ನವದೆಹಲಿ(ಅ.26): ಟೆನಿಸ್‌ ತಾರೆ ಲಿಯಾಂಡರ್‌ ಪೇಸ್‌ ವರ್ಷದ ಬಳಿಕ ಭಾರತ ಡೇವಿಸ್‌ ಕಪ್‌ ತಂಡಕ್ಕೆ ಮರಳಿದ್ದಾರೆ. ನವೆಂಬರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಪ್ರಮುಖ ಆಟಗಾರರು ಪಾಕಿಸ್ತಾ​ನಕ್ಕೆ ತೆರ​ಳಲು ನಿರಾ​ಕ​ರಿ​ಸಿದ್ದರೂ, ಪೇಸ್‌ ತಾವು ಪಂದ್ಯಕ್ಕೆ ಲಭ್ಯ​ರಿ​ರು​ವು​ದಾಗಿ ತಿಳಿ​ಸಿ​ದ್ದಾರೆ.

ಡೇವಿಸ್‌ ಕಪ್‌: ಪಾಕ್‌ಗೆ ತಂಡ ಕಳು​ಹಿ​ಸ​ಲಿದೆ ಭಾರ​ತ!

‘ಅಂತಾರಾಷ್ಟ್ರೀಯ ಟೆನಿಸ್‌ ಸಂಸ್ಥೆ (ಐಟಿಎಫ್‌) ವೀಸಾ ಪ್ರಕ್ರಿಯೆ ಜಾರಿಗೊಳಿಸಲು ಹೇಳಿದೆ. ಲಿಯಾಂಡರ್‌ ಸಹಿತ ಕೆಲವರ ಹೆಸರು ನೀಡಿದ್ದೇವೆ. ಹುಲ್ಲು ಅಂಕ​ಣ​ದಲ್ಲಿ ಪಂದ್ಯಗಳು ನಡೆಯಲಿದ್ದು, ಪೇಸ್‌ ಅಸಾಧಾರಣ ದಾಖಲೆ ಹೊಂದಿದ್ದಾರೆ. ತಂಡ​ವನ್ನು ಶೀಘ್ರ ಪ್ರಕ​ಟಿ​ಸ​ಲಾ​ಗು​ತ್ತದೆ’ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಕಾರ್ಯದರ್ಶಿ ಹಿರಣ್ಮಯ್‌ ಚಟರ್ಜಿ ತಿಳಿಸಿದ್ದಾರೆ.

ಭಾರತ-ಪಾಕ್‌ ಟೆನಿಸ್‌: ನ.4ರಂದು ಭದ್ರತಾ ಪರಿಶೀಲನೆ

ಡೇವಿಸ್ ಕಪ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಅತಿಹೆಚ್ಚು ಗೆಲುವು ಕಂಡ ಟೆನಿಸ್ ಆಟಗಾರ ಎನ್ನುವ ದಾಖಲೆ ಹೊಂದಿರುವ ಲಿಯಾಂಡರ್ ಪೇಸ್ ಭಾರತಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿತ್ತಿದ್ದಾರೆ.
ನಾನ್ ಪ್ಲೇಯಿಂಗ್ ಕ್ಯಾಪ್ಟನ್ ಮಹೇಶ್ ಭೂಪತಿ ಸೇರಿದಂತೆ, ರೋಹನ್ ಬೋಪಣ್ಣ, ರಾಮ್’ಕುಮಾರ್ ರಮಾನಾಥನ್, ಸುಮಿತ್ ನಗಾಲ್, ಸಸಿ ಕುಮಾರ್ ಮುಕುಂದ್ ಸೇರಿದಂತೆ ಹಲವರು ಇಸ್ಲಾಮಾಬಾದ್’ಗೆ ತೆರಳಲು ನಿರಾಕರಿಸಿದ್ದರು. ಇನ್ನು ಭಾರತದ ಸಿಂಗಲ್ಸ್ ಅಗ್ರಶ್ರೇಯಾಂಕಿತ ಪ್ರಜ್ಞೇಶ್ ಗುಣೇಶ್ವರನ್, ಡಬಲ್ಸ್ ಆಟಗಾರ ದಿವಿಜ್ ಶರಣ್ ಸಹ ಇಸ್ಲಾಮಾಬಾದ್’ಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.

ಭಾರತ-ಪಾಕ್‌ ಡೇವಿಸ್‌ ಕಪ್‌ ಪಂದ್ಯ ಮುಂದಕ್ಕೆ

ಪಂದ್ಯಾವಳಿಯ ಮೊದಲ ದಿನ ಪ್ರಜ್ಞೇಶ್ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಇನ್ನು ನವೆಂಬರ್ 23ರಂದು ದಿವಿಜ್ ಶರಣ್ ಆರತಕ್ಷತೆ ಇದೆ. ಅವರು 2 ವಾರ ವಿಶ್ರಾಂತಿ ಬಯಸಿದ್ದಾರೆ ಎಂದು ಎಐಟಿಎ ಕಾರ್ಯದರ್ಶಿ ಹಿರಣ್ಮಯ್‌ ಚಟರ್ಜಿ ಹೇಳಿದ್ದಾರೆ.