ಬೆಂಗಳೂರು[ನ.05]: ಟೀಂ ಇಂಡಿಯಾ ನಾಯಕ, ರೆಕಾರ್ಡ್ ಬ್ರೇಕರ್ ವಿರಾಟ್ ಕೊಹ್ಲಿ ಇಂದು[ನವೆಂಬರ್ 5] 31ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪ್ರತಿಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೆಯುವ ಕೊಹ್ಲಿ, ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಸಿಸಿಐ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ ಚೊಚ್ಚಲ ಶತಕದ ವಿಡಿಯೋದೊಂದಿಗೆ ಶುಭಕೋರಿದೆ.

 

2008ರಲ್ಲಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದ ವಿರಾಟ್ ಕೊಹ್ಲಿ, ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ನಾಯಕನಾಗಿ, ಒಬ್ಬ ಬ್ಯಾಟ್ಸ್’ಮನ್ ಆಗಿ ಆಕ್ರಮಣಕಾರಿ ಮನೋಭಾವದ ಮೂಲಕ ಎಲ್ಲಾ ಮೂರು ಮಾದರಿಯ ಕ್ರಿಕೆಟ್’ನಲ್ಲಿ ಚಾಂಪಿಯನ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಅದು ಟಿ20 ಕ್ರಿಕೆಟ್ ಆಗಲಿ, ಟೆಸ್ಟ್ ಆಗಲಿ ಇಲ್ಲವೇ ಏಕದಿನ ಕ್ರಿಕೆಟ್ ಆಗಲಿ, ಎಲ್ಲಾ ಮಾದರಿಯ ಕ್ರಿಕೆಟ್’ನಲ್ಲೂ ಕೊಹ್ಲಿಯೇ ಕಿಂಗ್. ಒಂದು ದಶಕಗಳಿಂದಲೂ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ, ಈಗಲೂ ಅಸಂಖ್ಯಾತ ಮಂದಿಗೆ ಸ್ಫೂರ್ತಿಯ ಚಿಲುಮೆ.

IPL ಇತಿಹಾಸದಲ್ಲೇ ಹೊಸ ಪ್ರಯೋಗ: ಇನ್ಮುಂದೆ ಪವರ್ ಪ್ಲೇಯರ್ ಆಟ..?

ಏಕದಿನ ಕ್ರಿಕೆಟ್’ನಲ್ಲಿ ಅತಿವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ ಎನಿಸಿರುವ ವಿರಾಟ್ ಕೊಹ್ಲಿ, ಒಂದು ದಶಕದಲ್ಲಿ 20 ಸಾವಿರ ಅಂತಾರಾಷ್ಟ್ರೀಯ ರನ್ ಬಾರಿಸಿದ ಆಟಗಾರ ಕೂಡಾ ಹೌದು. ಇನ್ನು ಭಾರತಕ್ಕೆ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕ ಕೂಡಾ ಹೌದು.

ವಿರಾಟ್ ಕೊಹ್ಲಿ ಪದಾರ್ಪಣೆಯ ಕಿರು ಮಾಹಿತಿ:

ಏಕದಿನ ಕ್ರಿಕೆಟ್: 18/8/2008- ಶ್ರೀಲಂಕಾ ವಿರುದ್ಧ ದಂಬುಲಾ ಮೈದಾನದಲ್ಲಿ

ಟಿ20 ಕ್ರಿಕೆಟ್: 12/6/2010- ಜಿಂಬಾಬ್ವೆ ವಿರುದ್ಧ ಹಜಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ

ಟೆಸ್ಟ್ ಪದಾರ್ಪಣೆ: 20/6/2011- ವೆಸ್ಟ್ ಇಂಡೀಸ್ ವಿರುದ್ಧ ಸಬೀನಾ ಪಾರ್ಕ್ ಮೈದಾನದಲ್ಲಿ
[* ವಿಶೇಷವೆಂದರೆ ವಿರಾಟ್ ಮೂರು ಮಾದರಿಯ ಪದಾರ್ಪಣೆಯಲ್ಲಿ ವಿದೇಶಿ ನೆಲದಲ್ಲೇ ಮಾಡಿದ್ದಾರೆ]

IPL ಪದಾರ್ಪಣೆ[RCB]: 18/4/2008- KKR ವಿರುದ್ಧ ಎಂ. ಚಿನ್ನಸ್ವಾಮಿ ಮೈದಾನದಲ್ಲಿ

ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: