಕ್ಕೆ ಆಯ್ಕೆಗಾರನೇ ನಾಯಕ!
ಪಾಕಿಸ್ತಾನ ತೆರಳಲಿರುವ ಭಾರತ ಡೇವಿಸ್ ಕಪ್ ಟೆನಿಸ್ ತಂಡಕ್ಕೆ ಮಾಜಿ ಆಟಗಾರ, ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್ ರಾಜ್‌ಪಾಲ್‌ರನ್ನು ಆಡದ ನಾಯಕನನ್ನಾಗಿ ಅಖಿಲ ಭಾರತ ಟೆನಿಸ್ ಫೆಡರೇಷನ್ (ಎಐಟಿಎ) ನೇಮಿಸಿದೆ. ಮಹೇಶ್ ಭೂಪತಿ, ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ ಕಾರಣ ಅವರ ಬದಲಿಗೆ ರೋಹಿತ್‌ಗೆ ತಂಡ ಜವಾಬ್ದಾರಿ ವಹಿಸಲಾಗಿದೆ.